ಬೈಕಿಂಗ್ ಎಂದರೆ ಯುವಕರಿಗೆ ಅತಿ ಹೆಚ್ಚು ಮೋಜು ನೀಡುವ ಸಂಗತಿ ಅಲ್ಲವೆ? ಕೆಲವರಿಗೆ ಸ್ಪೋರ್ಟ್ಸ್ ಬೈಕ್ಗಳು ಇಷ್ಟವಾದರೆ, ಕೆಲವರಿಗೆ ಹೆಚ್ಚು ಆರಾಮ ನೀಡುವ ಕ್ರೂಸರ್ ಬೈಕ್ಗಳು ಇಷ್ಟವಾಗುತ್ತವೆ. ಮತ್ತೆ ಕೆಲವರಿಗೆ ಬಲಶಾಲಿ ಎಂಜಿನ್, ಆರಾಮ ಎರಡೂ ನೀಡುವ ಚಾಪರ್ಗಳು ಇಷ್ಟವಾಗುತ್ತವೆ.

ಆದರೆ ಬೇಸರದ ಸಂಗತಿಯೆಂದರೆ ದೊಡ್ಡ ಗಾತ್ರದ ಬೈಕ್ಗಳು ಭಾರತದಲ್ಲಿ ಇನ್ನೂ ಮಾರುಕಟ್ಟೆಗೆ ಬಾರದೇ ಇರುವುದು. ಭಾರತದಲ್ಲಿ ರಾಯಲ್ ಎನ್ಫೀಲ್ಡ್ನ ಬುಲೆಟ್, ಥಂಡರ್ಬರ್ಡ್, ಕ್ಲಾಸಿಕ್ ಮಾದರಿಯ ದೊಡ್ಡ ಗಾತ್ರದ ಬೈಕ್ಗಳು ಇವೆಯಾದರೂ ಅವು ಪರಿಪೂರ್ಣ ಪ್ರಮಾಣದ ಕ್ರೂಸರ್, ಚಾಪರ್ ಬೈಕ್ಗಳಲ್ಲ. ರಾಯಲ್ ಎನ್ಫೀಲ್ಡ್ನ ಗರಿಷ್ಠ ಎಂಜಿನ್ ಸಾಮರ್ಥ್ಯ ಕೇವಲ 350 ಸಿಸಿ ಹಾಗೂ 500 ಸಿಸಿಯಷ್ಟೇ.

ನಿಜವಾದ ಕ್ರೂಸರ್, ಚಾಪರ್ ಬೈಕ್ಗಳನ್ನು ತಯಾರು ಮಾಡುವ ಅಮೆರಿಕಾದ ಹಾರ್ಲಿ ಡೇವಿಡ್ಸನ್, ಟ್ರಿಂಫ್ ಬೈಕ್ಗಳು ಗರಿಷ್ಠ 1200 ಸಿಸಿ ಎಂಜಿನ್ ಸಾಮರ್ಥ್ಯದ ಬೈಕುಗಳನ್ನು ರಸ್ತೆಗೆ ಬಿಟ್ಟಿವೆ.ಮಾಡಿಫಯರ್ನ ಜನನ!

ಹಾಗಾದರೆ ಈ ರೀತಿಯ ಬೈಕ್ಗಳನ್ನು ಹೊಂದುವುದು ಹೇಗೆ? ಭಾರತೀಯ ಮಾರುಕಟ್ಟೆಯಲ್ಲಿ ಈ ರೀತಿಯ ಬೈಕ್ಗಳೇ ಇಲ್ಲ. ಹಾರ್ಲಿ ಡೇವಿಡ್ಸನ್ ಮಾದರಿಯ ಬೈಕ್ಗಳನ್ನು ವಿದೇಶದಿಂದ ಆಮದು ಮಾಡಿಸಿಕೊಳ್ಳುವುದು ತುಂಬಾ ದುಬಾರಿ. ಈ ರೀತಿಯ ಚಿಂತೆಗೆ ಈಡಾದವರಲ್ಲಿ ಮಂಗಳೂರಿನ ಅಮೃತ್ರಾಜ್ ಸಹ ಒಬ್ಬರು.

ಮಂಗಳೂರಿನಲ್ಲೇ ಹುಟ್ಟಿ ಬೆಳೆದು, ಮುಂಬೈನಲ್ಲಿ ಬಿ.ಕಾಂ ಓದುತ್ತಿದ್ದ ಅಮೃತ್ ತಂದೆಯ ಬಳಿ ಇದ್ದ ರಾಜ್ದೂತ್, ಅಣ್ಣನ ಯಜ್ಡಿ ಬೈಕ್ಗಳನ್ನು ಓಡಿಸುತ್ತಿದ್ದರು. ನಂತರ ಯಮಹಾದ ಆರ್ಎಕ್ಸ್ 135 ಬೈಕ್ ಸಹ ಹೊಂದಿದ್ದರು.

ಆದರೆ ಈ ಬೈಕ್ಗಳ ಸಾಮರ್ಥ್ಯದಿಂದ ಸಮಾಧಾನ ಹೊಂದದ ಅಮೃತ್ ರಾಯಲ್ ಎನ್ಫೀಲ್ಡ್ ಬೈಕ್ಗಳ ಕಡೆ ಚಿತ್ತಹರಿಸಿ, ಎನ್ಫೀಲ್ಡ್ ಅನ್ನು ಹಾರ್ಲಿ ಡೇವಿಡ್ಸನ್ ಮಾಡಲು ಮುಂದಾದರು. ಅದರ ಪರಿಣಾಮವಾಗಿ ಬೈಕ್ ಮಾಡಿಫಿಕೇಷನ್ ಇವರ ಪ್ರವೃತ್ತಿಯಾಯಿತು. ಆಮೇಲೆ ಅದೇ ವೃತ್ತಿಯಾಗಿ ಬದಲಾಯಿತು.

ಡಿಪ್ಲೊಮಾ ಇನ್ ಆಟೋಮೊಬೈಲ್ ಎಂಜಿನಿಯರಿಂಗ್ ಓದಿರುವ ಅಮೃತ್ರಾಜ್ಗೆ ಕೇವಲ 30 ವರ್ಷ. ಕೆಲಸ ಆರಂಭಿಸಿದಾಗ 24ರ ಯುವಕ. ಇವರು ಅಮೆರಿಕಾದ ಪ್ರಸಿದ್ಧ ಬೈಕ್ ಎಂಜಿನಿಯರ್, ಮೆಕಾನಿಕ್ ಬಿಲ್ಲಿ ಲೇನ್ರಿಂದ ಪ್ರಭಾವಿತರಾದವರು. ಅಮೆರಿಕದಲ್ಲಿ ಅತಿ ದೊಡ್ಡ ಉದ್ದಿಮೆಯಾಗಿ ಬೆಳೆದಿರುವ ಬೈಕ್ ಮಾಡಿಫಿಕೇಷನ್ಗೆ ಸಾಕಷ್ಟು ಅನುಕೂಲವೂ ಇದೆ.

ಆದರೆ ಭಾರತದಲ್ಲಿ ಇದು ಹೊಸ ಪರಿಕಲ್ಪನೆಯಾದ ಕಾರಣ ಸಾಕಷ್ಟು ಅನುಕೂಲಗಳಿಲ್ಲ. ಹಾಗಾಗಿ ಬೈಕ್ನ ಡಿಸೈನಿಂಗ್, ಎಂಜಿನ್ ಬದಲಾವಣೆ, ಚಾಸೀಸ್ ರಚನೆ, ಚಾಸೀಸ್ ಬ್ಯಾಲೆನ್ಸಿಂಗ್ ಪ್ರತಿಯೊಂದನ್ನೂ ಪುಸ್ತಕಗಳನ್ನು ಓದಿ ತಿಳಿಯುತ್ತ, ಪ್ರಾಯೋಗಿಕವಾಗಿ ಮೆಕ್ಯಾನಿಕ್ ಕೆಲಸ ಆರಂಭಿಸಿಯೇ ಅಮೃತ್ ಕಲಿಯಬೇಕಾಯಿತು.

ಬುಲೆಟ್ನ ಎಂಜಿನ್ ಹಾಗೂ ಚಾಸೀಸ್ ಇಟ್ಟುಕೊಂಡು ಅಮೃತ್, ಹಾರ್ಲಿ ಡೇವಿಡ್ಸನ್ ಮಾದರಿಯ ಬೈಕ್ಗಳನ್ನು ತಯಾರಿಸಿಯೇ ಬಿಟ್ಟರು. ಅಮೃತ್ 2006ರಲ್ಲಿ ಮೊದಲ ಬೈಕ್ ಆಗಿ ರಾಯಲ್ ಎನ್ಫೀಲ್ಡ್ ಬುಲೆಟ್ ಎಂಜಿನ್ ಆಧಾರಿತ ಹಾರ್ಲಿ ಡೇವಿಡ್ಸನ್ ಮಾದರಿಯ ರಿವಾಲ್ವರ್ ಬೈಕ್ ತಯಾರಿಸಿದರು. 350 ಸಿಸಿಯ ಅದ್ಭುತ ಬೈಕ್ ಅದು.

ಅಂದಿನಿಂದ ಈವರೆಗಿನ 6 ವರ್ಷಗಳಲ್ಲಿ ಅಮೃತ್ 20ಕ್ಕೂ ಹೆಚ್ಚು ಬೈಕ್ಗಳನ್ನು ಮಾಡಿಫೈ ಮಾಡಿದ್ದಾರೆ. ಇವೆಲ್ಲವೂ ಚಾಪರ್ಗಳು. ವಿಶೇಷ ವಿನ್ಯಾಸವುಳ್ಳ ಸ್ಟ್ರೀಟ್ ಫೈಟರ್, ರಂಬ್ಲರ್, ಆರ್-790, ವೆನಮ್ ಹೆಸರಿನ ಬೈಕ್ಗಳವು. ರಾಯಲ್ ಎನ್ಫೀಲ್ಡ್ ನಡೆಸುವ ರೈಡರ್ ಮೇನಿಯಾ ಸ್ಪರ್ಧೆಯಲ್ಲಿ ಆರ್-790 ಬೈಕ್ಗೆ ಬೆಸ್ಟ್ ಡಿಸೈನ್ ಹಾಗೂ ವೆನಮ್ ಬೈಕ್ಗೆ ನೀಟ್ ಡಿಸೈನ್ ಪ್ರಶಸ್ತಿಯೂ ಸಿಕ್ಕಿದೆ.

ಅಮೃತ್ ವಿಶೇಷ
ಅಮೃತ್ ಕೇವಲ ಬೈಕ್ ಮೆಕಾನಿಕ್ ಅಲ್ಲ. ಹಣ ಮಾಡುವುದು ಉದ್ದೇಶವಲ್ಲ. ಹಾಗಾಗಿ ಅಮೃತ್ ಮೆಕಾನಿಕ್ಗಳ ಮಧ್ಯೆಯೇ ವಿಶೇಷವಾಗಿ ಕಾಣುತ್ತಾರೆ. ಈವರೆಗೆ ಅವರು ಮಾಡಿಫೈ ಮಾಡಿರುವ ಬೈಕ್ಗಳು ಪ್ರತಿಯೊಂದೂ ವಿಭಿನ್ನ ರಚನೆಯದು. ಒಂದರಂತೆ ಇನ್ನೊಂದಿಲ್ಲ. ಜತೆಗೆ ಬೈಕ್ ಮಾಲೀಕರು ತಮ್ಮ ಬೈಕ್ ತಂದುಕೊಟ್ಟರೆ ಮಾತ್ರ ಮಾಡಿಫೈ ಮಾಡುತ್ತಾರೆ.
ಗ್ರಾಹಕನ ಜತೆ ಚರ್ಚಿಸಿ, ಅವರ ಇಷ್ಟಗಳನ್ನು ತಿಳಿದುಕೊಂಡು, ಕಂಪ್ಯೂಟರ್ ಸಹಾಯವಿಲ್ಲದೆ ಕೈಯಲ್ಲೇ ಬೈಕ್ನ ಸ್ಕೆಚ್ ಮಾಡಿ ಡಿಸೈನ್ ತೋರಿಸುತ್ತಾರೆ. ಒಮ್ಮೆ ಡಿಸೈನ್ ಗ್ರಾಹಕನಿಗೆ ಇಷ್ಟವಾದ ಮೇಲೆ ಗರಿಷ್ಠ 3 ತಿಂಗಳ ಕಾಲವಕಾಶ ತೆಗೆದುಕೊಂಡು ಅಸೈನ್ಮೆಂಟ್ ಮುಗಿಸುತ್ತಾರೆ.

ಆಲ್ ಇನ್ ಒನ್!
ಅಂದರೆ, ಅಕ್ಷರಶಃ ಇವರು ಆಲ್ ಇನ್ ಒನ್ ಮೆಕ್ಯಾನಿಕ್. ಬೈಕ್ನ ಚಾಸೀಸ್ ನಿರ್ಮಾಣ, ಫ್ಯಾಬ್ರಿಕೇಷನ್, ವೈರಿಂಗ್, ಎಲೆಕ್ಟ್ರಿಕಲ್ಸ್, ಬಣ್ಣ ಪ್ರತಿಯೊಂದು ಕೆಲಸವನ್ನೂ ಒಬ್ಬರೇ ಮಾಡುತ್ತಾರೆ. ಬೈಕ್ ಕೆಲಸ ಎಂದರೆ ಅಷ್ಟೊಂದು ಹುಚ್ಚು ಇವರಿಗೆ.

ರಾಯಲ್ ಎನ್ಫೀಲ್ಡ್ ಬೈಕ್ನ ಬೆಲೆ ಮಾರುಕಟ್ಟೆಯಲ್ಲಿ ಈಗ ಕನಿಷ್ಠ ಒಂದು ಲಕ್ಷ ರೂಪಾಯಿಯಿದ್ದು, ಬೈಕ್ ಮಾಡಿಫೈ ಮಾಡುವುದು ಕಡಿಮೆ ಖರ್ಚಿನಲ್ಲಿ ಆಗುವುದಿಲ್ಲ. ಬೈಕ್ ಸಂಪೂರ್ಣ ಸಿದ್ಧವಾದಾಗ ಗರಿಷ್ಠ ಮೂರ್ನಾಲ್ಕು ಲಕ್ಷ ರೂಪಾಯಿಯವರೆಗೂ ಖರ್ಚಾಗುತ್ತದೆ.

ಮೋಟರ್ ಹೆಡ್ ಮೋಜು!
ಅಮೃತ್ ಈಗ ಹೊಸ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಈ ಹೊಸ ಬೈಕ್ ಹೆಸರು ಮೋಟರ್ ಹೆಡ್. 1930ರಲ್ಲಿ ಇಂಗ್ಲೆಂಡ್ನಲ್ಲಿ ಬ್ರಾಡ್ ಟ್ರ್ಯಾಕ್ ರೇಸರ್ ಬೈಕ್ಗಳನ್ನು ನಿರ್ಮಿಸಲಾಗುತ್ತಿತ್ತು. 21 ಇಂಚ್ ಅಗಲದ ದಪ್ಪನೆಯ ಚಕ್ರಗಳ ಈ ಬೈಕ್ ರೇಸಿಂಗ್ಗೆ ಪ್ರಸಿದ್ಧವಾಗಿದ್ದವು. ಇಂತಹ ಬೈಕನ್ನು ಮತ್ತೆ ನಿರ್ಮಿಸಹೊರಟಿರುವುದು ಅಚ್ಚರಿ ಮೂಡಿಸಿದೆ.

ರಾಯಲ್ ಎನ್ಫೀಲ್ಡ್ ಬುಲೆಟ್ನ ಎಂಜಿನ್ ಇದರಲ್ಲಿದೆ. ಚಾಸೀಸ್ ಸಂಪೂರ್ಣ ಹೊಸತು. ಸಾಮಾನ್ಯವಾಗಿ ಎಲ್ಲ ಬೈಕ್ಗಳಲ್ಲಿ ಚಾಸೀಸ್ನ ಮೇಲ್ಭಾಗದಲ್ಲಿ ಪೆಟ್ರೋಲ್ ಟ್ಯಾಂಕ್ ಇರುತ್ತದೆ. ಆದರೆ ಈ ಬೈಕ್ನಲ್ಲಿ ಚಾಸೀಸ್ನ ಕೆಳಭಾಗದಲ್ಲಿ ಇರಲಿದೆ. ಬೈಕ್ನ ಚಾಸೀಸ್ ಕೊಳವೆಯಿಂದ ನಿರ್ಮಿಸಲಾದ ವಿಶೇಷ ವಿನ್ಯಾಸದ್ದು. ಸಾಮಾನ್ಯವಾಗಿ ಬೈಕ್ಗಳ ಮುಂದಿನ ಚಕ್ರಕ್ಕೆ ಟೆಲೆಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಇರುತ್ತದೆ.

ಆದರೆ 1930ರಲ್ಲಿ ಈ ತಂತ್ರಜ್ಞಾನ ಇರಲಿಲ್ಲ. ಹಾಗಾಗಿ ಆಗ ಲೀಫ್ ಸ್ಪ್ರಿಂಗ್ ಸಸ್ಪೆನ್ಶನ್ ಬಳಸುತ್ತಿದ್ದರು. ಈಗ ಇದನ್ನು ಲಾರಿ, ಟ್ರಕ್ಗಳಲ್ಲಿ ಬಳಸುತ್ತಾರೆ. ಈ ರೀತಿ ಸಸ್ಪೆನ್ಶನ್ ಸಿಸ್ಟಂ ಈ ಮೋಟಾರ್ ಹೆಡ್ ಬೈಕ್ನಲ್ಲಿ ಅಳವಡಿಸಲಾಗುತ್ತಿದೆ.

ಜತೆಗೆ ಹಿಂಬದಿಯ ಮೇಲ್ನೋಟಕ್ಕೆ ಕಾಣದ, ಅಡಗಿಸಿಟ್ಟ ಸಸ್ಪೆನ್ಶನ್, ಹ್ಯಾಂಡಲ್ ಬಾರ್ನ ಕೊಳವೆಗಳ ಒಳಗಿರುವ ಆಕ್ಸಿಲರೇಟರ್ (ಇಂಟರ್ನಲ್ ಥ್ರಾಟಲ್ ಆಕ್ಸಿಲರೇಷನ್) ಹಾಗೂ ಕ್ಲಚ್ (ಟ್ವಿಸ್ಟ್ ಗ್ರಿಪ್) ವೈಯರ್ಗಳು ಇವೆ. 350 ಸಿಸಿ ಎಂಜಿನ್ನ ಬೋರ್ ಸಿಸ್ಟಂ ಬದಲಿಸಿ, 500 ಸಿಸಿ ಮೇಲ್ದರ್ಜೆಗೆ ಏರಿಸಲಾಗಿದೆ. ಚೈನ್ ಡ್ರೈವ್ನ್ನು ತೆಗೆದು, ಬೆಲ್ಡ್ ಡ್ರೈವ್ ನೀಡಲಾಗಿದೆ. ಹಾಗಾಗಿ ಬೈಕ್ಗೆ ನಯವಾದ ಚಾಲನೆ ಸಿಗಲಿದೆ. ಅಲ್ಲದೇ, ಗರಿಷ್ಟ 130 ಕಿಲೋ ಮೀಟರ್ ಸ್ಪೀಡ್ ಸಹ ಸಿಗಲಿದೆ.

ಬೈಕ್ನ ಕೆಲಸ ಸಾಕಷ್ಟು ಮುಗಿದಿದ್ದು, ಇನ್ನೇನು ರಸ್ತೆಗಿಳಿಯಲಿರುವುದು ವಿಶೇಷ. ಈ ಬೈಕ್ಗೆ 21 ಇಂಚ್ ವೀಲ್ ಇರುವುದು ವಿಶೇಷ. ಇದಕ್ಕಾಗಿ ಟಯರ್ ಸಿಗದೆ ಅಮೆರಿಕಾದಿಂದ ತಲಾ 10 ಸಾವಿರ ರೂಪಾಯಿ ನೀಡಿ ಆಮದು ಮಾಡಿಕೊಂಡಿದ್ದಾರೆ. ಇದಕ್ಕೆ ಬೇಕಾದ ರಿಮ್ ಸಿಗದೆ, ನವದೆಹಲಿಯ ಮನದೀಪ್ ಸಂಸ್ಥೆಗೆ ಕೋರಿದಾಗ, ಮಾಲೀಕರಾದ ಅಶ್ವಿನಿ, ಬೈಕ್ನ ಡಿಸೈನ್ ನೋಡಿ ಪುಳಕಿತರಾಗಿ ಎರಡು ರಿಮ್ಗಳನ್ನು ಅಮೃತ್ಗೆ ಉಚಿತವಾಗಿ ನೀಡಿದ್ದಾರೆ.

ಗನ್ ಮೆಟಲ್ ಸ್ವರೂಪದಲ್ಲಿ ಹೊರಬರಲಿರುವ ಈ ಬೈಕ್ (ಸ್ಕೆಚ್ ನೋಡಿ) ಕಣ್ಣಿಗೆ ಹಬ್ಬವಾಗುವುದರಲ್ಲಿ ಅನುಮಾನವೇ ಇಲ್ಲ. ಕೆಲವೇ ತಿಂಗಳು ಕಾದರೆ ರಸ್ತೆಗಳಲ್ಲಿ ಮಿಂಚಿನ ವೇಗದ ಮೋಟಾರ್ ಹೆಡ್ ಸಂಚಾರವನ್ನು ಕಣ್ತುಂಬಿಕೊಳ್ಳಬಹುದು! ಇವರ ಮೊಬೈಲ್ ಸಂಖ್ಯೆ: 98451 35307.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.