ಶುಕ್ರವಾರ, ಫೆಬ್ರವರಿ 26, 2021
30 °C

ಆತಂಕ ಮೂಡಿಸಿದ್ದ ಕರಡಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತಂಕ ಮೂಡಿಸಿದ್ದ ಕರಡಿ ಸೆರೆ

ಮಂಡ್ಯ: ನಾಗಮಂಗಲ ತಾಲ್ಲೂಕಿನ ಚಂದ್ರಶೇಖರಪುರ ಗ್ರಾಮ ಬಳಿ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿದ್ದ ಕರಡಿ ಒಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದಿದ್ದಾರೆ.ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ಚಂದ್ರಶೇಖರ್ ಎಂಬಾತನಿಗೆ ಕರಡಿಗಳು ಕಾಣಿಸಿಕೊಂಡಿವೆ. ಭಯಭೀತನಾದ ಈತ ಗ್ರಾಮಕ್ಕೆ ಬಂದು ಜನರಿಗೆ ಸುದ್ದಿ ಮುಟ್ಟಿಸಿದ್ದಾನೆ. ನಂತರ, ಗುಂಪುಗೂಡಿ ಹೊಲದತ್ತ ಬಂದ ಜನರ ದಂಡು ಕಂಡ ಕರಡಿಗಳು ನಾಪತ್ತೆಯಾಗಿ, ಮತ್ತೊಂದು ಪ್ರದೇಶದಲ್ಲಿ ಕಾಣಿಸಿಕೊಂಡಿವೆ.ಈ ಬಗೆಗೆ ಅರಣ್ಯ ಇಲಾಖೆ ಸಿಬ್ಬಂದಿಗೂ ಮಾಹಿತಿ ರವಾನಿಸಲಾಗಿದೆ. ತಕ್ಷಣ ಬೋನು, ಬಲೆಯೊಂದಿಗೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.ಬೋನಿನಲ್ಲಿ ಹಲಸಿನ ಹಣ್ಣು ಇಟ್ಟು ಕರಡಿಯನ್ನು ಆಕರ್ಷಿಸಲಾಯಿತು. ಹಣ್ಣಿನ ವಾಸನೆ ಹಿಡಿದು ಬಂದ ಕರಡಿ ಬೋನಿನೊಳಗೆ ಸೆರೆ ಬಿದ್ದಿದೆ.

ಬಲೆ ಬೀಸಿ ಸೆರೆ ಹಿಡಿಯುವ ವೇಳೆ ಕರಡಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸೂಕ್ತ ಚಿಕಿತ್ಸೆ ಕೊಡಿಸಿ ನಂತರ ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.ವಲಯ ಅರಣ್ಯಾಧಿಕಾರಿ ರಮೇಶ್, ಸಿಬ್ಬಂದಿಗಳಾದ ಮಂಜು, ಗಿರಿಯಪ್ಪ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.