ನವದೆಹಲಿ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಜೆಎಸ್ಡಬ್ಲ್ಯು ಜೊತೆಗಿನ ಸುಮಾರು ಒಂದು ದಶಕದ ತಮ್ಮ ಬಾಂಧವ್ಯಕ್ಕೆ ಕೊನೆಹಾಡಿದ್ದಾರೆ. ತಮ್ಮದೇ ಅಥ್ಲೀಟ್ ಮ್ಯಾನೇಜ್ಮೆಂಟ್ ಕಂಪನಿ ‘ವೆಲ್ ಸ್ಪೋರ್ಟ್ಸ್’ ಸ್ಥಾಪಿಸಿದ್ದಾರೆ.

ಚೋಪ್ರಾ ಅವರು 2016 ರಿಂದ ಜೆಎಸ್ಡಬ್ಲ್ಯು ಜೊತೆ ಸಂಪರ್ಕ ಹೊಂದಿದ್ದರು. ‘ಒಂದು ದಶಕದಿಂದ ನಮ್ಮಿಬ್ಬರ ಸಖ್ಯವು ಪ್ರಗತಿ, ವಿಶ್ವಾಸ ಮತ್ತು ಸಾಧನೆಯ ಪಯಣವಾಗಿತ್ತು. ನನ್ನ ವೃತ್ತಿಬದುಕಿನಲ್ಲಿ ಜೆಎಸ್ಡಬ್ಲ್ಯು ಪ್ರಮುಖ ಪಾತ್ರ ವಹಿಸಿದೆ. ಅವರ ಬೆಂಬಲಕ್ಕಾಗಿ ನಾನು ಕೃತಜ್ಞನಾಗಿರುವೆ’ ಎಂದು 27 ವರ್ಷ ವಯಸ್ಸಿನ ಚೋಪ್ರಾ ಹೇಳಿಕೆಯಲ್ಲಿ ತಿಳಿದ್ದಾರೆ.

ಎರಡೂ ಕಡೆಯವರು ‘ಅತೀವ ಗೌರವ ಮತ್ತು ಹೆಮ್ಮೆಯೊಂದಿಗೆ’ ಪ್ರತ್ಯೇಕವಾಗುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

‘ನೀರಜ್ ಜೊತೆಗೆ ಕೆಲಸ ಮಾಡಿದ್ದು, ಜೆಎಸ್ಡಬ್ಲ್ಯು ಕ್ರೀಡಾ ತಂಡಕ್ಕೆ ಮರೆಯಲಾಗದ ಅನುಭವ. ಅವರ ಯಶೋಗಾಥೆಯು ನಮ್ಮ ಧ್ಯೇಯೋದ್ದೇಶದವಾದ ಶ್ರೇಷ್ಠತೆ ಮತ್ತು ಗುರಿಯ ಪ್ರತೀಕವಾಗಿದೆ’ ಎಂದೂ ತಿಳಿಸಿದೆ.

‘ನಾವು ಜೊತೆಯಾಗಿ ಸಾಧಿಸಿದ್ದು ನಮಗೆ ಅತೀವ ಹೆಮ್ಮೆ ಮೂಡಿಸಿದೆ. ಅವರ ಭವಿಷ್ಯದ ಯೋಜನೆಗಳಿಗೂ ಯಶಸ್ಸು ದೊರೆಯಲೆಂದು ಹಾರೈಸುತ್ತೇವೆ’ ಎಂದು ಜೆಎಸ್ಡಬ್ಲ್ಯು ಸ್ಪೋರ್ಟ್ಸ್ ಸಿಇಒ ದಿವ್ಯಾಂಶು ಸಿಂಗ್ ಹೇಳಿದ್ದಾರೆ.

ಒಲಿಂಪಿಕ್ ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆ ಚೋಪ್ರಾ ಅವರದ್ದು. 2021ರ ಟೋಕಿಯೊ ಕ್ರೀಡೆಗಳಲ್ಲಿ ಅವರು ಜಾವೆಲಿನ್ ಥ್ರೊ ಚಿನ್ನ ಗೆದ್ದಿದ್ದರು. 2023ರಲ್ಲಿ ವಿಶ್ವ ಚಾಂಪಿಯನ್ಷಿಪ್ ಕಿರೀಟ ಸಹ ಧರಿಸಿದ್ದರು. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.