ಸೋಮವಾರ, ಏಪ್ರಿಲ್ 12, 2021
23 °C

ಅಸ್ಸಾಂ ಹಿಂಸಾಚಾರ : ಕರ್ಫ್ಯೂ ಸಡಿಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ (ಐಎಎನ್‌ಎಸ್) : ಅಸ್ಸಾಂನ ಬೋಡೋಲ್ಯಾಂಡ್ ಪ್ರಾಂತ್ಯದ ಜಿಲ್ಲೆಯಾದ ಕೊಕ್ರಝಾರ್‌ನಲ್ಲಿ ಶಂಕಿತ ಉಗ್ರರು ಕಳೆದ ಕೆಲ ದಿನಗಳಿಂದ ನಡೆಸುತ್ತಿದ್ದ ಹಿಂಸಾಚಾರ ತಣ್ಣಗಾಗಿದ್ದು, ಜಿಲ್ಲೆಯಲ್ಲಿ ಹೇರಿದ್ದ ಅನಿರ್ಧಿಷ್ಟಾವಧಿ ನಿಷೇಧಾಜ್ಞೆಯನ್ನು ಭಾನುವಾರ ಆರು ಗಂಟೆಗಳ ಕಾಲ ಸಡಿಲಗೊಳಿಸಲಾಗಿದೆ.ಕೊಕ್ರಝಾರ್‌ನ 5 ಗ್ರಾಮಗಳು ಮತ್ತು ಗೊಸಾಯಿಗಾನ್ ಜಿಲ್ಲೆಯ ನಾಲ್ಕು ಗ್ರಾಮಗಳನ್ನು ಹೊರತುಪಡಿಸಿ ಉಳಿದೆಡೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರಗೆ ನಿಷೇಧಾಜ್ಞೆಯನ್ನು ಸಡಿಲಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಕೊಕ್ರಝಾರ್ ಜಿಲ್ಲೆಯಲ್ಲಿ ಸೇನಾ ತುಕಡಿಗಳು ಪಥಸಂಚಲನ ಮುಂದುವರಿದಿದ್ದು, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲು ಕೇಂದ್ರ ಪ್ಯಾರಾ ಮಿಲಿಟರಿ ಪಡೆಯ 65 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ನವೆಂಬರ್ 10ರಿಂದ ಮರುಕಳಿಸಿದ ಹಿಂಸಾಚಾರದಿಂದ ಒಟ್ಟು 11 ಮಂದಿ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ 65ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.