ತುಮಕೂರು: ಜಿಲ್ಲೆಯಲ್ಲಿ ಭಾರಿ ಸಂಖ್ಯೆಯಲ್ಲಿರುವ ಅನಕ್ಷರಸ್ಥ ಮತದಾರರು ಲೋಕಸಭಾ ಚುನಾವಣೆಯಲ್ಲಿ ಯಾವ ಪಾತ್ರ ವಹಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಇವರು ಮತದಾನದಿಂದ ದೂರ ಉಳಿಯಲಾರರು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕೂಡ ಈ ಮತದಾರರ ಮೇಲೆಯೇ ಕಣ್ಣು ನೆಟ್ಟಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಈ ಸಲ ಅನಕ್ಷರಸ್ಥ ಮತದಾರರ ಕಡೆಯೂ ಗಮನ ಹರಿಸಿದೆ. ಮತದಾನದ ಜಾಗೃತಿ, ಅರಿವು, ಉತ್ತಮ ಮತದಾನದ ಅವಶ್ಯಕತೆ ಮನದಟ್ಟು ಮಾಡಲು ಅನೇಕ ಕಸರತ್ತು ಆರಂಭಿಸಿದೆ. ಇದಕ್ಕಾಗಿ ಲೋಕ ಶಿಕ್ಷಣ ಇಲಾಖೆಯ ಪ್ರೇರಕರನ್ನು ಬಳಸಿಕೊಂಡಿದೆ. ಅಕ್ಷರ ಕಲಿಸುತ್ತಿರುವ ಈ ಪ್ರೇರಕರು ಇವರನ್ನು ಹೇಗೆ ಜಾಗೃತಿ ಗೊಳಿಸುತ್ತಾರೆ ಎಂಬುದರ ಮೇಲೆಯೂ ಫಲಿತಾಂಶ ನಿರ್ಧಾರವಾಗಲಿದೆ.

ಅಕ್ಷರ ಬಾರದ ಮತದಾರರ ನಿಖರ ಅಂಕಿಸಂಖ್ಯೆ ಚುನಾವಣಾ ಆಯೋಗದ ಬಳಿ ಇಲ್ಲ. ಈ ಮತದಾರರಲ್ಲಿ ಜಾಗೃತಿ ಮೂಡಿಸಬೇಕಾದ ಲೋಕ ಶಿಕ್ಷಣ ಇಲಾಖೆಯ ಬಳಿಯೂ ಇಲ್ಲ. ಹೀಗಾಗಿ ಸಂಖ್ಯೆಯನ್ನು ಜನಗಣತಿ ಆಧರಿಸಿಯೇ ಲೆಕ್ಕಾಚಾರ ಹಾಕಬೇಕಾಗಿದೆ.

2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 26.57 ಲಕ್ಷ ಜನರಿದ್ದಾರೆ. ಇವರಲ್ಲಿ ಕ್ಷೇತ್ರದ ಮತದಾರರ ಸಂಖ್ಯೆ 14.85 ಲಕ್ಷ. ಜನಗಣತಿ ಪ್ರಕಾರ ಶೇ 25ರಷ್ಟು ಮಂದಿ ಅಕ್ಷರ ಬಾರದವರು. ಇದೇ ಲೆಕ್ಕಚಾರದ ಆಧಾರದಲ್ಲಿ ಹೇಳುವುದಾದರೆ ಮತದಾರರ ಪೈಕಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಅನಕ್ಷರಸ್ಥರು ಇರಬಹುದು.

ಆದರೆ ಈ ಬಗ್ಗೆ ನಿಖರ ಅಂಕಿ ಅಂಶ ಸಂಗ್ರಹ ಮಾಡಿಲ್ಲ ಎನ್ನುತ್ತಾರೆ ಲೋಕ ಶಿಕ್ಷಣ ಇಲಾಖೆಯ ಸಹಾಯಕ ಕಾರ್ಯಕ್ರಮ ಅಧಿಕಾರಿ ಸಿದ್ದರಾಮಯ್ಯ. ಅನಕ್ಷರಸ್ಥರು ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಈಗಾಗಲೇ ಪ್ರೇರಕರಿಗೆ ತಿಳಿಸಲಾಗಿದೆ. ಮತದಾನದ ಪಟ್ಟಿಯಲ್ಲಿ ಹೆಸರು ಸೇರಿಸದ ಅನಕ್ಷರಸ್ಥರನ್ನು ಗುರುತಿಸಿ ಪಟ್ಟಿಗೆ ಸೇರಿಸುವ ಕೆಲಸವನ್ನೂ ಮಾಡಲಾಗಿದೆ ಎಂದರು.

‘ಚುನಾವಣೆಯಲ್ಲಿ ಅನಕ್ಷರಸ್ಥರು ಸವಾಲು ಕೂಡ ಆಗಿದ್ದಾರೆ. ಇವರ ಮತ ಖರೀದಿ ಸುಲಭ. ಹೀಗಾಗಿ ಮತದಾನದ ಮಹತ್ವ ಸಾರುವ ಜತೆಗೆ ಚರ್ಚೆ, ಸಾಂಸ್ಕೃತಿಕ ಚಟುವಟಿಕೆ ನಡೆಸುವ ಮೂಲಕ ಅವರಲ್ಲಿ ತಿಳಿವಳಿಕೆ ಹಾಗೂ ಮತದಾನದ ಆಮಿಷಗಳಿಂದ ದೂರ ಉಳಿಯಲು ಅರಿವು ಮೂಡಿಸಲಾಗುತ್ತಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಆಮಿಷ ನಿರಾಕರಿಸುವಂತೆ ಹಾಗೂ ಇಂಥ ಘಟನೆಗಳು ನಡೆದ್ದಲ್ಲಿ ದೂರು ನೀಡುವಂತೆಯೂ ಅವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಚುನಾವಣಾ ಆಯೋಗದ ‘ಸ್ವೀಪ್’ ಸಮಿತಿ ಅಧ್ಯಕ್ಷ ಕೆ.ಎನ್.ಗೋವಿಂದರಾಜು ತಿಳಿಸಿದರು.

ಜಿಲ್ಲೆಯ ಕುಣಿಗಲ್, ಪಾವಗಡ, ಕೊರಟಗೆರೆ, ಮಧುಗಿರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅನಕ್ಷರಸ್ಥರು ಇದ್ದಾರೆ. ಶಿರಾದಲ್ಲಿ ಶೇ 34ರಷ್ಟು, ಕುಣಿಗಲ್ ಶೇ 32, ಮಧುಗಿರಿ ಶೇ 31 ಹಾಗೂ ಪಾವಗಡ ತಾಲ್ಲೂಕಿನಲ್ಲಿ ಶೇ 36ರಷ್ಟು ಅನಕ್ಷರಸ್ಥರಿದ್ದಾರೆ. ಹೀಗಾಗಿ ಈ ತಾಲ್ಲೂಕುಗಳಲ್ಲಿ ಮತಬೇಟೆ ತಡೆಯುವುದು ಆಯೋಗಕ್ಕೆ ಕಠಿಣ ಸವಾಲು ಕೂಡ ಆಗಿದೆ.

ಅಕ್ಷರ ಬಾರದವರು
ರಾಜಧಾನಿಗೆ ಕೂಗಳತೆ ದೂರದಲ್ಲಿರುವ ಜಿಲ್ಲೆ ಅನಕ್ಷರಸ್ಥರ ಬೀಡಾಗಿದೆ. ಜಿಲ್ಲೆಯನ್ನು ಸಂಪೂರ್ಣ ಸಾಕ್ಷರರನ್ನಾಗಿ ಮಾಡಲು ಸಾಧ್ಯವಾಗಿಲ್ಲ.

2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಆರೂವರೆ ಲಕ್ಷಕ್ಕೂ ಅಧಿಕ ಮಂದಿ ಅನಕ್ಷ ರಸ್ಥರಿದ್ದಾರೆ. ಮಧುಗಿರಿ, ಪಾವಗಡ, ಕುಣಿಗಲ್, ಶಿರಾ ತಾಲ್ಲೂಕಿನಲ್ಲಿ ಹೆಚ್ಚು ಜನರಿದ್ದಾರೆ.

ಪುರುಷರಿಗಿಂತ ಅಕ್ಷರ ಬಾರದ ಮಹಿಳೆಯರೇ ಹೆಚ್ಚಿದ್ದಾರೆ. ಕುಣಿಗಲ್ ತಾಲ್ಲೂಕಿನ ಗ್ರಾಮಗಳಲ್ಲಿ 100 ಮಹಿಳೆಯರಲ್ಲಿ 45 ಮಹಿಳೆಯರಿಗೆ ಅ,ಆ, ಇ, ಈ ಬರುತ್ತಿಲ್ಲ!. ಪಾವಗಡ ತಾಲ್ಲೂಕಿನಲ್ಲಿ ಈ ಸಂಖ್ಯೆ 46ರಷ್ಟು ಇದೆ. ಮಧುಗಿರಿ ತಾಲ್ಲೂಕಿನಲ್ಲಿ 100ಕ್ಕೆ 43 ಮಹಿಳೆಯರು, ಶಿರಾದಲ್ಲಿ 41 ಮಹಿಳೆಯರು ಹೆಬ್ಬೆಟ್ಟಿನ ಮಹಿಳೆಯರಾಗಿದ್ದಾರೆ.

ಅನಕ್ಷರಸ್ಥರು ಚರಿತ್ರೆ ಕಟ್ಟಿದ ಜನ
ತುಮಕೂರು: ಅನಕ್ಷರಸ್ಥ ಮತದಾರರನ್ನು ಸಶಕ್ತ ರಾಜಕಾರಣ-ದಲ್ಲಿ ಒಂದು ಹೊರೆ ಎಂದು ಇತ್ತೀಚೆಗಷ್ಟೇ ತಿಳಿಯಲಾಗುತ್ತಿದೆ. ಇವರನ್ನು ಸುಲಭವಾಗಿ ಖರೀದಿಸಬಹುದು ಎಂದು ನಂಬಿದ್ದೇವೆ. ಆದರೆ ಇದೇ ಅನಕ್ಷರಸ್ಥ ಭಾರತೀಯನೇ ಚರಿತ್ರೆ ನಿರ್ಮಿಸಿದ್ದಾನೆ ಎಂಬುದನ್ನು ಮರೆಯುತ್ತೇವೆ.

ಇದೇ ಅನಕ್ಷರಸ್ಥ ಭಾರತೀಯರನ್ನು ಬೆನ್ನಿಗೆ ಕಟ್ಟಿಕೊಂಡು ಬ್ರಿಟಿಷ್ ಪ್ರಭುತ್ವವನ್ನು ಗಾಂಧಿ ಉರುಳಿಸಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರತಿ ಚುನಾವಣೆಯೂ ಪವಾಡ ಮಾಡಿದೆ. ಈ ಪವಾಡ ಮಾಡಿದವರು ಈ ಅದೃಶ್ಯ ಭಾರತೀಯರು. ಇವರು ಈ ಚುನಾವಣೆಯಲ್ಲಿ ಉದ್ದೇಶ ಪೂರ್ವಕ ಹೆರಲಾಗಿರುವ ಸಾರ್ವಜನಿಕ ಸಮ್ಮತಿ ಸನ್ನಿಗೆ ಒಳಗಾಗುವುದಿಲ್ಲ. ಹೀಗಾಗಿ ಅಕ್ಷರ ಬಾರದಿದ್ದರೂ ಈ ಜನರು ನಾಯಕತ್ವ ಆಯ್ಕೆಯಲ್ಲಿ ಜಾಣರಾಗಿರುತ್ತಾರೆ ಎಂಬುದು ಲೇಖಕ ಡಾ.ನಿತ್ಯಾನಂದಶೆಟ್ಟಿ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.