ವಾಷಿಂಗ್ಟನ್(ಐಎಎನ್ಎಸ್): ವಿತ್ತೀಯ ಸೇರ್ಪಡೆ, ಆರ್ಥಿಕ ಬಲವರ್ಧನೆ, ಹಣದುಬ್ಬರ ನಿಯಂತ್ರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮೂಲಕ ಭಾರತವು ಹಿಂದಿನ ಸುಸ್ಥಿರ ಪ್ರಗತಿಯ ಮಟ್ಟಕ್ಕೆ ಮರಳಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಲಹೆ ಮಾಡಿದೆ.

ದೊಡ್ಡ ಮಟ್ಟದ ಹಣಕಾಸಿನ ವಹಿವಾಟಿನಲ್ಲಿ ಭಾರತ ಅನುಸರಿಸುತ್ತಿರುವ ನೀತಿ ಮತ್ತು ದೇಶದ ಮೂಲ ಅರ್ಥ ವ್ಯವಸ್ಥೆಯ ಉತ್ತಮವಾಗಿದೆ. ಇದರಿಂದಾಗಿಯೇ ಜಾಗತಿಕ ಆರ್ಥಿಕ ಸ್ಥಿತಿ ಅಸ್ಥಿರವಾಗಿದ್ದರೂ ಭಾರತ ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೂರೈಕೆ ವಿಭಾಗದಲ್ಲಿನ ಲೋಪಗಳನ್ನು ಸರಿಪಡಿಸಿ, ಹಣದುಬ್ಬರ ನಿಯಂತ್ರಿಸಿದರೆ ಮತ್ತೆ ಹಿಂದಿನ ಪ್ರಗತಿಯ(ಜಿಡಿಪಿ) ಮಟ್ಟಕ್ಕೇ ಮರಳಬಹುದು ಎಂದು ಐಎಂಎಫ್ ವರದಿ ಹೇಳಿದೆ.

ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದ ಕ್ರಮ ಸೂಕ್ತವಾಗಿದೆ. ಹಣದುಬ್ಬರ ಹಿತಕರ ಮಟ್ಟಕ್ಕೆ ಇಳಿಯುತ್ತಿದ್ದಂತೆ ಬಡ್ಡಿ ದರ ತಗ್ಗಿಸಬಹುದು. ಜತೆಗೆ ಸಾರ್ವಜನಿಕ ಆಯವ್ಯಯ ನಿರ್ವಹಣೆಯನ್ನೂ ಸುಧಾರಿಸಬೇಕು. ಖಾಸಗಿ-ಸರ್ಕಾರಿ ಸಹಭಾಗಿತ್ವದ ಹೂಡಿಕೆಗಳೂ ಹೆಚ್ಚಬೇಕು. ಇಂಧನ ಮತ್ತು ರಸಗೊಬ್ಬರಕ್ಕೆ ನೀಡುವ ಸಹಾಯಧನವನ್ನೂ ಕಡಿಮೆ ಮಾಡಬೇಕು ಎಂದೂ `ಐಎಂಎಫ್~ ಹೇಳಿದೆ.ಪ್ರಸ್ತಾವಿತ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟಿ) `ಐಎಂಎಫ್~ ಬೆಂಬಲ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.