ಭಾನುವಾರ, ಜನವರಿ 19, 2020
28 °C

ಅಣ್ಣಾ ತಂಡದ ಅಭಿಯಾನ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ  ಅಣ್ಣಾ ಹಜಾರೆ ತಂಡ ನಡೆಸಲಿರುವ ಅಭಿಯಾನ ಶನಿವಾರ ಹರಿದ್ವಾರದಿಂದ ಆರಂಭವಾಗಲಿದೆ.ಯಾವುದೇ ಪಕ್ಷದ ವಿರುದ್ಧ ಪ್ರಚಾರ ನಡೆಸುವುದಿಲ್ಲ ಎಂದು ಅಣ್ಣಾ ತಂಡ ಸಾರ್ವಜನಿಕವಾಗಿ ಈ ಮೊದಲು ಹೇಳಿಕೊಂಡಿದ್ದರೂ, ಅಭಿಯಾನಕ್ಕಾಗಿ ಮುದ್ರಿಸಿರುವ ಕರಪತ್ರಗಳಲ್ಲಿರುವ ಅಂಶಗಳು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿದ್ದು, ಬಿಜೆಪಿ ಪರ ಸ್ವಲ್ಪ ಪ್ರಮಾಣದಲ್ಲಿ ಮೃದು ಧೋರಣೆ ತಳೆದಂತೆ ಕಾಣುತ್ತಿವೆ.ಪ್ರಬಲ ಲೋಕಪಾಲ ಮಸೂದೆಯನ್ನು ಜಾರಿಗೆ ತರಲು ವಿಫಲವಾಗಿರುವುದಕ್ಕೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವ ಅಂಶಗಳು ಕರಪತ್ರಗಳಲ್ಲಿವೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಪ್ರಚಾರಕರಾಗಿರುವ ದಿಗ್ವಿಜಯ್ ಸಿಂಗ್, ವೇಣಿ ಪ್ರಸಾದ್ ವರ್ಮಾ ಸೇರಿದಂತೆ ಕೆಲವು ಮುಖಂಡರನ್ನು ಕರಪತ್ರಗಳಲ್ಲಿ ಟೀಕಿಸಲಾಗಿದೆ.

ಅಣ್ಣಾ ತಂಡವು ಗೃಹ ಸಚಿವ ಪಿ. ಚಿದಂಬರಂ ಅವರನ್ನೂ ಟೀಕಿಸಿದೆ.

ಪ್ರತಿಕ್ರಿಯಿಸಿ (+)