ಭಾನುವಾರ, ಜೂನ್ 13, 2021
25 °C

ಅಬ್ ಬದ್ಲೇಗಾ ಗೇಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬ್ ಬದ್ಲೇಗಾ ಗೇಮ್

ಯುವಜನರ ನೆಚ್ಚಿನ ನಟ ರಣಬೀರ್ ಕಪೂರ್ ಈಗ ಪೆಪ್ಸಿಕೊ ಜತೆ ಕೈ ಜೋಡಿಸಿದ್ದಾರೆ. ಯುವಕರಲ್ಲಿ ಕ್ರೀಡಾಪ್ರೀತಿಯನ್ನು ಹುರಿದುಂಬಿಸುವ  ಫುಟ್‌ಬಾಲ್ ಕುರಿತ ಆಕರ್ಷಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಇವರು ಒಂದು ವರ್ಷ ಪೂರ್ತಿ ಫುಟ್‌ಬಾಲ್ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. `ಫುಟ್‌ಬಾಲ್ ಈಸ್ ಲೈಫ್ ಫಾರ್ ಮಿ~ ಎನ್ನುವ ರಣಬೀರ್ ಕಪೂರ್‌ಗೆ ಆ ಆಟದ ಮೇಲೆ ವಿಪರೀತ ಒಲವಿದೆಯಂತೆ.ನಟನಾಗದಿದ್ದರೆ ನಾನು ಕೂಡ ಫುಟ್‌ಬಾಲ್ ಆಟಗಾರನಾಗುತ್ತಿದ್ದೆ. ಈ ಆಟದಲ್ಲಿ ತಂಡ ಸ್ಫೂರ್ತಿ, ಸ್ಥಿರತೆ ಹಾಗೂ ಶಿಸ್ತು ಎಲ್ಲವೂ ಇದೆ.ಯುವಜನತೆಗೆ ಕ್ರಿಕೆಟ್ ಜತೆಗೆ ಸಂಗೀತ, ಸಿನಿಮಾ ಬಗ್ಗೆ ಪ್ರೀತಿ ಇದೆ. ಪೆಪ್ಸಿಕೊ ಫುಟ್‌ಬಾಲ್‌ನ ರೋಚಕತೆಯನ್ನು ಇಡೀ ದೇಶಕ್ಕೆ ಪಸರಿಸುವ ಸಲುವಾಗಿ ಆಕರ್ಷಕ ಪ್ರಚಾರ ತಂತ್ರ ರೂಪಿರುವುದು ಹಾಗೂ ಇದರಲ್ಲಿ ನಾನು ಭಾಗಿಯಾಗಿರುವುದು ಖುಷಿ ತಂದಿದೆ ಎನ್ನುತ್ತಾರೆ ರಣಬೀರ್.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.