ಸೋಮವಾರ, ಜನವರಿ 20, 2020
17 °C

ಅಪಘಾತಕ್ಕೆ ದಾರಿ ವೇದಾನದಿ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ಪಟ್ಟಣ ಸಮೀಪದ ವೇದಾವತಿ ನದಿ ಸೇತುವೆ ಅಪಾಯಕಾರಿಯಾಗಿದ್ದು, ಅಪಘಾತಗಳಿಗೆ ರಹದಾರಿಯಾಗುತ್ತಿದೆ.ಸೇತುವೆ ಮಧ್ಯೆ ಕಂದಕವಿದ್ದು ಸಮೀಪದಲ್ಲೇ ತಿರುವು ಸಹ ಇರುವುದರಿಂದ ಓಡಾಡುವ ವಾಹನಗಳು ನೇರವಾಗಿ ಕಂದಕಕ್ಕೆ ಬೀಳುವ ಮೂಲಕ ಅಪಘಾತಗಳು ಸಂಭವಿಸುತ್ತಲೇ ಇವೆ.    ಈ ರಸ್ತೆ ಬೆಂಗಳೂರಿನಿಂದ ಹೊನ್ನಾವರ ತಲುಪುವ ರಾಷ್ಟ್ರೀಯ ಹೆದ್ದಾರಿ 206. ರಾತ್ರಿ ಸಮಯದಲ್ಲಿ ವೇಗವಾಗಿ ಬರುವ ವಾಹನಗಳಿಗೆ ತಿರುವು ಕಾಣಿಸದೆ ಸೇತುವೆಗೆ ಅಪ್ಪಳಿಸಿ ನೂರಾರು ಅಡಿ ಆಳದಲ್ಲಿ ಹರಿಯುತ್ತಿರುವ ನದಿಯ ಪಾಲಾಗುತ್ತಿವೆ. ರಸ್ತೆಯ ಯಾವ ಭಾಗಕ್ಕೂ ತಡೆಗೋಡೆ ಗಳ್ಲ್ಲಿಲ.ಅಪಘಾತ ಸೂಚನಾ ಫಲಕಗಳಿಲ್ಲದೆ ತಿಂಗಳಿಗೆ ಕನಿಷ್ಠ ಎರಡರಿಂದ ಮೂರು ಅಪಘಾತಗಳಾಗು ತ್ತಲೇ ಇರುತ್ತವೆ. ಇದರಿಂದ ಅನೇಕ ಜೀವಗಳು ಬಲಿಯಾಗಿವೆ. ಇದಕ್ಕೆ ಇಂಬು ಕೊಡುವಂತೆ ದ್ವಿ ಚಕ್ರವಾಹನಗಳು ಸೇರಿದಂತೆ ಹಾಲಿನ ವಾಹನ ಸೇತುವೆಯ ತಡೆಗೋಡೆಗೆ ಗುದ್ದಿ ಮುಗ್ಗರಿಸುತ್ತವೆ. ಜನ ತೀವ್ರವಾಗಿ ಗಾಯಗೊಂಡು, ಜಖಂ ಆಗು ತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ವಿಭಾಗ ಈ ಬಗ್ಗೆ ಗಮನ ಹರಿಸಿಲ್ಲ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಸೇತುವೆ ದುರಸ್ತಿ ಮಾಡಿ ಅಡ್ಡಗೋಡೆ ನಿರ್ಮಿಸಿ, ಶಿಥಿಲವಾಗಿರುವ ಸೇತುವೆಯನ್ನು ಪುನರ್ ನಿರ್ಮಾಣ ಮಾಡಬೇಕು. ರಸ್ತೆಯ ಬದಿಗೆ 1 ಕಿ.ಮೀ.ಲೋಹದ ಪಟ್ಟಿ, ಹೊಳೆಯುವ ಸೂಚನಾ ಫಲಕಗಳನ್ನು ನಿರ್ಮಿಸುವತ್ತ ಇಲಾಖಾ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.   ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ರಾತ್ರಿ ವೇಳೆ ಸಂಚರಿಸುವ ವಾಹನಗಳ ಚಾಲಕರಿಗೆ ತಿರುವು ಗಳು ಬೇಗ ಕಾಣದೆ ಅವಘಡಗಳು ಸಂಭವಿಸುತ್ತಿವೆ. ರಸ್ತೆಯ ಅಕ್ಕ ಪಕ್ಕದಲ್ಲಿ ಬೆಳೆದಿರುವ ಬಳ್ಳಾರಿ ಜಾಲಿ ಅಪಘಾತಗಳಿಗೆ ಆಹ್ವಾನ ನೀಡುತ್ತಿರುವುದರಿಂದ ಕಳೆ  ತೆಗೆಸಲು ಇಲಾಖೆ ಮಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

 ಎ.ಜೆ.ಪ್ರಕಾಶಮೂರ್ತಿ

ಪ್ರತಿಕ್ರಿಯಿಸಿ (+)