ಶುಕ್ರವಾರ, ಮೇ 20, 2022
25 °C

ಆಮ್ಲಜನಕ ಕೊರತೆ: ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್, (ಪಿಟಿಐ): ಆಮ್ಲಜನಕದ ಕೊರತೆ ಅಥವಾ ಉಸಿರಾಟದ ತೊಂದರೆಯಿಂದ ನರಳುವ ರೋಗಿಗಳಿಗೆ ಹಿಮಾಲಯ ಪರ್ವತಕ್ಕೆ ಪರ್ವತಾರೋಹಿಗಳು ಕೈಗೊಂಡ ಯಾತ್ರೆಯಿಂದ ವಿಜ್ಞಾನಿಗಳು ಪರಿಹಾರ ಕಂಡುಕೊಂಡಿದ್ದಾರೆ.ಮೌಂಟ್ ಎವರೆಸ್ಟ್ ಯಾತ್ರಾರ್ಥಿಗಳು ಎತ್ತರಕ್ಕೆ ಹೋದಂತೆಲ್ಲ ಆಮ್ಲಜನಕದ ಕೊರತೆ ಎದುರಿಸುವಾಗ ಅವರ ದೇಹ ಮತ್ತು ರಕ್ತದಲ್ಲಾಗುವ ಬದಲಾವಣೆಯನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದರು.ಸಮುದ್ರ ಮಟ್ಟಕ್ಕಿಂತ ಅತಿ ಎತ್ತರ ಅಥವಾ ಇಳಿಜಾರು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆಮ್ಲಜನಕದ ಕೊರತೆಯಾದಾಗ ಅವರ ದೇಹದೊಳಗಿನ ಜೀವಕಣಗಳಿಗೆ ನೈಸರ್ಗಿಕವಾಗಿ ನೈಟ್ರಸ್ ಆಕ್ಸೈಡ್ (ಎನ್‌ಒ) ಎಂಬ ಅನಿಲ ಉತ್ಪಾದಿಸುವ ಕ್ಷಮತೆ ಕಡಿಮೆ. ತೀವ್ರ ಉಸಿರಾಟದ ತೊಂದರೆ ಎದುರಿಸುವ ರೋಗಿಗಳ ಸ್ಥಿತಿಯೂ ಇದೇ ತೆರನಾಗಿರುತ್ತದೆ.ಆಮ್ಲಜನಕದ ಕೊರತೆ ಎದುರಿಸುವ ವರಿಗೆ ನೈಟ್ರಸ್ ಆಕ್ಸೈಡ್ ಸಹಿತ ಔಷಧ ನೀಡಿದಾಗ ನೈಸರ್ಗಿಕವಾಗಿ ಆಮ್ಲಜನಕ ಉತ್ಪಾದನೆಗೆ ಪ್ರಚೋದಿಸುತ್ತದೆ ಎನ್ನುತ್ತಾರೆ ವೈದ್ಯ ವಿಜ್ಞಾನಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.