ಭಾನುವಾರ, ಮಾರ್ಚ್ 7, 2021
27 °C
ಭಾರತ– ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯ

ಆಸಿಸ್‌ ಪಡೆಗೆ 296 ರನ್‌ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸಿಸ್‌ ಪಡೆಗೆ 296 ರನ್‌ ಗುರಿ

ಮೆಲ್ಬರ್ನ್‌ (ಏಜೆನ್ಸೀಸ್‌): ಭಾರತ– ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 295 ರನ್‌ ಕಲೆಹಾಕಿದೆ.

ಟಾಸ್‌ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್‌ ಆಯ್ದುಕೊಂಡಿತ್ತು. ವಿರಾಟ್‌ ಕೊಹ್ಲಿ 117 ಬಾಲ್‌ಗಳಿಗೆ 117 ರನ್‌ ಸಿಡಿಸಿದರು. ಶಿಖರ್‌ ಧವನ್‌ 91 ಎಸೆತಗಳಲ್ಲಿ 68 ರನ್‌ ಕಲೆಹಾಕಿದರು.

ಅಜಿಂಕ್ಯ ರಹಾನೆ 55 ಬಾಲ್‌ಗಳಲ್ಲಿ ಅರ್ಧ ಶತಕ ಗಳಿಸಿ ಔಟಾದರು. ನಾಯಕ ಮಹೇಂದ್ರ ಸಿಂಗ್‌ ದೋನಿ 9 ಬಾಲ್‌ಗಳಲ್ಲಿ 23 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಕೊಹ್ಲಿ ದಾಖಲೆ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ದಾಖಲೆ ನಿರ್ಮಿಸಿದರು. ಏಕದಿನ ಪಂದ್ಯಗಳಲ್ಲಿ ಏಳು ಸಾವಿರ ರನ್‌ ಗಳಿಸಿ, ಈ ಹಿಂದಿನ ಎ.ಬಿ.ಡಿವಿಲಿಯರ್ಸ್‌ ದಾಖಲೆ ಮುರಿದರು. 24ನೇ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಪೂರೈಸಿದ ದಾಖಲೆಯನ್ನೂ ಕೊಹ್ಲಿ ತಮ್ಮದಾಗಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.