ಸೋಮವಾರ, ಮಾರ್ಚ್ 1, 2021
31 °C

ಅಮೆರಿಕ: ಲೂಸಿಯಾನದಲ್ಲಿ ಭಾರಿ ಪ್ರವಾಹ, 5 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕ: ಲೂಸಿಯಾನದಲ್ಲಿ ಭಾರಿ ಪ್ರವಾಹ, 5 ಮಂದಿ ಸಾವು

ವಾಷಿಂಗ್ಟನ್ (ಎಎಫ್‌ಪಿ): ಲೂಸಿಯಾನದಲ್ಲಿ ಉಂಟಾದ ಭಾರಿ ಪ್ರವಾಹದಿಂದ ಐವರು ಮೃತಪಟ್ಟಿದ್ದಾರೆ. ತುರ್ತು ಕಾರ್ಯಪಡೆ ಸಿಬ್ಬಂದಿಯು ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 20 ಸಾವಿರ ಜನರನ್ನು ರಕ್ಷಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.ಮಳೆ ನಿರಂತರವಾಗಿ ಸುರಿಯುತ್ತಿದೆ. ಇದು ಆತಂಕಕಾರಿ ವಿಚಾರ. ಅಮೆರಿಕ ಸರ್ಕಾರವು ಲೂಸಿಯಾನ ಪ್ರವಾಹವನ್ನು ಪ್ರಾಕೃತಿಕ ವಿಕೋಪ ಎಂದು ಘೋಷಿಸಿದೆ ಎಂದು ಗವರ್ನರ್ ಜಾನ್ ಬೆಲ್ ಎಡ್ವರ್ಡ್ಸ್‌ ತಿಳಿಸಿದ್ದಾರೆ.ನಿರಂತರವಾಗಿ ಪರಿಹಾರ ಕಾರ್ಯಾಚರಣೆ ನಡೆಸಲು ಅಗತ್ಯ ತುರ್ತು ನಿಧಿಯನ್ನು ಶ್ವೇತಭವನ ಒದಗಿಸಿದೆ.ಮಹಿಳೆಯಿದ್ದ ಕಾರೊಂದು ಪ್ರವಾಹದಲ್ಲಿ ಶನಿವಾರ ರಾತ್ರಿ ಕೊಚ್ಚಿಹೋಗಿದೆ. ಭಾರಿ ಮಳೆಯಿಂದ ನದಿಗಳು ಉಕ್ಕಿ ಹರಿದು ಹಲವು ಪ್ರದೇಶಗಳು ಮುಳುಗಡೆಯಾಗಿವೆ. ರಾಜಧಾನಿ ಬ್ಯಾಟನ್ ರಾಗ್‌ ಬಳಿಯ ಲಿವಿಂಗ್‌ಸ್ಟನ್ ಪೆರಿಷ್‌ನಿಂದ ಜನರನ್ನು ಸ್ಥಳಾಂತರ ಮಾಡಲಾಗಿದೆ.ಬ್ಯಾಟನ್ ರಾಗ್‌ನಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯೊಬ್ಬಳನ್ನು ಪವಾಡಸದೃಶ್ಯ ರೀತಿಯಲ್ಲಿ ರಕ್ಷಿಸಲಾಗಿದೆ.ಗವರ್ನರ್ ಮನೆಗೂ ನೀರು:  ಲೂಸಿಯಾನ ಗವರ್ನರ್  ಅವರ ಕುಟುಂಬ ವಾಸಿಸುತ್ತಿದ್ದ ಮನೆಯ ನೆಲಮಹಡಿಗೆ ನೀರು ನುಗ್ಗಿದ್ದರಿಂದ ಇಡೀ ಕುಟುಂಬವನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗಿದೆ.ಶುಕ್ರವಾರದಿಂದ ಇಲ್ಲಿ ಭಾರಿ ಮಳೆ ಸುರಿಯುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.