ಅರ್ಜಿಗೆ ಮುನ್ನ ಪೂರ್ಣ ಮಾಹಿತಿ ಅಗತ್ಯ

7

ಅರ್ಜಿಗೆ ಮುನ್ನ ಪೂರ್ಣ ಮಾಹಿತಿ ಅಗತ್ಯ

Published:
Updated:
ಅರ್ಜಿಗೆ ಮುನ್ನ ಪೂರ್ಣ ಮಾಹಿತಿ ಅಗತ್ಯ

ನವದೆಹಲಿ, (ಪಿಟಿಐ): ಅಮೆರಿಕದ ಟ್ರೈವ್ಯಾಲಿ ವಿಶ್ವವಿದ್ಯಾಲಯ ನಡೆಸಿದ ವಂಚನೆಯಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳನ್ನು ಇತರ ವಿಶ್ವವಿದ್ಯಾಲಯಗಳಿಗೆ ವರ್ಗಾಯಿಸಲು ಅಮೆರಿಕದ ಅಧಿಕಾರಿಗಳು ಮುತುವರ್ಜಿ ವಹಿಸುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರ ಖಾತೆ ಸಚಿವ ಎಸ್.ಎಂ.ಕೃಷ್ಣ ಲೋಕಸಭೆಯಲ್ಲಿ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಅವರು, ‘ಅಮೆರಿಕದ ವಲಸೆ ಇಲಾಖೆ ಅರ್ಹ ವಿದ್ಯಾರ್ಥಿಗಳನ್ನು ಇತರ ವಿವಿಗಳಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು   ಆರಂಭಿಸಿದ್ದು ಸುಮಾರು 700 ವಿದ್ಯಾರ್ಥಿಗಳು ಇತರ ವಿಶ್ವವಿದ್ಯಾಲಯಗಳಿಗೆ ವರ್ಗಾವಣೆ ಹೊಂದಲಿದ್ದಾರೆ’ ಎಂದರು.ಇದೇ ವೇಳೆ ವಿದೇಶಿ ವಿಶ್ವವಿದ್ಯಾಲಯಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ವೇಳೆ ಅವುಗಳ ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕಾದುದು ಅಗತ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.‘ವಿದ್ಯಾರ್ಥಿಗಳು ಸ್ವತಃ ಮುತುವರ್ಜಿ ವಹಿಸಿ ತಮ್ಮ ಸ್ನೇಹಿತರ ಜತೆ ಅಥವಾ ಅಂತರ್ಜಾಲದಲ್ಲಿ ವಿಶ್ವವಿದ್ಯಾಲಯಗಳ ಬಗ್ಗೆ ಹುಡುಕಾಟ ನಡೆಸಬೇಕಾಗಿದೆ’ ಎಂದು ಅವರು ಹೇಳಿದರು.ಅಲ್ಲದೆ ಅಮೆರಿಕದಲ್ಲಿನ ವಿವಿಧ ಶೈಕ್ಷಣಿಕ ಸಂಸ್ಥೆಗಳ ಕುರಿತು ಭಾರತ ಸರ್ಕಾರ ಕೂಡ ಗಮನಹರಿಸಲಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry