ಬೆಂಗಳೂರು: ವಿವಿಧ ವಯೋಮಿತಿ ಯೊಳಗಿನ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿರುವ ಕರ್ನಾಟಕದ ಭರವಸೆಯ ಆಟಗಾರ ಬಿ.ಆರ್. ನಿಕ್ಷೇಪ್ ಸೋಮ ವಾರ ಆರಂಭವಾಗುವ ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಜೂನಿಯರ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

2013ರಲ್ಲಿ ಮದುರೆ, ಕೋಲ್ಕತ್ತ ಹಾಗೂ ಗ್ವಾಲಿಯರ್ನಲ್ಲಿ ನಡೆದಿದ್ದ ಎಐಟಿಎ ಟೆನಿಸ್ ಟೂರ್ನಿಯ ಸಿಂಗಲ್ಸ್ನಲ್ಲಿ ಪ್ರಶಸ್ತಿ ಜಯಿಸಿದ್ದರು. ಅದೇ ವರ್ಷ ಜೂನಿಯರ್ ಡೇವಿಸ್ ಕಪ್ ತಂಡದಲ್ಲಿಯೂ ಆಡಿದ್ದರು.

ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ಆಡಲು ಅವಕಾಶ ಪಡೆ ದಿರುವ ನಿಕ್ಷೇಪ್ ಈಗ ವಿಶ್ವ ರ್ಯಾಂಕಿಂಗ್ ನಲ್ಲಿ 156ನೇ ಸ್ಥಾನ ಹೊಂದಿದ್ದಾರೆ.

14 ಮತ್ತು 16 ವರ್ಷದ ಒಳಗಿನ ವಿಭಾಗದ ಎಐಟಿಎ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಪಡೆದಿದ್ದರು. ಹೋದ ತಿಂಗಳು ಚಂಡೀಗಡದಲ್ಲಿ ನಡೆದಿದ್ದ ಐಟಿಎಫ್ ಟೂರ್ನಿಯ ಡಬಲ್ಸ್ನಲ್ಲಿ ಸೆಮಿಫೈನಲ್ ತಲುಪಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡ ನಿಕ್ಷೇಪ್ ‘ಕೆಲ ವರ್ಷಗಳಿಂದ ಹಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ಆದ್ದರಿಂದ ಈ ಬಾರಿ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ಆಡಲು ಅವಕಾಶ ಲಭಿಸುವ ನಿರೀಕ್ಷೆಯಿತ್ತು. ಅಲ್ಲಿ ಬಲಿಷ್ಠ ಆಟಗಾರರ ಜೊತೆ ಆಡಲು ವೇದಿಕೆ ಲಭಿಸಿದೆ. ವಿಶ್ವದ ಶ್ರೇಷ್ಠ ಆಟಗಾರರ ಪಂದ್ಯವನ್ನೂ ನೋಡಬಹುದು. ಕನಿಷ್ಠ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಗುರಿಯಿದೆ’ ಎಂದರು.

18 ವರ್ಷದ ನಿಕ್ಷೇಪ್ ಈಗ ದೆಹಲಿಯಲ್ಲಿ ಆದಿತ್ಯ ಸಚದೇವ್ ಅಕಾಡೆಮಿಯಲ್ಲಿ ತರಬೇತಿ ಪಡೆ ಯುತ್ತಿದ್ದಾರೆ. ‘ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಸೀನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವುದು ಜೀವನದ ಹೆಗ್ಗುರಿ. ಈ ಗುರಿಯನ್ನು ಈಡೇರಿಸಿಕೊಳ್ಳಲು ಈಗ ಸಿಕ್ಕಿರುವ ಅವಕಾಶ ವೇದಿಕೆಯೆಂದು ಭಾವಿಸುತ್ತೇನೆ’ ಎಂದು ಸುರಾನಾ ಕಾಲೇಜಿನ ವಿದ್ಯಾರ್ಥಿ ನಿಕ್ಷೇಪ್ ಅನಿಸಿಕೆ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.