ಅಹಮದಾಬಾದ್: ಅಜೇಯ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಎಲೀಟ್ ‘ಎ’ ಗುಂಪಿನಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡವವನ್ನು ಮಂಗಳವಾರ ಎದುರಿಸಲಿದೆ. ಆತ್ಮವಿಶ್ವಾಸದಲ್ಲಿರುವ ಕರ್ನಾಟಕವು ಈ ಪಂದ್ಯ ಗೆದ್ದು ಕ್ವಾರ್ಟರ್ಫೈನಲ್ಗೇರುವ ಉಮೇದಿನಲ್ಲಿದೆ.

ಹಾಲಿ ಚಾಂಪಿಯನ್ ಕರ್ನಾಟಕ ಐದು ಪಂದ್ಯಗಳಿಂದ ಪರಿಪೂರ್ಣ 20 ಅಂಕಗಳನ್ನು ಗಳಿಸಿದೆ. ಗುಜರಾತ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಪಂದ್ಯ ಗೆದ್ದರೆ ಇನ್ನೂ ಒಂದು ಪಂದ್ಯ ಬಾಕಿಯರುವಂತೆ ಕರ್ನಾಟಕ ನಾಕೌಟ್ಗೆ ಮುನ್ನಡೆಯಲಿದೆ.

ನಾಕೌಟ್ ಹಂತದ ಪಂದ್ಯಗಳು ಜನವರಿ 12ರಿಂದ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆಯಲಿವೆ.

ಎಂಟು ತಂಡಗಳಿರುವ ‘ಎ’ ಗುಂಪಿನಲ್ಲಿ ಮಧ್ಯ ಪ್ರದೇಶ (16 ಅಂಕ) ಸದ್ಯ ಎರಡನೇ ಸ್ಥಾನದಲ್ಲಿದೆ. ಈ ತಂಡವು ಮಂಗಳವಾರ ಜಾರ್ಖಂಡ್ ತಂಡವನ್ನು ಮತ್ತು ಗುರುವಾರ ಕರ್ನಾಟಕ ತಂಡವನ್ನು ಎದುರಿಸಲಿದ್ದು, ಎರಡೂ ಪಂದ್ಯ ಗೆದ್ದರೆ ಮಾತ್ರ ಒಟ್ಟು 24 ಅಂಕ ಗಳಿಸಲಿದ್ದು ಗುಂಪಿನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ.

ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಎಂಟರ ಘಟ್ಟ ತಲುಪಲಿವೆ.

ಪಡಿಕ್ಕಲ್ ಮೇಲೆ ಗಮನ: ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕರ್ನಾಟಕ ಮತ್ತು ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನದ ಸ್ಥಿತಿ ಅವಲೋಕಿಸಿದರೆ, ಹಾಲಿ ಚಾಂಪಿಯನ್ ತಂಡವೇ ಫೇವರೀಟ್ ಆಗಿದೆ. ರನ್ ಹೊಳೆ ಹರಿಸಿರುವ ದೇವದತ್ತ ಪಡಿಕ್ಕಲ್ ಅವರ ಮೇಲೆಯೇ ಎಲ್ಲರ ಗಮನ ಇದೆ. ನಾಲ್ಕು ಶತಕ ಸಿಡಿಸಿರುವ 25 ವರ್ಷ ವಯಸ್ಸಿನ ಪಡಿಕ್ಕಲ್ 5 ಪಂದ್ಯಗಳಿಂದ 514 ರನ್ ಕಲೆಹಾಕಿದ್ದಾರೆ.

ರಾಷ್ಟ್ರೀಯ ಆಯ್ಕೆಗಾರರ ಅವಕೃಪೆಗೆ ಒಳಗಾದರೂ ಅವರು ರನ್ಹಸಿವಿನ ಮೂಲಕ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಬಹುತೇಕ ಎಲ್ಲ ಪಂದ್ಯಗಳಲ್ಲಿ ಉತ್ತಮ ಆರಂಭ ನೀಡಿರುವ ಕಾರಣ ಮಧ್ಯಮ ಕ್ರಮಾಂಕದ ಆಟಗಾರರು ನಿರಾಳವಾಗಿ ಆಡುವಂತಾಗಿದೆ. ಉತ್ತಮ ಲಯದಲ್ಲಿರುವ ಅವರು ಹೊಡೆತಗಳ ಆಯ್ಕೆಯಲ್ಲೂ ಎಡವಿಲ್ಲ.

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡದ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಅವರೂ ದೊಡ್ಡ ಇನಿಂಗ್ಸ್ ಆಡುವ ತವಕದಲ್ಲಿದ್ದಾರೆ.

ಲಯಕ್ಕೆ ಮರಳಿರುವ ಆರ್.ಸ್ಮರಣ್ ಅವರು ತ್ರಿಪುರ ವಿರುದ್ಧ 82 ಎಸೆತಗಳಲ್ಲಿ 60 ರನ್ ಗಳಿಸಿದ್ದರು. ರಣಜಿ ಟ್ರೋಫಿಯ ಇದುವರೆಗಿನ ಅಭಿಯಾನದಲ್ಲಿ ಕರ್ನಾಟಕ ಯಶಸ್ಸು ಸಾಧಿಸುವಲ್ಲಿ ಸ್ಮರಣ್ ಗಣನೀಯ ಪಾತ್ರ ವಹಿಸಿದ್ದಾರೆ.

ಆದರೆ ಬೌಲಿಂಗ್ನಲ್ಲಿ ಸುಧಾರಣೆಗೆ ಅವಕಾಶವವಿದೆ. ಭಾರತ ತಂಡದ ಬೌಲರ್ ಪ್ರಸಿದ್ಧ ಕೃಷ್ಣ ಜೊತೆ ವೈಶಾಖ ವಿ., ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.