ಮಂಗಳವಾರ, ಮಾರ್ಚ್ 9, 2021
31 °C

ಅಪಘಾತಕ್ಕೀಡಾದ ಹೆಲಿಕಾಪ್ಟರ್ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಘಾತಕ್ಕೀಡಾದ ಹೆಲಿಕಾಪ್ಟರ್ ತೆರವು

ಬೆಂಗಳೂರು: ತಾಂತ್ರಿಕ ದೋಷದಿಂದ ಗುರುವಾರ ಮಲ್ಲೇಶ್ ಪಾಳ್ಯದ ಅಪಾರ್ಟ್‌ಮೆಂಟ್ ಮೇಲೆ  ಬಿದ್ದಿದ್ದ ಹೆಲಿಕಾಪ್ಟರ್ ಅನ್ನು ಎಚ್‌ಎಎಲ್ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.ನಾಗರಿಕ ವಿಮಾನ ಇಲಾಖೆಯ ಮಹಾನಿರ್ದೇಶಕರು(ಡಿಜಿಸಿಎ) ಹಾಗೂ ಎಚ್‌ಎಎಲ್‌ನ ರೋಟರಿ ವಿಂಗ್‌ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು 700 ಕೆ.ಜಿ ತೂಕದ ಹೆಲಿಕಾಪ್ಟರ್‌ನ ಕೆಲ ಭಾಗಗಳನ್ನು ಬಿಡಿಸಿ ನಂತರ ಕ್ರೇನ್ ಮೂಲಕ ಕೆಳಗಿಳಿಸಲಾಯಿತು. ಆದರೆ ಕ್ರೇನ್‌ನಲ್ಲಿ ತೈಲ ಸೋರಿಕೆ ಉಂಟಾಗಿದ್ದರಿಂದ ಎರಡು ಗಂಟೆ ಕಾಲ ಕಾರ್ಯಾಚರಣೆ ವಿಳಂಬವಾಯಿತು ಎಂದು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ತಿಳಿಸಿದರು.ಎಚ್‌ಎಲ್‌ನ ಅಧ್ಯಕ್ಷ ಸೌಂದರ್‌ರಾಜನ್ ಅವರ ಮಾರ್ಗದರ್ಶನದಲ್ಲಿ  30 ಎಚ್‌ಎಎಲ್ ಸಿಬ್ಬಂದಿ, 10 ಅಗ್ನಿಶಾಮಕ ಠಾಣೆ ಸಿಬ್ಬಂದಿ ಐದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದರು. ನಂತರ ಎರಡು ಲಾರಿಗಳಲ್ಲಿ ಹೆಲಿಕಾಪ್ಟರ್‌ನ ಬಿಡಿ ಭಾಗಗಳನ್ನು ತೆಗೆದುಕೊಂಡು ಎಚ್‌ಎಎಲ್‌ಗೆ ಸಾಗಿಸಲಾಯಿತು ಎಂದು ಪೊಲೀಸರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.