ನವದೆಹಲಿ: ಕಳೆದ 37 ವರ್ಷಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ಮುಂಬೈನ ನರ್ಸ್ ಅರುಣಾ ರಾಮಚಂದ್ರ ಶಾನಭಾಗ್ ಅವರ ದಯಾ ಮರಣಕ್ಕಾಗಿ ಸಲ್ಲಿಸಿದ ಮನವಿ ಕುರಿತ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಸೋಮವಾರಕ್ಕೆ ಕಾಯ್ದಿರಿಸಿತು. ಇದೇ ವೇಳೆ ದಯಾಮರಣ ಕೋರಿಕೆ ಆಸ್ತಿ ಕಬಳಿಸುವ ಸಂಚು ಕೂಡ ಆಗಬಲ್ಲದು ಎಂದೂ ಸಂಶಯ ವ್ಯಕ್ತಪಡಿಸಿತು.

ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ನಿಂದ ಘೋರ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ 37 ವರ್ಷಗಳಿಂದ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿರುವ ಅರುಣಾ ಶಾನಭಾಗ್ ಅವರ ದಯಾ ಮರಣಕ್ಕೆ ಅವಕಾಶ ನೀಡಲು ಕೋರಿ ಗೆಳತಿ ಪಿಂಕಿ ವಿರಾನಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಬುಧವಾರ ಸುಮಾರು ನಾಲ್ಕು ತಾಸು ವಾದಗಳನ್ನು ಆಲಿಸಿತು.

ಆಸ್ಪತ್ರೆಯ ವಕೀಲರು ಸೇರಿ ಹಲವು ವ್ಯಕ್ತಿಗಳಿಂದ ಅಭಿಪ್ರಾಯ ಪಡೆದ ಬಳಿಕ ತೀರ್ಪು ಕಾಯ್ದಿರಿಸಿದ ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ಜ್ಞಾನ್ ಸುಧಾ ಮಿಶ್ರ ಅವರನ್ನೊಳಗೊಂಡ ಪೀಠ, ದಯಾಮರಣದ ವಿಷಯದಲ್ಲಿ ಇರುವ ಅಪಾಯ ಹಾಗೂ ಮತ್ತಿತರು ಅಂಶಗಳನ್ನು ಪರಿಶೀಲಿಸುವುದಾಗಿ ತಿಳಿಸಿತು.

‘ದಯಾಮರಣದ ಅವಕಾಶವನ್ನು ಕೆಲವರು ಆಸ್ತಿ ಕಬಳಿಸಲು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಬಹುದು. ಇದರಲ್ಲಿರುವ ಅಪಾಯದ ಅರಿವು ನಮಗಿದೆ. ಆಸ್ತಿ ಆಸೆಗಾಗಿ ಮಗನೇ ಅಪ್ಪನ ದಯಾಮರಣ ಕೋರಬಹುದು’ ಎಂದು ನ್ಯಾಯಮೂರ್ತಿ ಕಟ್ಜು ಶಂಕೆ ವ್ಯಕ್ತಪಡಿಸಿದರು.

ವ್ಯಕ್ತಿಯೊಬ್ಬ ಅಪಘಾತದಿಂದ ಅರೆಪ್ರಜ್ಞಾವಸ್ಥೆಗೆ ತಲುಪಿದ ಎಂದುಕೊಳ್ಳೋಣ. ಆಗ ಆತನಿಗೆ ಅಳವಡಿಸಿದ್ದ ಜೀವ ರಕ್ಷಕ ಸೌಲಭ್ಯವನ್ನು ವಾಪಸು ತೆಗೆಯಬಹುದೇ?- ಎಂದೂ ಕೋರ್ಟ್ ಕೇಳಿತು.

ದಯಾಮರಣಕ್ಕೆ ಅನುಮತಿ ನೀಡುವ ವಿವಾದಾತ್ಮಕ ವಿಷಯದ ಬಗ್ಗೆ ಅಟಾರ್ನಿ ಜನರಲ್ ಜಿ.ಇ. ವಹನ್ವತಿ, ಆಸ್ಪತ್ರೆ ಪರ ವಕೀಲ ವಲ್ಲಭ್ ಸಿಸೊಡಿಯಾ ಮತ್ತು ಶೇಖರ್ ನಾಫಂಡೆ, ಅರುಣಾ ಅವರ ಗೆಳತಿ ಪಿಂಕಿ ವಿರಾನಿ ಸೇರಿದಂತೆ ಹಲವರು ಪೀಠದ ಮುಂದೆ ಅಭಿಪ್ರಾಯ ತಿಳಿಸಿದರು.

ಇಚ್ಛಾ ಮರಣಕ್ಕೆ ಅನುಮತಿ ನೀಡುವುದನ್ನು ತೀವ್ರ ವಿರೋಧಿಸಿದ ವಹನ್ವತಿ ಅವರು, ‘ಇದು ಕ್ರೂರ, ಅಮಾನವೀಯ ಮತ್ತು ಅಸಹನೀಯ. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ’ ಎಂದರು.

37 ವರ್ಷಗಳಿಂದ ಅರುಣಾ ಅವರನ್ನು ಆಸ್ಪತ್ರೆಯ ದಾದಿಯರು ಮತ್ತು ವೈದ್ಯರು ‘ಅತ್ಯಂತ ಕಾಳಜಿಯಿಂದ’ ನೋಡಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಒಂದೇ ಒಂದು ಹಾಸಿಗೆ ಹುಣ್ಣು ಆಗದಂತೆ ನೋಡಿಕೊಂಡಿದ್ದಾರೆ. ಆಸ್ಪತ್ರೆಯವರೆಲ್ಲರೂ ದಯಾ ಮರಣವನ್ನು ವಿರೋಧಿಸುತ್ತಾರೆ ಎಂದು ಸಿಸೊಡಿಯಾ ಹೇಳಿದರು.

ದಯಾಮರಣ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಪಿಂಕಿ ವಿರಾನಿ ಅವರಿಗೆ ಯಾವುದೇ ಅರ್ಹತೆ ಇಲ್ಲ. ಅಷ್ಟು ವರ್ಷಗಳಿಂದ ನೋಡಿಕೊಳ್ಳುತ್ತಿರುವ ಆಸ್ಪತ್ರೆ ಅಥವಾ ಅಲ್ಲಿನ ಸಿಬ್ಬಂದಿಗೆ ಮಾತ್ರ ಅರುಣಾ ಭವಿಷ್ಯ ನಿರ್ಧರಿಸಲು ಅರ್ಹರು ಎಂದು ಆಸ್ಪತ್ರೆ ಪರ ವಕೀಲರು ವಾದಿಸಿದರು.

ದಯಾ ಮರಣಕ್ಕೆ ಅರ್ಜಿ ಸಲ್ಲಿಸಿರುವ ಪಿಂಕಿ ವಿರಾನಿ ಅವರು, ‘ದೌರ್ಜನ್ಯ ನಡೆಸಿದಾತ ನಾಯಿಗೆ ಕಟ್ಟುವ ಸರಳಿನಿಂದ ಅರುಣಾ ಕುತ್ತಿಗೆ ಬಿಗಿದಿದ್ದರಿಂದ ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡು ಮೆದುಳಿನ ಹೊರಪದರ ಹಾನಿಗೊಳಗಾಗಿದೆ. ಈಗ ಸುಮಾರು 60 ವರ್ಷದ ಅಸುಪಾಸಿನಲ್ಲಿರುವ ಅರುಣಾ ಘಟನೆ ಬಳಿಕ ಕಳೆದ 37 ವರ್ಷಗಳಿಂದ ತೂಕ ಕಳೆದು ‘ಹಗುರ’ ಆಗಿದ್ದಾರೆ ಮತ್ತು ಮೂಳೆಗಳು ಮೆದುವಾಗಿವೆ ಎಂದಿದ್ದಾರೆ.

ಆಕೆಯ ಮಣಿಕಟ್ಟನ್ನು ತಿರುಚಲಾಗಿದೆ. ಹಲ್ಲುಗಳು ಕೊಳೆಯುತ್ತಿವೆ ಮತ್ತು ಆಕೆಗೆ ಆಹಾರಪದಾರ್ಥಗಳನ್ನು ಮೆದುಮಾಡಿ ನೀಡಬೇಕಾಗಿದೆ. ಆಕೆಯ ಮಿದುಳು ಅಕ್ಷರಶಃ ಕೆಲಸ ಮಾಡುತ್ತಿಲ್ಲ. ಹೊರಜಗತ್ತಿನ ಪರಿವೆ ಆಕೆಗೆ ಇಲ್ಲವಾಗಿದೆ.

ಆಕೆ ಏನನ್ನೂ ನೋಡುವುದಿಲ್ಲ, ಕೇಳುವುದಿಲ್ಲ. ಆಕೆಗೆ ಯಾವುದೇ ರೀತಿಯಲ್ಲೂ ಸಂವಾದ ಸಾಧ್ಯವಾಗುತ್ತಿಲ್ಲ.
ಈ ಕಾರಣ ಆಕೆಯ ದಯಾ ಮರಣಕ್ಕೆ ಅವಕಾಶ ನೀಡಬೇಕು ಎಂದು ವಿರಾನಿ ಕೋರಿದ್ದಾರೆ.

ಆಸ್ಪತ್ರೆ ಯತ್ನಕ್ಕೆ ಶ್ಲಾಘನೆ: ಇದೇ ವೇಳೆ ನ್ಯಾಯಾಲಯ ಅರುಣಾ ಅವರನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿರುವ ಆಸ್ಪತ್ರೆ ವೈದ್ಯರು, ಸಿಬ್ಬಂದಿಯ ಯತ್ನವನ್ನೂ ಶ್ಲಾಘಿಸಿತು.

‘ಇದು ಅನೈಚ್ಛಿಕ ದಯಾ ಮರಣದ ಪ್ರಕರಣ. ಆಸ್ಪತ್ರೆಯ ಸಿಬ್ಬಂದಿಯೇ ನಿಜವಾಗಲೂ ಆಕೆಯ ಆಪ್ತ ಮಿತ್ರರು. ಪಿಂಕಿ ವಿರಾನಿಯನ್ನು ನಾವು ಗೌರವಿಸಿದರೂ ಅರುಣಾಳನ್ನು ಉಪಚರಿಸುತ್ತಿರುವವರು ಆಸ್ಪತ್ರೆಯ ಸಿಬ್ಬಂದಿ. ಅರುಣಾ ತಮ್ಮಲ್ಲೊಬ್ಬಳು ಎಂದು ಅವರು ಭಾವಿಸಿದ್ದಾರೆ. ಆಸ್ಪತ್ರೆಯ ಈ ಪ್ರಯತ್ನವನ್ನು ನಾವು ಅತ್ಯಂತ ಗೌರವಯುತವಾಗಿ ಕಾಣುತ್ತೇವೆ’ ಎಂದು ಹೇಳಿತು. ಅವರು ಮಾಡಿರುವ ಕಾರ್ಯ ಅದ್ಭುತ’ ಎಂದ ಪೀಠ ಸೋಮವಾರ ಪ್ರಕಟಿಸುವುದಾಗಿಯೂ ತಿಳಿಸಿತು.

ಈ ಹಿಂದೆ ಸುಪ್ರೀಂಕೋರ್ಟ್ ಮಿದುಳು ನಿಷ್ಕ್ರಿಯವಾಗಿರುವ ನರ್ಸ್ನ ದೈಹಿಕ ಸ್ಥಿತಿಯ ಪರಿಶೀಲನೆ ಮತ್ತು ದಯಾಮರಣದ ಬಗ್ಗೆ ತನಗೆ ನೆರವು ನೀಡಲೆಂದು ಮೂವರು ಸದಸ್ಯರ ವೈದ್ಯಕೀಯ ತಜ್ಞರ ತಂಡವನ್ನು ನೇಮಿಸಿದ್ದು ಈ ತಂಡ ಈಗಾಗಲೇ ಪೀಠಕ್ಕೆ ವರದಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.