ಗುರುವಾರ , ಮೇ 13, 2021
16 °C

ಆರ್ಥಿಕ ಸಾಕ್ಷರತೆ: ಸಮಾಲೋಚನಾ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನಾ ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕುಗಳಲ್ಲಿಯೂ ಸ್ಥಾಪಿಸಲಾಗುವುದು ಎಂದು ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರೂ ಆದ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ (ಎಸ್‌ಎಲ್‌ಬಿಸಿ) ಅಧ್ಯಕ್ಷ ಬಸಂತ ಸೇಠ್ ಹೇಳಿದರು.ವಿಧಾನಸೌಧದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ 118ನೇ ಸಭೆಯಲ್ಲಿ ಅವರು ಮಾತನಾಡಿದರು.ವಿತ್ತೀಯ ಸೇರ್ಪಡೆಯ ಯಶಸ್ಸಿಗೆ ಆರ್ಥಿಕ ಸಾಕ್ಷರತೆಯ ಅವಶ್ಯಕತೆಯನ್ನು ಮನಗಂಡು, ವಿವಿಧ ಬ್ಯಾಂಕುಗಳು ಇದುವರೆಗೂ 26 ಕಡೆ ಈ ರೀತಿಯ ಸಮಾಲೋಚನಾ ಕೇಂದ್ರಗಳನ್ನು ಸ್ಥಾಪಿಸಿವೆ. ಇವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕುಗಳಲ್ಲಿಯೂ ಸ್ಥಾಪಿಸಲಾಗುವುದು ಎಂದರು.ಪ್ರಸಕ್ತ ವರ್ಷವನ್ನು `ಆರ್ಥಿಕ ಸೇರ್ಪಡೆ ಮತ್ತು ಕೃಷಿ ಸಾಲ ವರ್ಷ~ ಎಂದು ಘೋಷಣೆ ಮಾಡಿದ್ದು, ಆ ಹಿನ್ನೆಲೆಯಲ್ಲಿ ಬ್ಯಾಂಕ್‌ರಹಿತ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಕಡೆಗೆ ಗಮನ ನೀಡಲಾಗುತ್ತಿದೆ. ಈವರೆಗೆ 2,000ಕ್ಕೂ ಹೆಚ್ಚು ಜನಸಂಖ್ಯೆ ಇರುವ 3,395 ಬ್ಯಾಂಕ್‌ರಹಿತ ಗ್ರಾಮಗಳ ಪೈಕಿ 1,713 ಗ್ರಾಮಗಳಿಗೆ ಬ್ಯಾಂಕಿನ ಸೇವೆ ಒದಗಿಸಿ, ಶೇ 50.46ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.ಒಂದು ಸಾವಿರದಿಂದ ಎರಡು ಸಾವಿರ ಜನಸಂಖ್ಯೆ ಇರುವ 6,029 ಬ್ಯಾಂಕ್  ರಹಿತ ಗ್ರಾಮಗಳನ್ನು ಗುರುತಿಸಿದ್ದು, ಅಂತಹ ಕಡೆಯೂ ಬ್ಯಾಂಕ್ ಸೇವೆ ಒದಗಿಸಲು ಎಲ್ಲ ಲೀಡ್ ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ಪ್ರಸಕ್ತ ಸಾಲಿನ ಜೂನ್ ಅಂತ್ಯದವರೆಗೆ ್ಙ 3,54,999 ಕೋಟಿ ಠೇವಣಿ ಮತ್ತು ್ಙ  2,58,105 ಕೋಟಿ ಸಾಲ ನೀಡಲಾಗಿದೆ. ಹೀಗಾಗಿ ಸಾಲ- ಠೇವಣಿ ಅನುಪಾತ ಶೇ 27:21ರಷ್ಟು ಇದೆ. ಆದ್ಯತಾ ಕ್ಷೇತ್ರಕ್ಕೆ ್ಙ 1,09,550 ಕೋಟಿ ಸಾಲ ನೀಡಲಾಗಿದೆ ಎಂದು ವಿವರಿಸಿದರು.ಕೃಷಿ ಕ್ಷೇತ್ರಕ್ಕೆ ್ಙ  47,054 ಕೋಟಿ ಸಾಲ ನೀಡಲಾಗಿದೆ. ಇದು `ಆರ್‌ಬಿಐ~ ನಿಗದಿಪಡಿಸಿರುವ ಶೇ 18ಕ್ಕಿಂತ ಹೆಚ್ಚು ಎಂದು ಹೇಳಿದರು.ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮಾತನಾಡಿ, ಬ್ಯಾಂಕುಗಳು ಕೃಷಿ, ಗೃಹ ನಿರ್ಮಾಣ ಮತ್ತು ಶಿಕ್ಷಣ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ವಿಷಯದಲ್ಲಿ ರಾಜಿ ಬೇಡ ಎಂದರು.`ಎಸ್‌ಎಲ್‌ಬಿಸಿ~ ಸಂಚಾಲಕ ಜಿ.ರಾಮನಾಥನ್, ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ರವಿ ಚಟರ್ಜಿ, ಆರ್‌ಬಿಐ ಕಾರ್ಯನಿರ್ವಾಹಕ ನಿರ್ದೇಶಕ ಉಮಾಶಂಕರ್, ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಎ.ಜಿನ್ನಾ ಸೇರಿದಂತೆ ಇತರರು ಸಭೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.