ಎಲ್ಲ ವಿಷಯದಲ್ಲಿಯೂ ರಾಜಕೀಯವನ್ನೇ ಹುಡುಕುವ ಕೆಟ್ಟ ಪರಂಪರೆ ರಾಜ್ಯದಲ್ಲಿ ಬೆಳೆಯುತ್ತಿರುವುದು ವಿಷಾದಕರ. ಅದರಲ್ಲಿಯೂ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳದು ಇಬ್ಬಗೆಯ ಧೋರಣೆ.

ಸ್ವಂತದ್ದಕ್ಕಾದರೆ ಒಂದು ವಾದ, ವಿರೋಧಿಗಳಿಗೆ ಸಂಬಂಧಿಸಿದ್ದರೆ ಅದಕ್ಕೆ ವ್ಯತಿರಿಕ್ತವಾದ ಇನ್ನೊಂದು ವಾದ. ಯಾವುದನ್ನು ಮುಂದೆ ಮಾಡಿದರೆ ಸ್ವಂತದ ರಾಜಕೀಯಕ್ಕೆ ಲಾಭವಾಗುತ್ತದೆ; ವಿರೋಧಿಗಳಿಗೆ ಹಿನ್ನಡೆಯಾಗುತ್ತದೆ ಎಂಬುದನ್ನು ಲೆಕ್ಕ ಹಾಕುವುದೇ ರಾಜಕಾರಣಿಗಳ ಪರಿಪಾಠ.

ಚುನಾವಣೆಯ ದೃಷ್ಟಿಯಿಂದ ಆಚೆಗೆ ಯೋಚಿಸುವುದೇ ರಾಜ್ಯದ ಈಗಿನ ರಾಜಕಾರಣಿಗಳಿಗೆ ಸಾಧ್ಯವಾಗುತ್ತಿಲ್ಲ. ರಾಜಕೀಯ ಅಧಿಕಾರ ಜನತೆ ತಾಳಿದ ವಿಶ್ವಾಸ ನಂಬಿಕೆಯ ಪ್ರತೀಕ; ಜನ ಬಯಸಿದ್ದರಿಂದ ತಮಗೆ ಅಧಿಕಾರ ಸ್ಥಾನಮಾನ ಎಂದು ಯೋಚಿಸುವ ಪ್ರಬುದ್ಧತೆ ಅಪರೂಪವಾಗುತ್ತಿದೆ.

ಆದ್ದರಿಂದ ರಾಜಕೀಯ ಮುಖಂಡರಲ್ಲಿ ಪ್ರೌಢಚಿಂತನೆಯನ್ನು ನಿರೀಕ್ಷಿಸುವುದು ಸಾಧ್ಯವಾಗುತ್ತಿಲ್ಲ. ನಿತ್ಯದ ಸಾಮಾನ್ಯ ಚಟುವಟಿಕೆಗಳನ್ನೂ ರಾಜಕಾರಣದ ಬೆಳಕಿನಲ್ಲಿಟ್ಟು ನೋಡುವ ಸಂಕುಚಿತ ಪ್ರವೃತ್ತಿಯನ್ನು ಎಲ್ಲ ಸಂದರ್ಭಗಳಲ್ಲಿಯೂ ನೋಡಬೇಕಾದ ದುರವಸ್ಥೆ ರಾಜ್ಯದ ಜನತೆಯದಾಗಿದೆ.

ಈ ಕ್ಷುಲ್ಲಕ ಧೋರಣೆಗೆ ಈಚಿನ ನಿದರ್ಶನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಈ ತಿಂಗಳಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ವಿದೇಶ ಪ್ರವಾಸ ಕುರಿತಾಗಿ ಸೃಷ್ಟಿಸಿದ ವಿವಾದ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದನ್ನು ಮುಂದೆ ಮಾಡಿ ಪ್ರತಿಪಕ್ಷಗಳ ಮುಖಂಡರಷ್ಟೇ ಅಲ್ಲದೆ, ಆಡಳಿತ ಪಕ್ಷದಲ್ಲಿನ ವಿರೋಧಿಗಳೂ ಅಪಸ್ವರ ಎತ್ತಿದ್ದರಿಂದ ಮುಖ್ಯಮಂತ್ರಿ ತಮ್ಮ ವಿದೇಶ ಪ್ರವಾಸವನ್ನೇ ರದ್ದು ಮಾಡುವಂತಾಗಿದೆ.

ರಾಜ್ಯದಲ್ಲಿ ಈಚಿನ ವರ್ಷಗಳಲ್ಲಿಯೇ ತೀವ್ರವಾದ ಬರಗಾಲ ಇದೆ ಎಂಬುದು ನಿಜ. ಅದನ್ನು ಎದುರಿಸಲು ಸರ್ಕಾರಿ ಆಡಳಿತ ಚುರುಕಾಗಿ ವರ್ತಿಸುವಂತೆ ನೋಡಿಕೊಳ್ಳುವುದು ಮುಖ್ಯಮಂತ್ರಿ ಅವರ ಹೊಣೆಗಾರಿಕೆ ಎಂಬುದೂ ವಾಸ್ತವವೇ. ಆದರೆ, ಬರ ಪರಿಹಾರ ಕಾಮಗಾರಿಗಳನ್ನೂ, ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯನ್ನೂ ಮುಖ್ಯಮಂತ್ರಿಯೇ ಎಲ್ಲ ಕಡೆ ಸಮೀಕ್ಷೆ ಮಾಡಬೇಕೆಂದು ನಿರೀಕ್ಷಿಸುವುದು ಸರಿಯಲ್ಲ.

ಜಿಲ್ಲಾ ಉಸ್ತುವಾರಿ ಸಚಿವರು, ಪ್ರತಿ ಜಿಲ್ಲೆಗೆ ಉನ್ನತ ಶ್ರೇಣಿಯ ಪ್ರಧಾನ ಕಾರ್ಯದರ್ಶಿಗಳು ಇರುವುದು ಅಲಂಕಾರಕ್ಕೇನೂ ಅಲ್ಲ. ಜನತೆ ಸಂಕಷ್ಟ ಎದುರಿಸುವ ಸಂದರ್ಭಗಳಲ್ಲಿ ಸರ್ಕಾರದ ಪರಿಹಾರ ಕ್ರಮಗಳು ಸಮರೋಪಾದಿಯಲ್ಲಿ ನಡೆಯಬೇಕು. ಅದಕ್ಕೆ ಎಲ್ಲ ಚುನಾಯಿತ ಪ್ರತಿನಿಧಿಗಳೂ, ಸಚಿವರು, ಅಧಿಕಾರಿಗಳು ಕೈ ಜೋಡಿಸಬೇಕು.

ಅದು ಅವರ ಕರ್ತವ್ಯ. ಎಲ್ಲ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ರಾಜಧಾನಿಯಲ್ಲಿಯೇ ಕುಳಿತು ಅವಲೋಕಿಸಿ ಅಧಿಕಾರಿಗಳಿಗೆ ಅವಶ್ಯಕ ಮಾರ್ಗದರ್ಶನ ನೀಡುವುದಕ್ಕೆ ವಿಡಿಯೋ ಕಾನ್ಫರೆನ್ಸ್ನಂತಹ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವಿವೇಕವನ್ನು ಮುಖ್ಯಮಂತ್ರಿಗಳು ಪ್ರದರ್ಶಿಸುತ್ತಿದ್ದಾಗ ಅದಕ್ಕೂ ಅಪಸ್ವರ ಎತ್ತಿದ್ದು ವಿಕೃತ ಮನಃಸ್ಥಿತಿಯ ಅವಿವೇಕ.

ರಾಜ್ಯದಲ್ಲಿ ಕೃಷಿ ಉದ್ಯಮಗಳನ್ನು ಬೆಳೆಸುವುದಕ್ಕೆ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಪ್ರಯತ್ನವಾಗಿ ನಾಲ್ಕೈದು ದಿನಗಳ ಮಟ್ಟಿಗೆ ಮುಖ್ಯಮಂತ್ರಿಗಳು ವಿದೇಶ ಪ್ರಯಾಣ ಮಾಡುವ ಕಾರ್ಯಕ್ರಮವನ್ನು ವಿವಾದವಾಗಿ ಬೆಳೆಸಿದ್ದು ಅಪ್ರಬುದ್ಧ ರಾಜಕೀಯ ನಡವಳಿಕೆ. ಮುಖ್ಯಮಂತ್ರಿ ಕೆಲವು ದಿನ ಸ್ಥಳದಲ್ಲಿ ಇಲ್ಲದಿದ್ದರೆ ಸಾಮಾನ್ಯ ಆಡಳಿತವನ್ನೂ ನಡೆಸಿಕೊಂಡು ಹೋಗಲಾರದಷ್ಟು ದುರ್ಬಲವಾಗಿದೆಯೇ ರಾಜ್ಯದ ಬಿಜೆಪಿ ಸರ್ಕಾರ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.