ಶನಿವಾರ, ಜನವರಿ 18, 2020
19 °C

ಅಸಭ್ಯ ವರ್ತನೆ: ವಿವಾದದಲ್ಲಿ ಇಶಾಂತ್ ಶರ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್ (ಪಿಟಿಐ): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರು ಒಂದೊಂದೇ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿಯ ಬಳಿಕ ಇದೀಗ ಇಶಾಂತ್ ಶರ್ಮ ಅಭಿಮಾನಿಗಳ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.ಸಹ ಆಟಗಾರರ ಜೊತೆ ಗೋ-ಕಾರ್ಟಿಂಗ್ ನಡೆಸಲು ಇಲ್ಲಿನ ಕ್ಲಬ್‌ಗೆ ತೆರಳಿದ್ದ ಸಂದರ್ಭ ಇಶಾಂತ್ ಅಭಿಮಾನಿಗಳತ್ತ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆಂದು ವರದಿಯಾಗಿದೆ. ನಾಯಕ ಮಹೇಂದ್ರ ಸಿಂಗ್ ದೋನಿ ಮತ್ತು ಸಚಿನ್ ತೆಂಡೂಲ್ಕರ್ ಒಳಗೊಂಡಂತೆ ಕೆಲವು ಆಟಗಾರರು ಸೋಮವಾರ ಸಂಜೆ ಗೋ-ಕಾರ್ಟಿಂಗ್‌ಗೆ ತೆರಳಿದ್ದರು.ಈ ವೇಳೆ ಮಾಧ್ಯಮದವರು ಹಾಗೂ ದೊಡ್ಡ ಸಂಖ್ಯೆಯ ಅಭಿಮಾನಿಗಳು ಆಟಗಾರರನ್ನು ಮುತ್ತಿಕೊಂಡರು. ಇದರಿಂದ ಕೋಪಗೊಂಡ ಇಶಾಂತ್ ಅಭಿಮಾನಿಗಳನ್ನು ಗುರಿಯಾಗಿಸಿ ಮಧ್ಯದ ಬೆರಳು ತೋರಿಸಿದರು ಎಂದು ವರದಿ ತಿಳಿಸಿದೆ.ಈ ಮೊದಲು ವಿರಾಟ್ ಕೊಹ್ಲಿ ಇಂತಹದೇ ವರ್ತನೆ ತೋರಿದ್ದರು. ಸಿಡ್ನಿಯಲ್ಲಿ ನಡೆದ ಎರಡನೇ ಟೆಸ್ಟ್ ವೇಳೆ ಪ್ರೇಕ್ಷಕರತ್ತ ಅವರು ಮಧ್ಯದ ಬೆರಳು ತೋರಿಸಿದ್ದರು. ಮಾತ್ರವಲ್ಲ ಪಂದ್ಯದ ಶುಲ್ಕದ ಶೇ 50 ಮೊತ್ತವನ್ನು ದಂಡವಾಗಿ ವಿಧಿಸಲಾಗಿತ್ತು.ಇಶಾಂತ್ ಶರ್ಮ ಅಸಭ್ಯ ವರ್ತನೆ ತೋರಿದ್ದರ ಬಗ್ಗೆ ಅರಿವು ಇಲ್ಲ ಎಂದು ಭಾರತ ತಂಡದ ಮೀಡಿಯಾ ಮ್ಯಾನೇಜರ್ ಜಿ.ಎಸ್. ವಾಲಿಯಾ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)