ಶನಿವಾರ, ಜನವರಿ 25, 2020
16 °C

ಇಂಗ್ಲಿಷ್ ಭಾಷಾ ಜ್ಞಾನ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಪ್ರಸ್ತುತ ದಿನಮಾನದಲ್ಲಿ ಇಂಗ್ಲಿಷ್ ಭಾಷೆ ವಿಶ್ವದ ಭಾಷೆಯಾಗಿ ಪರಿಣಮಿಸಿದ್ದು, ಇಂಗ್ಲಿಷ್ ಭಾಷೆ ಬಲ್ಲವರು ಸ್ಥಾನಿಕ ನಾಗರಿಕರಾಗಿ ಉಳಿಯದೇ ಜಾಗತಿಕ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ ಎಂದು ಉಪವಿಭಾಗಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.ಪಟ್ಟಣದ ಆಪ್ಟೇಕ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಜರುಗಿದ `ಇಂಗ್ಲಿಷ್ ಫಾರ್ ಎವರಿವನ್~ ಕೋರ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. `ಪ್ರತಿಯೊಬ್ಬ ಭಾರತೀಯರಿಗೂ ತಮ್ಮ ಪ್ರಾದೇಶಿಕವಾದ ಮಾತೃಭಾಷೆ ಮತ್ತು ರಾಷ್ಟ್ರಭಾಷೆಯ ಬಗೆಗೆ ಅಭಿಮಾನ ಇರಲೇಬೇಕು. ಆದರೆ  ಬೆಳೆಯುತ್ತಿರುವ ಜಾಗತೀಕರಣದ ಪರಿಣಾಮವಾಗಿ ಆಂಗ್ಲ ಭಾಷೆಯನ್ನೂ ಕಲಿತುಕೊಳ್ಳುವುದು ಅನಿವಾರ್ಯವಾಗಿದೆ~ ಎಂದು ಪ್ರತಿಪಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಎಂಜಿನಿಯರಿಂಗ್ ಮಹಾವಿದ್ಯಾಲ ಯದ ಪ್ರಾಚಾರ್ಯ ಡಾ.ಬಸವರಾಜ ಕಟಗೇರಿ ಮಾತನಾಡಿ, ಕಂಪ್ಯೂಟರ್ ಕ್ರಾಂತಿಯಿಂದಾಗಿ ಜಗತ್ತು ಒಂದು ಪುಟ್ಟ ಹಳ್ಳಿಯಂತಾಗಿದ್ದು, ಎಲ್ಲೆಡೆ ಸಂಪರ್ಕ ಸಾಧ್ಯವಾಗಿದೆ. ಅದಕ್ಕಾಗಿ ಕಂಪ್ಯೂಟರ್ ಮತ್ತು ಮೋಬೈಲ್‌ನಲ್ಲಿ ಬಳಸುವ ಏಕೈಕ ಭಾಷೆ ಇಂಗ್ಲೀಷ್ ಆಗಿರುವುದರಿಂದ ಅಸಂಖ್ಯಾತ ಉದ್ಯೋಗಾವಕಾಶಗಳು ಲಭಿಸುತ್ತಿವೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಚಿಂಚಣಿ ಸಿದ್ದಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮೀಜಿ ಆಶಿರ್ವಚನ ನೀಡಿದರು. ಪ್ರೊ.ಆರ್.ವೈ.ಚಿಕ್ಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥ ಉದಯ ಪಾಟೀಲ ಅವರು  `ಇಂಗ್ಲಿಷ್ ಫಾರ್ ಎವರಿವನ್~ ಕೋರ್ಸ್‌ನ ವಿವರಣೆ ನೀಡಿದರು. ಹಿರಿಯ ಸಹಕಾರಿ ಶಾಂತಪ್ಪಣ್ಣ ಮಿರಜಿ, ಡಾ.ಬಿ.ಎ.ಮಾನೆ, ಡಾ.ಜೆ.ಎ.ಸದಲಗೆ, ವಿಜಯ ಮಾಂಜರೇಕರ, ಅನೀಲ ನಿಂಬಾಳಕರ, ಬಸವರಾಜ ಮುಸಂಡಿ, ಸಚೀನ ಮೆಕ್ಕಳಕಿ, ಜೆ.ಟಿ.ಬೋಕೆ, ಆರ್.ಎ.ಮಿಠಾರೆ ಮುಂತಾದವರು ಉಪಸ್ಥಿತರಿದ್ದರು. ಕೀರ್ತಿ ಕರ‌್ಹಾಡಕರ ಸ್ವಾಗತಿಸಿದರು. ವನಶ್ರೀ ಶಿಡ್ಲೀಹಾಳಮಠ ನಿರೂಪಿಸಿದರು. ವೈಭವ ಪಾಟೀಲ ವಂದಿಸಿದರು.

ಪ್ರತಿಕ್ರಿಯಿಸಿ (+)