ಶುಕ್ರವಾರ, ಏಪ್ರಿಲ್ 16, 2021
31 °C

ಆಲಗೂಡು: ದೇಗುಲ ಜೀರ್ಣೋದ್ಧಾರಕ್ಕೆ ಭೂಮಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ: ಆಲಗೂಡು ಗ್ರಾಮದ ಜನರಿಗೆ ವಸತಿ ಸೌಲಭ್ಯ ದೊರಕಿಸಲು ಸ್ಥಳ ನಿಗದಿಪಡಿಸಿದರೆ ಅನುದಾನ ನೀಡುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಆಲಗೂಡು ಗ್ರಾಮದ ಶ್ರೀಮಹದೇಶ್ವರ ದೇವಾಲಯದ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಆಲಗೂಡು ಗ್ರಾಮಕ್ಕೆ ರೂ.7 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ, ಮುಖ್ಯ ರಸ್ತೆಯಿಂದ ದೇವಾಲಯದ ವರೆಗೆ ರಸ್ತೆ ಕಾಮಗಾರಿಗೆ ರೂ. 3 ಲಕ್ಷ ರೂಪಾಯಿ ನೀಡಲಾಗಿದೆ. ಹಾರೂಪುರದಿಂದ ಬೆಳುಗಲಿ ಕಾಲುವೆ ರಸ್ತೆ ಅಭಿವೃದ್ಧಿಗೆ ರೂ. 1.9 ಕೋಟಿ ಬಿಡುಗಡೆಯಾಗಿದೆ.

 

ನಾಲೆಗಳ ದುರಸ್ತಿಗೆ ರೂ. 2.90 ಕೋಟಿ ನೀಡಲಾಗಿದೆ. ಆಲಗೂಡು, ಬೈರಾಪುರ ಹಾಗೂ ತಿ.ನರಸೀಪುರ ಪಟ್ಟಣ ಪಂಚಾಯಿತಿ ಸೇರಿಸಿ ಪುರಸಭೆ ರಚಿಸಿದ ನಂತರ ಒಳಚರಂಡಿ ಯೋಜನೆಯನ್ನು ಆಲಗೂಡು ಗ್ರಾಮಕ್ಕೂ ವಿಸ್ತರಣೆ ಮಾಡಲಾಗುವುದು ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ತಾಲ್ಲೂಕು ಪಂಚಾಯಿತಿ ಇಒ ಸಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಎಇಇ ಪುರುಷೋತ್ತಮ್, ರಾಕೇಶ್ ಸಿದ್ದರಾಮಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ಸಿ.ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಗುರುಸ್ವಾಮಿ, ಉಪಾಧ್ಯಕ್ಷ ಚಿಕ್ಕಣಮ್ಮ, ಸದಸ್ಯ ಆಲಗೂಡು ನಾಗರಾಜು, ಎಂ.ಡಿ.ಬಸವರಾಜು ಪಿ.ಸ್ವಾಮಿನಾಥ್‌ಗೌಡ, ಬಿ.ಮರಯ್ಯ, ಸಾಮಿಲ್ ಸಿದ್ಧಪ್ಪ, ಘಟಕ ಮಹಾದೇವ್, ಸಿದ್ದಪ್ಪ, ತಮ್ಮಯ್ಯ, ಪಿ.ಪುಟ್ಟರಾಜು. ಹೆಳವರಹುಂಡಿ ಸೋಮು, ಲತಾ ಜಗದೀಶ್, ಕೆ.ಮಹಾದೇವಣ್ಣ, ಮನ್ನೆಹುಂಡಿ ಮಹೇಶ್, ದಿವಾಕರ್ ನಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.