ದಾವಣಗೆರೆ: 2011ರ ಕೆಪಿಎಸ್ಸಿ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಲಾದ ಅಧಿಸೂಚನೆ ವಾಪಸ್ ಪಡೆದು ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿರುವುದಕ್ಕೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿರುವುದನ್ನು ಸಹಿಸದ ವೈದಿಕ ಮನಸ್ಸುಗಳು ಈ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು.

ಶಿವಯೋಗಾಶ್ರಮದಲ್ಲಿ ಬಸವ ಕೇಂದ್ರದ ವತಿಯಿಂದ ಭಾನುವಾರ ನಡೆದ ಸಮಾರಂಭದಲ್ಲಿ ‘ಶೂನ್ಯಪೀಠ ಅಲ್ಲಮ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ‘ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ ಯಾವಾಗಲೂ ಇದ್ದದ್ದೇ. ಪರೀಕ್ಷೆಯಲ್ಲಿ ಶೇ 5ರಷ್ಟು ಮಾತ್ರ ಭ್ರಷ್ಟಾಚಾರ ನಡೆದಿದೆ ಎಂದು ಸಿಐಡಿ ಹೇಳಿದೆ. ಬುದ್ಧಿಜೀವಿಗಳು ಇದನ್ನೇ ಜೋರಾಗಿ ಕಿರುಚಿ, ಇಡೀ ಪಟ್ಟಿಯನ್ನೇ ರದ್ದುಪಡಿಸಬೇಕು ಎನ್ನುತ್ತಿದ್ದಾರೆ. ಪರೀಕ್ಷೆಯಲ್ಲಿ ಭ್ರಷ್ಟಾಚಾರ ಮಾಡಿದವರನ್ನು ಗಲ್ಲಿಗೆ ಏರಿಸಲಿ. ನಮ್ಮದೇನೂ ಅಭ್ಯಂತರವಿಲ್ಲ. ತಪ್ಪು ಮಾಡಿದ ಶೇ 5ರಷ್ಟು ಮಂದಿಯಿಂದ ಅಮಾಯಕರಾದ ಶೇ 95ರಷ್ಟು ಮಂದಿಗೇಕೆ ಶಿಕ್ಷೆ’ ಎಂದು ಪ್ರಶ್ನಿಸಿದರು.

ಕಷ್ಟಪಟ್ಟು ಓದಿ ಪಾಸಾದ ಬಡವರನ್ನು ರಕ್ಷಿಸಬೇಕು. ಹೊಲದಲ್ಲಿ ಕಳೆ ಕೀಳಬೇಕೇ ಹೊರತು, ಬೆಳೆ ಕೀಳಬಾರದು. ಪರೀಕ್ಷೆಯಲ್ಲಿ 28 ಮುಸ್ಲಿಮರು ಪಾಸಾಗಿದ್ದಾರೆ. ಅವರು ಮತ್ತೆ ಪಾಸಾಗುತ್ತಾರೆಯೇ? ವೈದಿಕ ಮನಸ್ಸುಗಳು ಇದರ ವಿರುದ್ಧ ಪಿತೂರಿ ನಡೆಸುತ್ತಿವೆ. ಸಿ.ಆರ್.ಚಂದ್ರಶೇಖರ್, ಅನಂತಮೂರ್ತಿ ಅಂಥವರು ಮಾತನಾಡುತ್ತಾರೆ. ಎಸ್.ವಿ.ರಂಗನಾಥ್ರಂಥ ಮುಖ್ಯ ಕಾರ್ಯದರ್ಶಿ ಪಟ್ಟಿ ರದ್ದುಪಡಿಸಲು ಆದೇಶ ಮಾಡುತ್ತಾರೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಭ್ರಷ್ಟಾಚಾರ ತಾತ್ಕಾಲಿಕ; ಜಾತ್ಯಾಚಾರ ಶಾಶ್ವತ. ಇದರ ವಿರುದ್ಧ ಎಲ್ಲರೂ ಹೋರಾಡಬೇಕು. ಭ್ರಷ್ಟಾಚಾರಕ್ಕಿಂತಲೂ ಜಾತಿ ಭ್ರಷ್ಟತೆ ಕ್ರೂರ. ಜಾತಿವಾದದ ಉಪ ಉತ್ಪನ್ನವೇ ಭ್ರಷ್ಟಾಚಾರ. ಹೀಗಾಗಿ, ಜಾತಿ ಭ್ರಷ್ಟತೆ ವಿರುದ್ಧದ ಹೋರಾಟವನ್ನೂ ನಡೆಸಬೇಕು. ಜತೆಯಲ್ಲಿ ಸದಾ ಇರುತ್ತೇವೆ’ ಎಂದು ವೇದಿಕೆಯಲ್ಲಿದ್ದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಅವರಿಗೆ ಕೋರಿದರು.
ಪ್ರಶಸ್ತಿ ಹಣವನ್ನು ಅಲೆಮಾರಿ ಬುಡಕಟ್ಟು ಮಹಾಸಭಾಗೆ ನೀಡುವುದಾಗಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.