ದಾವಣಗೆರೆ: ಅತ್ಯಾಚಾರಕ್ಕೆ ಒಳಗಾದ ಬಿಸಿಎ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಘಟನೆ ಕುರಿತು ಪೊಲೀಸರಿಗೆ ಸೋಮವಾರ ಸಮಗ್ರ ಮಾಹಿತಿ ನೀಡಿದ್ದಾಳೆ. ಈ ಮಧ್ಯೆ ಅತ್ಯಾಚಾರ ಪ್ರಕರಣದ ವೈದ್ಯಕೀಯ ವರದಿ ಸಹ ಬಂದಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

‘ಘಟನಾ ಸ್ಥಳದಲ್ಲಿ ಒಂದು ಲೈಟರ್ ದೊರತಿದೆ. ಅತ್ಯಾಚಾರ ಎಸಗಿದ ಬಳಿಕ ಲೈಟರ್ನಿಂದ ಸುಡಲಾಗಿದೆ. ಇದರಿಂದ ತೊಡೆಯ ಭಾಗದಲ್ಲಿ ದೊಡ್ಡ ಪ್ರಮಾಣದ ಸುಟ್ಟು ಗಾಯಗಳಾಗಿವೆ. ಅತ್ಯಾಚಾರದ ನಂತರ ಆಕೆಗೆ ಚಿತ್ರಹಿಂಸೆ ನೀಡಲಾಗಿದೆ. ಜತೆಗೆ, ಆಕೆಯ ಮೊಬೈಲ್ ಕಸಿದುಕೊಂಡು ಪೊದೆಯಲ್ಲಿ ಬಿಸಾಡಿದ್ದು, ಅದನ್ನೂ ವಶಕ್ಕೆ ಪಡೆಯಲಾಗಿದೆ. ಕಲ್ಲಿನಿಂದ ಹಲ್ಲೆ ನಡೆಸಿದ ಪರಿಣಾಮ ವಿದ್ಯಾರ್ಥಿನಿಯ 3 ಹಲ್ಲುಗಳು ಮುರಿದು ಹೋಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಹಲ್ಲೆ ನಡೆಸಿದ ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟುಹೋದೆ. ಕೆಲ ಸಮಯದ ಬಳಿಕ ಮತ್ತೊಬ್ಬ ಸ್ನೇಹಿತನೊಂದಿಗೆ ಸ್ಥಳಕ್ಕೆ ಬಂದು ಬೈಕ್ನಲ್ಲಿ ಕರೆದೊಯ್ಯಲು ಪ್ರಯತ್ನಿಸಿದೆ. ಅದಕ್ಕೆ ಒಪ್ಪಲಿಲ್ಲ. ಕೂಗಿಕೊಂಡ ಬಳಿಕ ಅಲ್ಲಿಯೇ ಬಿಟ್ಟು ತೆರಳಿದೆ’ ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ.

ಆರೋಪಿ ಬಾಲ ನ್ಯಾಯ ಮಂಡಳಿಗೆ
ಘಟನೆಗೆ ಸಂಬಂಧಿಸಿದಂತೆ ಬಂಧಿಸಿರುವ ಆರೋಪಿಯು ಬಾಲಕ ಎಂದು ಆತನ ಕುಟುಂಬದವರು ಪೂರಕ ದಾಖಲೆ ಸಲ್ಲಿಸಿದ್ದು, ಆತನನ್ನು ಇಲ್ಲಿನ ಬಾಲನ್ಯಾಯ ಮಂಡಳಿಯ ಎದುರು ಸೋಮವಾರ ಹಾಜರು ಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.