ನವದೆಹಲಿ (ಪಿಟಿಐ): ಸಂಸತ್ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರನ್ನು ಭಾರತಕ್ಕೆ ಮರಳುವ ವೇಳೆ ಲಂಡನ್ನ ಹೀಥ್ರೊ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಎರಡು ಗಂಟೆ ವಿಚಾರಣೆಗೆ ಒಳಪಡಿಸಿದ ಘಟನೆ ಶನಿವಾರ ನಡೆದಿದೆ.

ಹೀಥ್ರೊ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆ ವಿಚಾರಣೆ ನಡೆಸಲಾಯಿತು. ನಂತರ ಭಾರತಕ್ಕೆ ಹಿಂದಿರುಗಲು ಅನುಮತಿ ನೀಡಿದರು. ಅಡ್ಡಹೆಸರು `ಆಜಾದ್' ಇರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದರು ಎಂದು ಕೀರ್ತಿ ಅವರು ನೀಡಿರುವ ಮಾಹಿತಿಯನ್ನು ಆಜಾದ್ ಅವರ ಕಚೇರಿಯ ಸಹಾಯಕರೊಬ್ಬರು ತಿಳಿಸಿದ್ದಾರೆ.

ಆಜಾದ್ ದ್ರವ ತುಂಬಿದ ಬಾಟಲಿ ಹೊಂದಿರುವುದನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದರು ಎನ್ನಲಾಗಿದೆ. ಅದನ್ನು `ಔಷಧಿಯ ಮಿಶ್ರಣ' ಎಂದು ಕೀರ್ತಿ ತಿಳಿಸಿದರು ಎಂಬುದು ಗೊತ್ತಾಗಿದೆ. ಆದರೆ, ಈ ಘಟನೆ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.