ಮಾಸ್ಕೊ (ಪಿಟಿಐ): ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಇಲ್ಲಿ ಕೊನೆಗೊಂಡ ತಾಲ್ ಮೆಮೋರಿಯಲ್ ಚೆಸ್ ಟೂರ್ನಿಯ ಅಂತಿಮ ಸುತ್ತಿನಲ್ಲಿ ರಷ್ಯಾದ ಸರ್ಜೆಯ್ ಕರ್ಜೈಕಿನ್ ವಿರುದ್ಧ ಡ್ರಾ ಸಾಧಿಸಿದ್ದಾರೆ. ಈ ಮೂಲಕ ಆನಂದ್ ಜಂಟಿ ಎಂಟನೇ ಸ್ಥಾನದೊಂದಿಗೆ ಟೂರ್ನಿ ವ್ಯವಹಾರ ಕೊನೆಗೊಳಿಸಿದ್ದಾರೆ.

ಕಪ್ಪು ಕಾಯಿಗಳೊಂದಿಗೆ ಆಡಿದ ಆನಂದ್ ಹೆಚ್ಚಿನ ಪ್ರಯಾಸವಿಲ್ಲದೇ ಕರ್ಜೈಕಿನ್ ವಿರುದ್ಧ 35 ನಡೆಗಳಲ್ಲಿ ಡ್ರಾ ಸಾಧಿಸಿದರು. 3.5 ಪಾಯಿಂಟ್ಗಳೊಂದಿಗೆ ಆನಂದ್ ರಷ್ಯಾದ ಅಲೆಕ್ಸಾಂಡರ್ ಮೊರೊಜೆವಿಚ್ ಜೊತೆಗೆ ಎಂಟನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಈ ಪ್ರಮುಖ ಟೂರ್ನಿಯಲ್ಲಿ ತೋರಿದ ನೀರಸ ಪ್ರದರ್ಶನದಿಂದಾಗಿ ಆನಂದ ವಿಶ್ವ ರ್ಯಾಂಕಿಂಗ್ನಲ್ಲಿ ಕುಸಿತ ಕಂಡಿದ್ದರು. ಆದರೆ ಟೂರ್ನಿಯ ಅಂತ್ಯದಲ್ಲಿ 2774 ಪಾಯಿಂಟ್ಗಳೊಂದಿಗೆ ಭಾರತ ಆಟಗಾರ ವಿಶ್ವ ರ್ಯಾಂಕಿಂಗ್ನ ಎಂಟರಿಂದ ಏಳನೇ ಸ್ಥಾನಕ್ಕೇರಿದ್ದಾರೆ.

ಇಸ್ರೇಲ್ನ ಬೋರಿಸ್ ಗೆಲ್ಫಾಂಡ್ ಅಂತಿಮ ಹಣಾಹಣಿಯಲ್ಲಿ ರಷ್ಯಾದ ವಾದ್ಲಿಮಿರ್ ಕ್ರಾಮ್ನಿಕ್ ವಿರುದ್ಧ ಪಾಯಿಂಟ್ ಹಂಚಿಕೊಂಡು 6 ಪಾಯಿಂಟ್ಗಳೊಂದಿಗೆ ಪ್ರಶಸ್ತಿ ಬಾಚಿದರು. ಅಜರ್ಬೈಜಾನ್ನ ಶಕ್ರಿಯಾರ್ ಮಮೆಡ್ಯಾರೊವ್ ಎದುರು ಡ್ರಾ ಸಾಧಿಸಿದ ವಿಶ್ವ ಅಗ್ರರ್ಯಾಂಕಿಂಗ್ನ ಮ್ಯಾಗ್ನಸ್ ಕಾರ್ಲ್ಸನ್ (ನಾರ್ವೆ) 5.5 ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.

ಮಮೆಡ್ಯಾರೊವ್, ರಷ್ಯಾದ ದಿಮಿಟ್ರಿ ಆ್ಯಂಡ್ರಿಕಿನ್ ಹಾಗೂ ಇಟಲಿಯ ಫ್ಯಾಬಿಯಾನೊ ಕರುವಾನಾ ತಲಾ ಐದು ಪಾಯಿಂಟ್ಗಳೊಂದಿಗೆ ಜಂಟಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲು ಕಂಡು ಆರನೇ ಸುತ್ತಿನ ಅಂತ್ಯಕ್ಕೆ 4.5 ಪಾಯಿಂಟ್ ಕಲೆ ಹಾಕಿದ್ದ ಅಮೆರಿಕದ ಹಿಕಾರು ನಕಮುರಾ ಅಂತಿಮ ಸುತ್ತಿನಲ್ಲಿ ಮೊರೊಜೆವಿಚ್ ವಿರುದ್ಧ ನಿರಾಸೆ ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.