ಬೆಂಗಳೂರು: ನಿಯಂತ್ರಣಕ್ಕೆ ಬಾರದ ಒತ್ತುವರಿ, ಮರಗಳ ನಾಶ ಮತ್ತು ನೈಸರ್ಗಿಕ ಸವಕಳಿಯಿಂದ ಅರಣ್ಯ ಸಂರಕ್ಷಣೆ ಹಾಗೂ ಅಭಿವೃದ್ಧಿ ತೊಡಕಾಗಿ ಪರಿಣಮಿಸಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮ ಹೇಳಿದರು.

ಅರಣ್ಯ ನಾಶ ಮತ್ತು ಮರಗಳ ಜೀರ್ಣದಿಂದ ಆಗುತ್ತಿರುವ ಮಾಲಿನ್ಯ ತಡೆಗಟ್ಟಲು ಅಮೆರಿಕದ ಯುಎಸ್-ಏಡ್ ಸಂಸ್ಥೆ ಹಮ್ಮಿಕೊಂಡಿರುವ ರೆಡ್ ಪ್ಲಸ್ ಯೋಜನೆಗೆ ಸಂಬಂಧಿಸಿದಂತೆ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

`ಪ್ರತಿವರ್ಷ 80,000 ಹೆಕ್ಟೇರ್ ಪ್ರದೇಶದಲ್ಲಿ ಸಸಿ ನೆಡುತ್ತಿದ್ದರೂ ರಾಜ್ಯದಲ್ಲಿ ಅರಣ್ಯ ಪ್ರದೇಶ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚುತ್ತಿಲ್ಲ. ಮೂರು ವರ್ಷಗಳಲ್ಲಿ ವನ್ಯಜೀವಿ ಅರಣ್ಯ ಪ್ರಮಾಣ 6,500 ಚದರ ಕಿ.ಮೀ.ಯಿಂದ 9,200 ಚದರ ಕಿ.ಮೀ.ಗೆ ಹೆಚ್ಚಳವಾಗಿದೆ. ಇನ್ನೊಂದು ವರ್ಷದಲ್ಲಿ ವನ್ಯಜೀವಿ ಅರಣ್ಯದ ಪ್ರಮಾಣ 10,000 ಚದರ ಕಿ.ಮೀ.ಗೆ ಏರಿಕೆಯಾಗುವ ಸಾಧ್ಯತೆ ಇದೆ' ಎಂದರು.

`ಅರಣ್ಯ ನಾಶ ತಡೆಗಟ್ಟಿ, ಮರಗಳ ಪ್ರದೇಶವನ್ನು ಹೆಚ್ಚಿಸಲು ಹಲವು ವರ್ಷಗಳಿಂದ ಇಲಾಖೆ ಪ್ರಯತ್ನ ನಡೆಸಿದ್ದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. ಎದುರಾದ ಅಡಚಣೆ ನಿವಾರಿಸಲು ರೆಡ್ ಪ್ಲಸ್ ಯೋಜನೆಯಿಂದ ತಾಂತ್ರಿಕ ಬೆಂಬಲ ಸಿಗಬೇಕು' ಎಂದು ಆಶಿಸಿದರು.

ಅರಣ್ಯದ ಮೇಲೆ ಮಾನವನ ಅವಲಂಬನೆ, ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಅರಣ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ರೆಡ್ ಪ್ಲಸ್ ಯೋಜನೆ ಮೂಲಕ ದೇಶದ ನಾಲ್ಕು ಅರಣ್ಯ ಪ್ರದೇಶಗಳಲ್ಲಿ ಅಧ್ಯಯನ ನಡೆಸಲಾಗುತ್ತದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಗೆ ಸೇರಿದ ಅರಣ್ಯ ಪ್ರದೇಶವೂ ಅವುಗಳಲ್ಲಿ ಒಂದಾಗಿದೆ. ಐದು ವರ್ಷಗಳ ಈ ಯೋಜನೆ ಆಗಲೇ ಒಂದು ವರ್ಷ ಪೂರೈಸಿದೆ.

ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವವೈವಿಧ್ಯ ಸಂರಕ್ಷಣೆ (ಕೆಎಸ್ಎಫ್ಎಂಬಿಸಿ) ಸಂಸ್ಥೆ ಯೋಜನಾ ನಿರ್ದೇಶಕ ವಿನಯ್ ಲೂತ್ರಾ, `ರಾಜ್ಯದಲ್ಲಿ ಇಂಗಾಲ ಹೊರಸೂಸುತ್ತಿರುವ ಪ್ರಮಾಣವನ್ನು ರೆಡ್ ಪ್ಲಸ್ ಮೂಲಕ ಅಳೆಯಲಾಗುತ್ತದೆ' ಎಂದು ಹೇಳಿದರು.

ಕಾರ್ಯಾಗಾರ ಉದ್ಘಾಟಿಸಿದ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಶ್ರೀಧರನ್, `ಚರ್ಚೆಗಳು ಕೇವಲ ಕಾಗದದ ರೂಪದಲ್ಲಿ ಉಳಿಯದೆ ನಿರ್ಧಾರಗಳಾಗಿ ಹೊರಹೊಮ್ಮಬೇಕು. ಹಾಗಾದಾಗ ಮಾತ್ರ ಚರ್ಚೆಗೆ ಬೆಲೆ ಬರುತ್ತದೆ' ಎಂದರು.

ಕೇಂದ್ರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಸುಭಾಷ್ಚಂದ್ರ, ಯೋಜನಾ ಮುಖ್ಯಸ್ಥ ವರ್ಗೀಸ್ ಪಾಲ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.