ಸೋಮವಾರ, ಮೇ 17, 2021
21 °C

ಆಸ್ಟ್ರೇಲಿಯಾ: ಹೊಸ ವೀಸಾ ನೀತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಆಸ್ಟ್ರೇಲಿಯಾ ಸರ್ಕಾರ ಗುರುವಾರ ಹೊಸ ವೀಸಾ ನೀತಿಯನ್ನು ಪ್ರಕಟಿಸಿದೆ.ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ದಾಖಲಾತಿ ಕೊರತೆ ಎದುರಿಸುತ್ತಿವೆ. ಹೊಸ ವೀಸಾ ನೀತಿಯು 2012ರ ಎರಡನೇ ಸೆಮಿಸ್ಟರ್‌ಗೆ ಭಾರತ ಸೇರಿದಂತೆ  ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಆಕರ್ಷಿಸಲಿದೆ.ವಿದ್ಯಾರ್ಥಿ ವೀಸಾ ಬಗ್ಗೆ ನ್ಯೂ ಸೌತ್ ವೇಲ್ಸ್ ಪ್ರಾಂತೀಯ ಸರ್ಕಾರದ ಸಚಿವ ಮೈಕೆಲ್ ನೈಟ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದ್ದು ಇವರು  ಮಾಡಿರುವ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ.ಆಸ್ಟ್ರೇಲಿಯಾ ಸರ್ಕಾರ ಪ್ರಕಟಿಸಿರುವ ಹೊಸ ವೀಸಾ ನೀತಿಯು ವಿಶ್ವವಿದ್ಯಾಲಯಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಎಎಪಿ ವರದಿ ಮಾಡಿದೆ.ಹೊಸ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳ ವೀಸಾಗೆ ಹಣಕಾಸು ಅವಶ್ಯಕತೆ ಮೊತ್ತವನ್ನು ಇಳಿಸಲಾಗಿದೆ. ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿ ಈಗ ಹೊಂದಿರಬೇಕಾದ ಹಣದ ಮೊತ್ತಕ್ಕಿಂತ 36 ಸಾವಿರ ಡಾಲರ್ ಕಡಿಮೆ ಹಣ ಹೊಂದಿರಬಹುದು.ವಿದ್ಯಾಭ್ಯಾಸ ನಂತರ ಕೆಲಸದ ಹೊಸ ವೀಸಾ ನಿಯಮ ಪ್ರಕಾರ, ಕೋರ್ಸ್ ಮುಗಿದ ಬಳಿಕ ವಿದ್ಯಾರ್ಹತೆ ಮಟ್ಟವನ್ನು ಆಧರಿಸಿ ವಿದ್ಯಾರ್ಥಿಗಳು 2-4 ವರ್ಷಗಳವರೆಗೆ ಆಸ್ಟ್ರೇಲಿಯಾದಲ್ಲಿ ಉಳಿಯಲು ಅವಕಾಶ ಇರುತ್ತದೆ.ಆದಾಗ್ಯೂ, ವಿದ್ಯಾರ್ಥಿ ವೀಸಾ ಮಾನದಂಡವನ್ನು ಕೆಲ ಮಟ್ಟಿಗೆ  ಬಿಗಿಗೊಳಿಸಿದ್ದು ಅರ್ಜಿದಾರರು ತಾವು ಪ್ರಾಮಾಣಿಕ ವಿದ್ಯಾರ್ಥಿಗಳು ಮತ್ತು ಸ್ವದೇಶಕ್ಕೆ ಮರಳುವ ಪ್ರಾಮಾಣಿಕತೆ ತಮಗಿದೆ ಎಂಬುದನ್ನು ಸಾಬೀತು ಪಡಿಸಬೇಕಾಗುತ್ತದೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳು ಹೆಚ್ಚು ಸ್ಪರ್ಧಾತ್ಮಕವಾಗಿರಲು ಬದಲಾವಣೆ ಅನುಕೂಲ ಮಾಡಿಕೊಡುತ್ತದೆ ಎಂದು ಶಿಕ್ಷಣ ಸಚಿವ ಕ್ರಿಸ್ ಇವಾನ್ಸ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.