ಅಪಾಯದ ರಸ್ತೆ
ಕುಮಾರಸ್ವಾಮಿ ಲೇಔಟ್ ವಾರ್ಡಿಗೆ ಸೇರಿದ ಬನಶಂಕರಿ ಕಡೆಯಿಂದ ಪದ್ಮನಾಭನಗರ ಮುಖ್ಯ ರಸ್ತೆಗೆ ಹಾದುಹೋಗುವ ಸುಬ್ರಮಣ್ಯಪುರ ಮುಖ್ಯ ರಸ್ತೆಯಲ್ಲಿ ಆಂಧ್ರ ಬ್ಯಾಂಕ್ ಮುಂಭಾಗ 10ನೇ ಅಡ್ಡ ರಸ್ತೆ ಮತ್ತು ಸಾಯಿ ರಸ್ತೆ ಕೂಡುವ ಪ್ರದೇಶವು ಅತ್ಯಂತ ಕಿರಿದಾಗಿದೆ.
ಈ ರಸ್ತೆಯಲ್ಲಿ ಲಾರಿಗಳು, ಬಿಎಂಟಿಸಿ ಬಸ್ಸುಗಳು ಹೆಚ್ಚಾಗಿ ಸಂಚರಿಸುತ್ತವೆ. ರಸ್ತೆ ವಿಭಜಕವನ್ನೂ ಅಳವಡಿಸಿರುವುದರಿಂದ ರಸ್ತೆ ಮತ್ತಷ್ಟು ಕಿರಿದಾಗಿರುತ್ತದೆ. ಇಲ್ಲಿ ರಸ್ತೆ ಒಂದು ರೀತಿಯಲ್ಲಿ ತಿರುವಿನ ಸ್ವರೂಪದಲ್ಲಿದ್ದು ಬಹಳ ವಾಹನಗಳು ಪಾದಚಾರಿ ರಸ್ತೆಯ ಮೇಲೂ ಹಾದುಹೋಗುತ್ತವೆ.
ಸಂಬಂಧಪಟ್ಟವರು ಈ ಅಪಾಯಕಾರಿ ರಸ್ತೆಯ ಕಡೆಗೆ ಗಮನ ಹರಿಸಬೇಕು. ಇದಕ್ಕೊಂದು ಶಾಶ್ವತ ಪರಿಹಾರವನ್ನು ಕಲ್ಪಿಸಿಕೊಡಬೇಕೆಂದು ಕೋರುತ್ತೇನೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.