ಶುಕ್ರವಾರ, ಮೇ 20, 2022
21 °C

ಆಡ್ಲಿ ಮನ್ಸೋರ್ ಈಜಿಪ್ಟ್‌ನ ಹಂಗಾಮಿ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈರೋ (ಪಿಟಿಐ): ಈಜಿಪ್ಟ್‌ನ ಹಂಗಾಮಿ ಅಧ್ಯಕ್ಷರಾಗಿ ಆಡ್ಲಿ ಮನ್ಸೋರ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.



ಸೇನೆಯು ಮೊಹಮ್ಮದ್ ಮೋರ್ಸಿ ಅವರನ್ನು  ಪದಚ್ಯುತಿಗೊಳಿಸಿದ ಬಳಿಕ ಆಡ್ಲಿ ಮನ್ಸೋರ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಲಂಡನ್/ ವಾಷಿಂಗ್ಟನ್ ವರದಿ: ಈಜಿಪ್ಟ್‌ನಲ್ಲಿ ಮತ್ತೆ ನಾಗರಿಕ ಸರ್ಕಾರ ರಚಿಸುವಂತೆ ಸೇನಾ ಮುಖ್ಯಸ್ಥರಿಗೆ ವಿಶ್ವದ ವಿವಿಧ ನಾಯಕರು ಆಗ್ರಹಿಸಿದ್ದಾರೆ.

ಈಜಿಪ್ಟ್‌ನಲ್ಲಿ ಮತ್ತೆ ಪ್ರಜಾಪ್ರಭುತ್ವ ಸರ್ಕಾರವನ್ನು ಅಲ್ಲಿನ ಸೇನಾ ಮುಖ್ಯಸ್ಥರು ಶೀಘ್ರದಲ್ಲೇ ಸ್ಥಾಪಿಸಲಿದ್ದಾರೆ ಎಂಬ ವಿಶ್ವಾಸವನ್ನು ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದಾರೆ.

ಈಜಿಪ್ಟ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ. ಮೊದಲು ಆಂತರಿಕ ಗಲಭೆಗಳು ನಿಲ್ಲಬೇಕು ಎಂದು ಬ್ರಿಟನ್ ಒತ್ತಾಯಿಸಿದೆ. ಈಜಿಪ್ಟ್‌ಗೆ ಸೇನಾ ನೆರವು ನೀಡುವ ಪ್ರಶ್ನೆಯೇ ಇಲ್ಲ ಎಂದು ಬ್ರಿಟನ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.