ದಿನ ಭವಿಷ್ಯ: ಸವಾಲನ್ನು ಎದುರಿಸುವ ಶಕ್ತಿ, ಸಾಮರ್ಥ್ಯ ಅಭಿವೃದ್ಧಿಯಾಗುವುದು
Published 16 ಸೆಪ್ಟೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕನಸುಗಳು ಕೈಗೂಡುವ ದಿನ ಇದಾಗಿದೆ. ಆಸ್ತಿ ವ್ಯವಹಾರಗಳಿಂದ ಉತ್ತಮ ಲಾಭ ಹಾಗೂ ವೃತ್ತಿ ಕ್ಷೇತ್ರದಲ್ಲಿ ನಿಷ್ಠೆ, ಪ್ರಾಮಾಣಿಕತೆಗೆ ಗೌರವ ಆದರಗಳು ಸಿಗಲಿವೆ. ಕಾರ್ಮಿಕ ವರ್ಗದವರ ಬೇಡಿಕೆಗಳು ಈಡೇರಲಿವೆ.
ವೃಷಭ
ವೃತ್ತಿ ಮಾಡುವ ಸ್ಥಳದಲ್ಲಿ ವಾದ ವಿವಾದಗಳು ನಡೆದರೂ, ಕಾರ್ಯ ಸಾಧನೆಗೆ ಅಡ್ಡಿಯಾಗದು. ಯಶಸ್ಸಿನ ಹೊಸ ಮಾರ್ಗಗಳು ಗೋಚರಿಸಲಿವೆ. ಸಾಂಸಾರಿಕವಾಗಿ ಅಥವಾ ವೈಯಕ್ತಿಕವಾಗಿ ನಿರ್ಧಾರ ಕೈಗೊಳ್ಳುವಿರಿ.
ಮಿಥುನ
ಸೃಜನಶೀಲ ಬರವಣಿಗೆಗಳಿಂದ ಖ್ಯಾತಿ ಮತ್ತು ಹಣ ಗಳಿಸುವಲ್ಲಿ ಯಶಸ್ವಿಯಾಗುವಿರಿ. ಮನೆಯಲ್ಲಿ ವಿವಾಹಕ್ಕೆ ಸಂಬಂಧ ಮಾತುಕತೆಗಳು ಹಿರಿಯರಲ್ಲಿ ಚರ್ಚೆಗೆ ಬರಲಿವೆ.
ಕರ್ಕಾಟಕ
ಬಣ್ಣ ಮಾರಾಟಗಾರರಿಗೆ ಹೆಚ್ಚಿನ ಲಾಭ ಬರಲಿದೆ. ಸಹೋದ್ಯೋಗಿಯ ನೆರವಿನಿಂದ ಕೆಲಸ ಕಾರ್ಯಗಳು ಶೀಘ್ರವಾಗಿ ಮತ್ತು ಅಚ್ಚುಕಟ್ಟಾಗಿ ಪೂರ್ಣಗೊಳ್ಳಲಿವೆ.
ಸಿಂಹ
ಸಂಸ್ಥೆಯ ಹೊಸ ಯೋಜನೆಯು ಬಹಳ ಸುಲಭವೆನಿಸಲಿದೆ. ಹಿಡಿತ ಸಾಧಿಸುವಲ್ಲಿ ಸಫಲರಾಗುವಿರಿ. ಆಕಸ್ಮಿಕ ಪ್ರಯಾಣ ಬೆಳೆಸಬೇಕಾಗಬಹುದು. ಯೋಗಾಭ್ಯಾಸದಿಂದ ಆರೋಗ್ಯವು ಚೆನ್ನಾಗಿರುವುದು.
ಕನ್ಯಾ
ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಲ್ಲಿ ಅಗತ್ಯವಾಗಿ ಚರ್ಚೆ ನಡೆಸಿ ದಿನನಿತ್ಯದ ಆಗುಹೋಗುಗಳ ಬಗ್ಗೆ ಗಮನಹರಿಸಿ. ತೆರಿಗೆ ಇಲಾಖೆ ಸಿಬ್ಬಂದಿಗೆ ಕೆಲಸವಿರುವುದು. ನೆಮ್ಮದಿಯು ಪ್ರಾಪ್ತಿಯಾಗಲಿದೆ.
ತುಲಾ
ಸವಾಲನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಅಭಿವೃದ್ಧಿಯಾಗುವುದು. ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವ ನಿಮ್ಮಲ್ಲಿದೆ. ಕೀರ್ತಿ ಅರಸಿ ಬರುವುದು, ಆದರೂ ಬದುಕಿನಲ್ಲಿ ಸ್ಥಿರತೆಯ ಅಭಾವ ಕಾಣಲಿದೆ.
ವೃಶ್ಚಿಕ
ವ್ಯಾಪಾರ ಸುಧಾರಣೆಗೆ ಸಾಕಷ್ಟು ಅಡೆತಡೆಗಳು ಒದಗಿ ಬರುವುವು. ಉದ್ಯೋಗ ನಿಮಿತ್ತ ಪ್ರವಾಸ ಕೈಗೊಳ್ಳುವಿರಿ. ಆಸ್ತಿ ಕೈ ಸೇರಲಿದೆ. ನಿರ್ವಿಘ್ನವಾಗಿ ಕೆಲಸ ನೆರೆವೇರಲು ಮಹಾಗಣಪತಿಯನ್ನು ಆರಾಧಿಸಿ.
ಧನು
ದಂತ ವೈದ್ಯರಿಗೆ ಅನುಕೂಲಗಳಾಗುವುವು. ಮನೆಯ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಓಡಾಟ ನಡೆಸಿ, ಕೆಲಸಗಳನ್ನು ಸಂಪೂರ್ಣಗೊಳಿಸಿಕೊಳ್ಳುವಿರಿ. ಪತ್ರಿಕೆಯವರ ಸಹಕಾರದಿಂದ ಪ್ರಚಾರ ಪಡೆದುಕೊಳ್ಳುವಿರಿ.
ಮಕರ
ಅಧಿಕಾರಿಗಳೊಂದಿಗೆ ಹೊಂದಿಕೊಳ್ಳುವ ಗುಣ, ಬುದ್ಧಿವಂತಿಕೆಯ ಸಾಮರ್ಥ್ಯ ಏಳಿಗೆಯಲ್ಲಿ ಮುಖ್ಯ ಪಾತ್ರವಹಿಸುವುದು. ಆಲೋಚನಾ ಸರಣಿಯನ್ನು ಜನರು ಇಷ್ಟಪಡುತ್ತಾರೆ. ಮಕ್ಕಳ ಓದಿನತ್ತ ಗಮನ ಹರಿಸಿ.
ಕುಂಭ
ನ್ಯಾಯವಾದಿಗಳಿಗೆ ಉತ್ತಮ ದಿನ. ಗುರುಹಿರಿಯರ ಆಶೀರ್ವಾದ ಪಡೆದು ಹೊಸ ಯೋಜನೆಗಳಿಗೆ ಚಾಲನೆ ನೀಡಬಹುದು. ಔಷಧಿಯ ವಸ್ತುಗಳಿಂದ ಆದಾಯ ಹೆಚ್ಚಿಸಿಕೊಳ್ಳುವಿರಿ.
ಮೀನ
ವ್ಯಾಪಾರದ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಹಾಗೂ ಹೊಸ ಅವಕಾಶಗಳನ್ನು ಸಾಧಿಸಿಕೊಳ್ಳಲು ಉತ್ತಮ ಸಮಯ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನ ವಹಿಸಬೇಕಾಗುವುದು. ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ಕಾಣುವಿರಿ.