ತೆಲಂಗಾಣದಲ್ಲಿ ಮೈತ್ರಿ, ವಿಲೀನದ ಬಗ್ಗೆ ಹುರುಪಿನಿಂದ ಮಾತನಾಡುತ್ತಿದ್ದ ಎರಡು ಪ್ರಧಾನ ಪಕ್ಷಗಳ ನಡುವೆ ‘ಬಿರುಕು’, ಸೀಮಾಂಧ್ರದಲ್ಲಿ ಪರಿಸ್ಥಿತಿಯ ಲಾಭ ಪಡೆಯಲು ಪ್ರಾದೇಶಿಕ ಪಕ್ಷಗಳ ಮಧ್ಯೆ ಪೈಪೋಟಿ. ಎದುರಾಳಿ ಅಂಗಳಕ್ಕೆ ನುಗ್ಗಿ, ಕಸಿಯುವ ಪ್ರಯತ್ನದ ರಾಜಕೀಯ ಲೆಕ್ಕಾಚಾರದಲ್ಲಿ ಆಂಧ್ರಪ್ರದೇಶದ ರಾಜಕಾರಣ ಹಿಂದೆ ಎಂದೂ ಕಾಣದಷ್ಟು ಗೋಜಲಾಗಿದೆ.

ಅಖಂಡ ಆಂಧ್ರದ ಲೋಕಸಭೆ ಮತ್ತು ವಿಧಾನಸಭೆಗೆ ಏಪ್ರಿಲ್30 ಮತ್ತು ಮೇ 7ರಂದು ಎರಡು ಹಂತದಲ್ಲಿ ಏಕಕಾಲಕ್ಕೆ ನಡೆಯಲಿರುವ ಚುನಾವಣೆ ಪ್ರಮುಖ ರಾಜಕೀಯ ಪಕ್ಷಗಳಿಗೆ ಒಂದು ರೀತಿಯಲ್ಲಿ ‘ಅಗ್ನಿಪರೀಕ್ಷೆ’. ಮತದಾರರ ಒಲವು– ನಿಲುವುಗಳನ್ನು ಒರೆಗೆ ಹಚ್ಚುವ ಚುನಾವಣಾಪೂರ್ವ ಸಮೀಕ್ಷೆಗಳ ಸಾಮರ್ಥ್ಯಕ್ಕೆ ಸವಾಲು.

ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಆದರೆ, ರಾಜ್ಯದ ಅರ್ಧಕ್ಕೂ ಹೆಚ್ಚು ಸಂಸದರಿಗೆ ಮತ್ತು ಸೀಮಾಂಧ್ರದ ಹಲವು ಶಾಸಕರಿಗೆ ತಮ್ಮ ಮುಂದಿನ ನಡೆ ಕುರಿತು ಸ್ಪಷ್ಟತೆ ಇಲ್ಲ. ಸ್ಪರ್ಧಿಸಬೇಕೇ ಬೇಡವೇ? ಸ್ಪರ್ಧಿಸುವುದಾದರೆ ಎಲ್ಲಿಂದ ಹಾಗೂ ಯಾವ ಪಕ್ಷದಿಂದ ಎಂಬುದರ ಬಗ್ಗೆ ಖಚಿತ ತೀರ್ಮಾನ ಕೈಗೊಳ್ಳಲು ಈವರೆಗೂ ಸಾಧ್ಯವಾಗಿಲ್ಲ. ಈ ಅನಿಶ್ಚಿತತೆ ಜೊತೆಗೆ ಪಕ್ಷದಿಂದ ಪಕ್ಷಕ್ಕೆ ನಡೆದಿರುವ ‘ಜಿಗಿದಾಟ’, ಚುನಾವಣಾ ಕಣವನ್ನು ಗೊಂದಲಮಯಗೊಳಿಸಿದೆ.

ಇದರ ನಡುವೆ, ರಣಭೂಮಿಯಲ್ಲಿ ನಿಂತು ಕತ್ತಿ, ಕಠಾರಿಗಳಿಗೆ ಸಾಣೆ ಹಿಡಿಯಲು ಹೊರಟವರಂತೆ, ವೇಳಾಪಟ್ಟಿ ಪ್ರಕಟವಾದ ಬಳಿಕ ಹೊಸ ಪಕ್ಷಗಳಿಗೆ ರೆಕ್ಕೆ ಜೋಡಿಸಲು ಮಾಜಿ ಮುಖ್ಯಮಂತ್ರಿ ನಲ್ಲಾರಿ ಕಿರಣ್ಕುಮಾರ್ ರೆಡ್ಡಿ ಹಾಗೂ ಕೇಂದ್ರ ಸಚಿವ ಚಿರಂಜೀವಿ ಅವರ ಸೋದರ, ನಟ ಪವನ್ ಕಲ್ಯಾಣ್ ಅಣಿಯಾಗುತ್ತಿರುವುದು ರಾಜ ಕೀಯ ‘ಕೊಳ’ವನ್ನು ಕದಡಿದೆ.

ರಾಜ್ಯ ವಿಭಜನೆ ವಿರೋಧಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಿರಣ್, ಕಾಂಗ್ರೆಸ್ ಜೊತೆ ಸಂಬಂಧವನ್ನೂ ಕಡಿದುಕೊಂಡಿದ್ದಾರೆ. ತೆಲುಗರ ‘ಆತ್ಮಗೌರವ’ದ ಪ್ರಶ್ನೆ ಮುಂದಿಟ್ಟು (ತೆಲುಗುದೇಶಂ ಸಂಸ್ಥಾಪಕ ಎನ್.ಟಿ. ರಾಮರಾವ್ ಮೊಳಗಿಸಿದ ನಿನಾದ) ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಮಾರ್ಚ್ 12ರಂದು ರಾಜಮಂಡ್ರಿಯಲ್ಲಿ ನಡೆಯಲಿರುವ ಸಾರ್ವಜನಿಕ ಸಭೆ ಯಲ್ಲಿ ಹೊಸ ಪಕ್ಷದ ಹೆಸರು, ಸಿದ್ಧಾಂತ ಹೊರಬೀಳಲಿದೆ.

ಅಖಂಡ ಆಂಧ್ರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿ, ಪಕ್ಷದಿಂದ ಉಚ್ಚಾಟಿತಗೊಂಡಿರುವ ಆರು ಸಂಸದರು ಕಿರಣ್ ಜೊತೆಗಿದ್ದಾರೆ. ಜತೆಗೆ ಕೆಲವು ಶಾಸಕರು ಹಾಗೂ ಮಾಜಿ ಸಚಿವರು ಅವರೊಂದಿಗೆ ಈ ಕ್ಷಣಕ್ಕೆ ಇದ್ದಾರೆ. ನಟ ಪವನ್ ಕೂಡ ಹೊಸ ಪಕ್ಷ ಸ್ಥಾಪಿಸುವ ಸಿದ್ಧತೆಯಲ್ಲಿದ್ದಾರೆ ಎಂಬ ವರದಿಗಳಿವೆ. ಕಳೆದ ಚುನಾವಣೆಯಲ್ಲಿ ಸೋದರ ಚಿರಂಜೀವಿ ‘ಪ್ರಜಾರಾಜ್ಯಂ’ ಪಕ್ಷದ ಮೂಲಕ ಆಂಧ್ರದ ಚುನಾವಣಾ ತಕ್ಕಡಿಯನ್ನು ಏರುಪೇರು ಮಾಡಿದ್ದರು. ಮುಖ್ಯಮಂತ್ರಿಯಾಗುವ ಚಿರಂಜೀವಿ ಕನಸು ಕೈಗೂಡದಿದ್ದರೂ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿ ಕೇಂದ್ರದಲ್ಲಿ ಸಚಿವ ಸ್ಥಾನ ಗಿಟ್ಟಿಸಿದರು. ಈ ಸಲ ತಮ್ಮನ ಸರದಿ!

ಸೀಮಾಂಧ್ರದಲ್ಲಿ ತೆಲುಗುದೇಶಂ (ಟಿಡಿಪಿ) ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಡುವೆ ನೇರ ಸ್ಪರ್ಧೆಗೆ ಇದ್ದ ಅವಕಾಶವನ್ನು ಈ ಬೆಳವಣಿಗೆ ತಪ್ಪಿಸಲಿದೆ. ಹೊಸ ಪಕ್ಷಗಳು ಅಂದುಕೊಂಡಂತೆ ಅಸ್ತಿತ್ವಕ್ಕೆ ಬಂದರೆ, ಸೀಮಾಂಧ್ರದಲ್ಲಿ ಷಟ್ಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಇಲ್ಲಿ ಕಾಂಗ್ರೆಸ್ ಸ್ಥಿತಿ ದಯನೀಯ ಎಂಬಂತಿದೆ. ಇಂತಹ ಕೆಟ್ಟ ಸ್ಥಿತಿ ಆ ಪಕ್ಷಕ್ಕೆ ಹಿಂದೆಂದೂ ಎದುರಾದ ನಿದರ್ಶನವೇ ಇಲ್ಲ. ಪಕ್ಷದ ಮುಂಚೂಣಿ ಮುಖಂಡರೆಲ್ಲ ಟಿಡಿಪಿ ಇಲ್ಲವೇ ವೈಎಸ್ಆರ್ ಕಾಂಗ್ರೆಸ್ ಕಡೆ ಹೊರಳಿಕೊಳ್ಳುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವೆ, ಎನ್ಟಿಆರ್ ಪುತ್ರಿ ಡಿ.ಪುರಂದೇಶ್ವರಿ, ಅವರ ಪತಿ, ದಗ್ಗುಬಾಟಿ ವೆಂಕಟೇಶ್ವರ ರಾವ್ ಬಿಜೆಪಿ ಕದ ತಟ್ಟುತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಬಿಜೆಪಿ ಕೂಡ ಒಂದಷ್ಟು ಬಲ ಪಡೆಯಲಿದೆ. ಜೊತೆಗೆ ಸಿಪಿಎಂ, ಸಿಪಿಐ. ಯಾರು ಯಾರ ಮತಬುಟ್ಟಿಗೆ ಕೈಹಾಕುವರೋ? ಅದರಿಂದ ಯಾರಿಗೆ ಲಾಭ ಯಾರಿಗೆ ನಷ್ಟ ಎಂಬ ಆತಂಕ ಪ್ರಮುಖ ಪಕ್ಷಗಳ ನಿದ್ದೆ ಕೆಡಿಸಿದೆ. ಪವನ್ರಿಂದ ಹೊಸ ಪಕ್ಷ ಹುಟ್ಟು ಪಡೆದರೆ, ನಾಲ್ಕು ಪ್ರಾದೇಶಿಕ ಪಕ್ಷಗಳು ಅಖಾಡಕ್ಕೆ ಇಳಿದು ದಾಖಲೆ ಸೃಷ್ಟಿಸಲಿವೆ.

ತೆಲಂಗಾಣದ ಕಥೆ ಮತ್ತೊಂದು ಬಗೆಯದು. ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಲೇ ಭಾರತದ ರಾಜಕೀಯ ಭೂಪಟದಲ್ಲಿ ಪ್ರತ್ಯೇಕ ರಾಜ್ಯವಾಗಿ ಸ್ಥಾನ ಪಡೆಯಲಿರುವ ‘ತೆಲಂಗಾಣ’ದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮತ್ತು ಕಾಂಗ್ರೆಸ್ ಸಂಬಂಧ ನಿಗೂಢವಾಗಿಯೇ ಇದೆ. ವಿಲೀನವೋ ಮೈತ್ರಿಯೋ ನಿರ್ಧಾರವಾಗಿಲ್ಲ. ವಿಲೀನಕ್ಕೆ ಟಿಆರ್ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಸಮ್ಮತಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ದೆಹಲಿಯಲ್ಲಿ ಹೇಳಿಕೆ ನೀಡಿದ್ದರು. ಆದರೆ, ‘ಅಂಥದ್ದೇನೂ ಆಗಿಲ್ಲ’ ಎಂದು ಕೆಸಿಆರ್ ಇತ್ತ ಹೈದರಾಬಾದ್ನಲ್ಲಿ ಕೊಕ್ಕೆ ಹಾಕಿ ಕುಳಿತಿದ್ದಾರೆ.

‘ತೆಲಂಗಾಣದಲ್ಲೂ ಒಂದು ಪ್ರಾದೇಶಿಕ ಪಕ್ಷ ಇರಬೇಕು ಎಂಬುದು ಜನರ ಅಪೇಕ್ಷೆ. ಈ ಕಾರಣದಿಂದ ಕಾಂಗ್ರೆಸ್ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯನ್ನು ವಿಲೀನಗೊಳಿಸುತ್ತಿಲ್ಲ. ಟಿಆರ್ಎಸ್ ಸ್ಥಾಪಿಸಿದ ಉದ್ದೇಶ ಈಡೇರಿದೆ ಎಂಬುದು ನಿಜವಾದರೂ ಈಗ ಹೊಸ ರಾಜ್ಯದ ಪುನರ್ ನಿರ್ಮಾಣದ ಹೊಣೆಯನ್ನು ನಿರ್ವಹಿಸಬೇಕಿದೆ’ ಎಂದು ಕೆಸಿಆರ್ ರಾಗ ಬದಲಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್ ಒಪ್ಪದಿರುವುದೇ ರಾಗ ಬದಲಿಸಲು ಕಾರಣ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್ನ ಐದು–ಆರು ಮಂದಿ ಆ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ಆ ಪಕ್ಷವೂ ಇಕ್ಕಟ್ಟಿಗೆ ಸಿಲುಕಿದೆ. ಕಾಂಗ್ರೆಸ್ನಲ್ಲಿ ಟಿಆರ್ಎಸ್ ವಿಲೀನಗೊಂಡರೆ, ತೆಲಂಗಾಣದಲ್ಲಿ ಪರ್ಯಾಯ ಶಕ್ತಿಯಾಗಿ ಟಿಡಿಪಿ ಇಲ್ಲವೇ ಬಿಜೆಪಿ ಬಲ ಪಡೆಯಬಹುದು. ಅದಕ್ಕೆ ತಕ್ಷಣಕ್ಕೇ ಅವಕಾಶ ನೀಡುವುದು ಬೇಡ ಎಂಬ ಲೆಕ್ಕಾಚಾರವೂ ಕಾಂಗ್ರೆಸ್–ಟಿಆರ್ಎಸ್ ಮುಖಂಡರ ನಡೆಯ ಹಿಂದೆ ಅಡಗಿದೆ ಎನ್ನಲಾಗಿದೆ. ಪರದೆ ಬಿದ್ದ ಮೇಲಷ್ಟೇ ನಿಜಸ್ಥಿತಿ ಬಹಿರಂಗ ಆಗಲಿದೆ.

ಪ್ರತ್ಯೇಕ ರಾಜ್ಯ ಹೋರಾಟದ ಭಾಗವಾಗಿ ತೆಲಂಗಾಣದಲ್ಲಿ ದೊಡ್ಡ ಮಟ್ಟದಲ್ಲಿ ಹೊಸ ನಾಯಕತ್ವ ಒಡಮೂಡಿದೆ. ಜನಸಂಘ, ನೌಕರರ ಸಂಘದ ಹೆಸರಿನಲ್ಲಿ ನಾಯಕರಾದ ಸಾವಿರಾರು ಮಂದಿ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಇಲ್ಲವೇ ಟಿಆರ್ಎಸ್ ಟಿಕೆಟ್ಗೆ ಬೇಡಿಕೆ ಇದೆ. ಟಿಕೆಟ್ ಸಿಗದಿದ್ದರೆ ಭಿನ್ನಮತ ಸ್ಫೋಟಗೊಳ್ಳುವ ಅಪಾಯ ಇದ್ದೇ ಇದೆ.

ತೆಲಂಗಾಣಕ್ಕೆ ಸಂಬಂಧಿಸಿದಂತೆ ವೈಎಸ್ಆರ್ ಕಾಂಗ್ರೆಸ್ಗೆ ನಿರೀಕ್ಷೆಗಳೇನೂ ಇದ್ದಂತಿಲ್ಲ. ಆದರೆ ನೆಲೆ ಉಳಿಸಿಕೊಳ್ಳಲು ಟಿಡಿಪಿ ಶತಾಯಗತಾಯ ಹೋರಾಡುತ್ತದೆ. ನೆಲೆ ಕಂಡುಕೊಳ್ಳಲು ಬಿಜೆಪಿ ಶಕ್ತಿಮೀರಿ ಪ್ರಯತ್ನಿಸುತ್ತದೆ.

‘ತೆಲಂಗಾಣ ನೀಡಿದ್ದು ನಾವು’ ಎಂದು ಕಾಂಗ್ರೆಸ್ಸಿಗರು ಭುಜ ಕುಣಿಸುತ್ತಿದ್ದಾರೆ. ಅದಕ್ಕಾಗಿ, ‘ಹೋರಾಡಿದ್ದು ನಾವು’ ಎಂದು ಟಿಆರ್ಎಸ್ನವರು ಹೇಳುತ್ತಿದ್ದಾರೆ. ‘ಸಂಸತ್ತಿನಲ್ಲಿ ನಾವು ನೀಡಿದ ಬೆಂಬಲದಿಂದ ಮಸೂದೆ ಅಂಗೀಕಾರವಾಗಿದೆ’ ಎಂಬುದು ಬಿಜೆಪಿ ಮುಖಂಡರ ಅಂಬೋಣ. ‘ಹೊಸ ರಾಜ್ಯ ರೂಪಿಸಲು ನಾವೇ ಸಮರ್ಥರು’ ಎಂಬುದು ಟಿಡಿಪಿ ನಾಯಕರ ಪ್ರತಿಪಾದನೆ. ಗೆಲುವಿಗೆ ವಾರಸುದಾರರು ಲೆಕ್ಕವಿಲ್ಲದಷ್ಟು! ಅದೇ ಸೀಮಾಂಧ್ರದಲ್ಲಿ ‘ಸಾಂತ್ವನ’ದ ಹೊಳೆ ಹರಿಯುತ್ತಿದೆ. ಯಾರು ಹಿತವರು ಎಂದು ನಿರ್ಧರಿಸುವುದು ಮತದಾರರಿಗೂ ಕಷ್ಟದ ಕೆಲಸವೇ.

ಪ್ರತ್ಯೇಕ ತೆಲಂಗಾಣದ ಹೋರಾಟದಿಂದ ನಲುಗಿರುವ ಆಂಧ್ರಪ್ರದೇಶಕ್ಕೆ ‘ಅತಂತ್ರ ತೀರ್ಪು’ ಹಾನಿಕಾರಕ. ಎರಡೂ ರಾಜ್ಯಗಳನ್ನು ಶಾಂತಿ, ಸೌಹಾರ್ದದಿಂದ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬಲ್ಲ ಸಮರ್ಥ ನಾಯಕತ್ವ ಇಂದಿನ ಅಗತ್ಯ. ಅದನ್ನು ಸರಿಯಾಗಿ ಗುರುತಿಸುವಲ್ಲಿ ಮತದಾರರ ಭವಿಷ್ಯ ಅಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.