ಬೆಂಗಳೂರು: ಸಾವಯವ ಕೃಷಿಗೆ ಉತ್ತೇಜನ ನೀಡಲು ಪ್ರತಿ ತಾಲ್ಲೂಕಿಗೆ ರೂ 82.98 ಲಕ್ಷ, ರೈತರ ತರಬೇತಿಗೆ ರೂ 14.25 ಕೋಟಿ, ಸಾವಯವ ಕೃಷಿಕರಿಗೆ ಕ್ಯೂಬಾ, ಇಸ್ರೇಲ್ ಪ್ರವಾಸ, ಜಿಲ್ಲೆಗೊಂದು ಗೋಶಾಲೆ, ಶಾಲೆಗಳಲ್ಲಿ ಸಾವಯವ ಕೈತೋಟ, ಸಾವಯವ ಉತ್ಪನ್ನಗಳ ದೃಢೀಕರಣಕ್ಕೆ ರೂ 9.51 ಕೋಟಿ...

- ಇವು `ಅಮೃತ ಭೂಮಿ~ ಯೋಜನೆ ಅಡಿಯಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು. ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ `ಅಮೃತ ಭೂಮಿ~ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು, ಈ ಎಲ್ಲ ವಿವರಗಳನ್ನೂ ಒಳಗೊಂಡ `ಸಾವಯವ ಆಯವ್ಯಯ~ವನ್ನು ಬಿಡುಗಡೆ ಮಾಡಿದರು.

ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದಕ್ಕಾಗಿ 200 ಕೋಟಿ ರೂಪಾಯಿ ಘೋಷಿಸಲಾಗಿತ್ತು. ಈ ಮೊತ್ತದ ಬಳಕೆಯ ಪೂರ್ಣ ವಿವರಗಳನ್ನು `ಸಾವಯವ ಆಯವ್ಯಯ~ದಲ್ಲಿ ನೀಡಲಾಗಿದೆ. ವಿಜಾಪುರ ತಾಲ್ಲೂಕಿನ ಕೋಟ್ಯಾಳ ಗ್ರಾಮದ ಸಾವಯವ ಕೃಷಿಕ ದಂಪತಿ ಭೀಮನಗೌಡ ಪಾಟೀಲ್ ಮತ್ತು ಅನ್ನಪೂರ್ಣ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಯವರು `ಸಾವಯವ ಆಯವ್ಯಯ~ವನ್ನು ಬಜೆಟ್ ಮಂಡನೆ ರೂಪದಲ್ಲೇ ಓದಿದರು.

`ರಾಜ್ಯದಲ್ಲಿ 82,368 ಹೆಕ್ಟೇರ್ ಪ್ರದೇಶಕ್ಕೆ ಹಸಿರೆಲೆ ಗೊಬ್ಬರದ ಬೀಜಗಳ ವಿತರಣೆ, 17,600 ಹೆಕ್ಟೇರ್ ಪ್ರದೇಶಕ್ಕೆ ದೇಸಿ ತಳಿಗಳ ಬೀಜಗಳ ವಿತರಣೆ, 17,600 ರೈತರಿಗೆ ಅಜೋಲಾ ತೊಟ್ಟಿ, 58,000 ಹೆಕ್ಟೇರ್ ಪ್ರದೇಶಕ್ಕೆ ಸುಣ್ಣ ಹಾಗೂ ಜಿಪ್ಸಂ ವಿತರಣೆ, 13,200 ರೈತರಿಗೆ ಕೊಟ್ಟಿಗೆ ನಿರ್ಮಾಣ, 17,600 ಪಣತ (ಧಾನ್ಯ ಸಂಗ್ರಹಾಗಾರ), 8,448 ರೈತರಿಗೆ ಜೇನು ಸಾಕಣೆಗೆ ಸಹಾಯ, 3,250 ಹೆಕ್ಟೇರ್ ಪ್ರದೇಶದಲ್ಲಿ ಬದುಗಳ ನಿರ್ಮಾಣ, 5,280 ಕೃಷಿ ಹೊಂಡಗಳ ನಿರ್ಮಾಣ ಮತ್ತು 13,200 ಕೊಳವೆ ಬಾವಿ, ತೆರೆದ ಬಾವಿಗಳ ಮರುಪೂರಣಕ್ಕೆ ಈ ಯೋಜನೆಯಡಿ ನೆರವು ನೀಡಲಾಗುವುದು. ಇದಕ್ಕಾಗಿ ರೂ 146.04 ಕೋಟಿ ವೆಚ್ಚ ಮಾಡಲಾಗುವುದು~ ಎಂದು ಶೆಟ್ಟರ್ ಪ್ರಕಟಿಸಿದರು.

ಸಾವಯವ ಕೃಷಿಕ ದಂಪತಿಗಳನ್ನು ಕ್ಯೂಬಾ ಮತ್ತು ಇಸ್ರೇಲ್ ದೇಶಗಳಿಗೆ ಪ್ರವಾಸಕ್ಕೆ ಕರೆದೊಯ್ಯುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಎರಡು ಕೋಟಿ ರೂಪಾಯಿ ಅನುದಾನ ನಿಗದಿ ಮಾಡಲಾಗಿದೆ. ಸಾವಯವ ಕೃಷಿಯ ಸಿದ್ಧಾಂತ, ತಂತ್ರ, ಪ್ರಯೋಗ ಮತ್ತು ಪ್ರಯೋಜನ ಕುರಿತು ಪ್ರತಿ ತಾಲ್ಲೂಕಿನಲ್ಲೂ ರೈತರಿಗೆ ತರಬೇತಿ ನೀಡಲಾಗುತ್ತಿದೆ. 26,400 ರೈತರಿಗೆ ತರಬೇತಿ ನೀಡುವ ಗುರಿ ಹೊಂದಿದ್ದು, ಈ ಉದ್ದೇಶಕ್ಕಾಗಿ 14.25 ಕೋಟಿ ರೂಪಾಯಿ ಒದಗಿಸಲಾಗಿದೆ. ಪ್ರತಿ ತಾಲ್ಲೂಕಿಗೆ ಮೂರು ಸಾವಿರ ರೈತರಂತೆ ಒಟ್ಟು 5.28 ಲಕ್ಷ ರೈತರಿಗೆ ಯೋಜನೆಯಡಿ ಅನುಕೂಲ ಕಲ್ಪಿಸಲಾಗುವುದು. 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅನುಷ್ಠಾನಕ್ಕೆ ತರುವ ಗುರಿ ಇದೆ ಎಂದರು.

ಅಮೃತ ಭೂಮಿ ಯೋಜನೆಯಡಿ `ಸಾವಯವ ಒಡನಾಟ~ ಹೆಸರಿನಲ್ಲಿ ರೈತರಿಗೆ ತಾಲ್ಲೂಕು ಮಟ್ಟದ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗುತ್ತದೆ. 1,760 ರೈತ ಗುಂಪುಗಳನ್ನು ಪ್ರವಾಸಕ್ಕೆ ಕರೆದೊಯ್ಯುವ ಯೋಜನೆ ಇದೆ. ಸಾವಯವ ಕೃಷಿ ಕುರಿತು ಸಂಶೋಧನೆಯನ್ನೂ ಕೈಗೊಳ್ಳಲಾಗುತ್ತದೆ. ಸಾವಯವ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮಾರುಕಟ್ಟೆಗೆ ಪೂರೈಸುವುದಕ್ಕೂ ನೆರವು ದೊರೆಯಲಿದೆ.

ಸಾವಯವ ಕೃಷಿಕರ ಜಮೀನಿನಲ್ಲಿ 350 ಕ್ಷೇತ್ರೋತ್ಸವಗಳನ್ನು ನಡೆಸಿ, ಈ ಕುರಿತು ಪರಿಚಯಿಸುವ ಗುರಿ ಇದೆ. ಸಂಪೂರ್ಣ ಸಾವಯವ ಕೃಷಿ ಬಗ್ಗೆ ರೈತರಿಗೆ ತರಬೇತಿ ನೀಡಲು 60 ಪ್ರೇರಣಾ ಕೇಂದ್ರಗಳ ನಿರ್ಮಾಣ, ಪ್ರತಿ ತಾಲ್ಲೂಕಿನ ತಲಾ ಐದು ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸಾವಯವ ಕೈತೋಟವನ್ನು ನಿರ್ಮಾಣ ಮಾಡುವ ಪ್ರಸ್ತಾವವೂ ಯೋಜನೆಯಲ್ಲಿ ಸೇರಿದೆ. ಮಕ್ಕಳಿಗೆ ಸಾವಯವ ಕೃಷಿಯಲ್ಲಿ ಆಸಕ್ತಿ ಮೂಡಿಸಲು ನಿರ್ಮಿಸುವ ಕೈತೋಟಗಳಲ್ಲಿ ಬೆಳೆಯುವ ಕಾಯಿಪಲ್ಲೆಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಯೋಚನೆ ಇದೆ.

ಸಾವಯವ ಕೃಷಿ ಕುರಿತು ನಿರಂತರ ಅಧ್ಯಯನ ಮತ್ತು ಮೌಲ್ಯಮಾಪನ ಮಾಡಲಾಗುತ್ತದೆ. ಸಾವಯವ ಕೃಷಿ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ಉತ್ಪನ್ನಗಳಿಗೆ ದೃಢೀಕರಣ (ಸರ್ಟಿಫಿಕೇಷನ್) ನೀಡುವ ಕಾರ್ಯಕ್ರಮ ಜಾರಿಗೆ ಬರಲಿದೆ. ವಿಧಾನಸೌಧದಲ್ಲಿ `ಅಮೃತ ದಾಸೋಹ~ ಹೆಸರಿನ ಸಾವಯವ ಕೃಷಿ ಉತ್ಪನ್ನಗಳ ಮಳಿಗೆಯೂ ಸ್ಥಾಪನೆ ಆಗಲಿದೆ.

ಈ ಎಲ್ಲ ವಿವರಗಳನ್ನೂ ಒಳಗೊಂಡಿರುವ `ಸಾವಯವ ಆಯವ್ಯಯ~ವನ್ನು ಓದಿದ ಮುಖ್ಯಮಂತ್ರಿಯವರು, ಅದನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ದಂಪತಿಗೆ ಸಲ್ಲಿಸಿದರು.

ಸುವರ್ಣ ಭೂಮಿಯಡಿ ನೆರವು:  ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, `ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ರೈತರಿಗೆ ನೆರವಾಗುವ ಉದ್ದೇಶದಿಂದ ರೈತರು ಸಹಕಾರ ಸಂಘಗಳಲ್ಲಿ ಪಡೆದಿರುವ 25,000 ರೂಪಾಯಿವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡುವ ನಿರ್ಧಾರ ಪ್ರಕಟಿಸಿದೆ. ಆದರೆ, ಬೆಳೆ ಸಾಲ ಪಡೆಯದ ಹತ್ತು ಲಕ್ಷ ರೈತರು ಇದ್ದಾರೆ. ಅವರಿಗೆ ಸುವರ್ಣ ಭೂಮಿ ಯೋಜನೆ ಅಡಿಯಲ್ಲಿ ಐದರಿಂದ ಹತ್ತು ಸಾವಿರ ರೂಪಾಯಿಗಳವರೆಗೆ ನೆರವು ನೀಡಬೇಕು~ ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.

ಮುಂದಿನ ವರ್ಷ ಅಮೃತ ಭೂಮಿ ಯೋಜನೆಗೆ 1,000 ಕೋಟಿ ರೂಪಾಯಿ ನೀಡಬೇಕು. ತಮ್ಮ ಅವಧಿಯಲ್ಲಿ ಆರಂಭಿಸಿದ್ದ `ಸಾವಯವ ಕೃಷಿಕರ ಮನೆಯ ಅಂಗಳದಲ್ಲಿ ಸಂವಾದ~ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಬೇಕು. ಬರಪೀಡಿತ ಪ್ರದೇಶಗಳ ರೈತರ ಬವಣೆ ಅರಿಯುವುದಕ್ಕೂ ಈ ಕಾರ್ಯಕ್ರಮ ಬಳಸಿಕೊಳ್ಳಬೇಕು ಎಂದರು.

ಆರಂಭದಲ್ಲಿ ಮಾತನಾಡಿದ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ.ಆ.ಶ್ರೀ.ಆನಂದ್, `ಯಡಿಯೂರಪ್ಪ ಅವರ ಬೆಂಬಲದಿಂದಾಗಿಯೇ ರಾಜ್ಯದಲ್ಲಿ ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ದೊರೆತಿದೆ. ರೈತರಿಗೆ ಸಾರ್ವಜನಿಕವಾಗಿ ಹೆಚ್ಚು ಗೌರವ ದೊರೆಯುವಂತೆ ಮಾಡುವುದೇ ಈ ಯೋಜನೆಗಳ ಗುರಿ~ ಎಂದರು.

ಗುಜರಾತ್ ಕೃಷಿ ಸಚಿವ ದಿಲೀಪ್ ಭಾಯಿ ಸಂಘಾನಿ, ಛತ್ತೀಸ್ಗಡ ಕೃಷಿ ಸಚಿವ ಚಂದ್ರಶೇಖರ್ ಸಾಹು, ಮಧ್ಯಪ್ರದೇಶ ಕೃಷಿ ಸಚಿವ ರಾಮಕೃಷ್ಣ ಕಸುಮಾರಿಯಾ, ಸಾಹಿತಿ ಡಾ.ಚಂದ್ರಶೇಖರ ಕಂಬಾರ ಸಮಾರಂಭದ ಅತಿಥಿಗಳಾಗಿದ್ದರು.

ಸಚಿವರ ಗೈರು
`ಅಮೃತ ಭೂಮಿ~ ಯೋಜನೆಗೆ ಚಾಲನೆ ನೀಡುವ ಸಮಾರಂಭದಲ್ಲಿ ರಾಜ್ಯದ ಕೃಷಿ, ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಜರಿರಲಿಲ್ಲ. ಕೃಷಿ ಸಚಿವ ಉಮೇಶ ಕತ್ತಿ ತಮ್ಮ ಮನೆಯಲ್ಲಿ ಶ್ರಾವಣದ ವಿಶೇಷ ಪೂಜೆ ಇರುವ ಕಾರಣ ಸಮಾರಂಭಕ್ಕೆ ಗೈರುಹಾಜರಾಗಿರುವುದಾಗಿ ಪತ್ರ ಕಳುಹಿಸಿದ್ದರು.

ತೋಟಗಾರಿಕೆ ಸಚಿವ ಎಸ್.ಎ.ರವೀಂದ್ರನಾಥ್ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್. ಕೆ.ಬೆಳ್ಳುಬ್ಬಿ ಅವರ ಹೆಸರು ಕೂಡ ಪ್ರಸ್ತಾಪ ಆಗಲಿಲ್ಲ.

ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿತ್ತು. ಸಮಯಕ್ಕೆ ಸರಿಯಾಗಿ ಯಡಿಯೂರಪ್ಪ ಅವರು ಬ್ಯಾಂಕ್ವೆಟ್ ಸಭಾಂಗಣದಲ್ಲಿದ್ದರು. ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಡ ರಾಜ್ಯಗಳ ಕೃಷಿ ಸಚಿವರು ಸೇರಿದಂತೆ ಬಹುತೇಕ ಅತಿಥಿಗಳು ಬಂದಿದ್ದರು. ಆದರೆ, ಮುಖ್ಯಮಂತ್ರಿಯವರು ಅಲ್ಲಿಗೆ ಬರುವಾಗ ಮಧ್ಯಾಹ್ನ 12.30. ಅಲ್ಲಿಯವರೆಗೂ ಎಲ್ಲರೂ ಕಾದು ಕುಳಿತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಿಮನಗೌಡ ಮತ್ತು ಅನ್ನಪೂರ್ಣ ದಂಪತಿಯನ್ನು `ಸಾವಯವ ಆಯವ್ಯಯ~ ಓದುವ ಮುನ್ನ ಮುಖ್ಯಮಂತ್ರಿಯವರು `ಸಭಾಧ್ಯಕ್ಷರೇ~ ಎಂದೇ ಸಂಬೋಧಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸುವಾಗ ಹೂಗುಚ್ಛದ ಬದಲಿಗೆ ಸಾವಯವ ಕೃಷಿ ಉತ್ಪನ್ನಗಳನ್ನು ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.