ಮಂಗಳವಾರ, ಜೂನ್ 15, 2021
21 °C

ಆಯುಷ್ ಔಷಧ ಪೂರೈಸಿದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ) ಯೋಜನೆಯಡಿಯಲ್ಲಿ ಕೇವಲ 40-50 ರೋಗಿಗಳಿಗೆ ಸಾಕಾಗುವಷ್ಟು ಆಯುರ್ವೇದ ಚೂರ್ಣ, ತೈಲ ಇತ್ಯಾದಿ ಔಷಧಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರಿಗೆ ಫೆಬ್ರುವರಿ ತಿಂಗಳ ಕೊನೆಯ ವಾರದಲ್ಲಿ ಸರ್ಕಾರ ಪೂರೈಸಿದೆ.ಆಯುಷ್ ವೈದ್ಯರಿಗೆ ಔಷಧಿ ಪೂರೈಕೆ ನಿಂತು ಹೋಗಿರುವುದನ್ನು ಸರ್ಕಾರದ ಗಮನಕ್ಕೆ ತರುವ ವಿಷಯದಲ್ಲಿ ಪ್ರಜಾವಾಣಿ ಮಹತ್ವದ ಪಾತ್ರವಹಿಸಿತು. ಔಷಧ ಪೂರೈಕೆ ಪ್ರಜಾವಾಣಿಯ ಫಲಶ್ರುತಿ.ಆದರೆ ರಕ್ತದೊತ್ತಡಕ್ಕೆ, ಖಿನ್ನತೆಗೆ ಮತ್ತು ನೋವು ನಿವಾರಕಗಳು ಹಾಗೂ ಜ್ವರಕ್ಕೆ ನೀಡುವ ಔಷಧಿಗಳನ್ನು ಸರ್ಕಾರ ಪೂರೈಕೆ ಮಾಡಿಲ್ಲ. ಕೆಲವೇ ಔಷಧಿಗಳನ್ನು ಪೂರೈಸಲು ಏನು ಕಾರಣ ಎನ್ನುವುದು ಗೊತ್ತಾಗಿಲ್ಲ. ಬಡ ಜನರು ಆಯುಷ್ ವೈದ್ಯರ ಸಲಹೆ ಪಡೆಯುವುದು ಹೆಚ್ಚಾಗಿದೆ. ಈ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಆಯುಷ್ ವೈದ್ಯರಿಗೆ ಹೆಚ್ಚಿನ ಪ್ರಮಾಣದ ಔಷಧ ಪೂರೈಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.