ಇಂಗ್ಲೆಂಡ್: ಮೊದಲ ಸಲಿಂಗ ವಿವಾಹ

ಬ್ರಿಗ್ಟನ್(ಎಎಫ್ಪಿ): ಬ್ರಿಟನ್ ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದ ನಂತರ ಇದೇ ಮೊದಲ ಬಾರಿಗೆ ಶುಕ್ರವಾರ ತಡರಾತ್ರಿ ಸಲಿಂಗಿ ಪ್ರೇಮಿಗಳ ವಿವಾಹ ನೂರಾರು ಅತಿಥಿಗಳ ಸಮ್ಮುಖದಲ್ಲಿ ನಡೆಯಿತು.
ಇಂಗ್ಲೆಂಡಿನ ದಕ್ಷಿಣ ತೀರದಲ್ಲಿ ಇರುವ ಬ್ರಿಗ್ಟನ್ನಲ್ಲಿ ಕಳೆದ ರಾತ್ರಿ ನೀಲ್ ಅಲ್ಲರ್ಡ್ ಮತ್ತು ಆಂಡ್ರೂ ವೇಲ್ ಉಂಗುರ ಬದಲಾಯಿಸಿಕೊಂಡರು. ನಂತರ ಆಲಿಂಗಿಸಿಕೊಂಡು ಚುಂಬನ ವಿನಿಮಯ ಮಾಡಿಕೊಂಡರು.
‘ಬ್ರಿಟನ್ನ ಸಲಿಂಗ ವಿವಾಹ ಕಾಯ್ದೆ ಈ ಕ್ರಾಂತಿಕಾರಿ ಬದಲಾವಣೆ ಬೇರೆ ದೇಶಗಳಿಗೂ ಮಾದರಿಯಾಗಲಿ’ ಎಂದು ಈ ಜೋಡಿ ಹೇಳಿದೆ. ಪ್ರಧಾನಿ ಡೇವಿಡ್ ಕ್ಯಾಮರೂನ್ ‘ನಮ್ಮ ದೇಶಕ್ಕೆ ಮಹತ್ವದ ದಿನ’ ಎಂದು ಹೇಳಿದ್ದಾರೆ.
ಸಲಿಂಗಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳಲು, ಸಹಬಾಳ್ವೆ ನಡೆಸಲು ೨೦೦೫ರಲ್ಲಿ ಕಾನೂನುಬದ್ಧ ಅವಕಾಶ ನೀಡಲಾಗಿತ್ತು. ಆದರೆ, ವಿವಾಹಕ್ಕೆ ಅಧಿಕೃತ ಕಾನೂನು ಮಾನ್ಯತೆ ದೊರೆತಿರಲಿಲ್ಲ.
1967ರಿಂದ ಇಂಗ್ಲೆಂಡಿನಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆಗೆ ಒತ್ತಾಯಿಸಿ ಹೋರಾಟ ನಡೆದಿತ್ತು. ಕನ್ಸ್ರ್ವೆಟಿವ್ ಪಕ್ಷ ಮತ್ತು ಇಂಗ್ಲೆಂಡ್ ಚರ್ಚ್ ಈ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವುದನ್ನು ವಿರೋಧಿಸಿದ್ದವು.
ಬಿಬಿಸಿ ರೇಡಿಯೊ ಇತ್ತೀಚೆಗೆ ನಡೆಸಿದ್ದ ಸಮೀಕ್ಷೆಯಲ್ಲಿ ಶೇ 68 ಜನ ಸಲಿಂಗಿ ವಿವಾಹವನ್ನು ಸಮರ್ಥಿಸಿದ್ದರು ಮತ್ತು ಶೇ 26 ಮಂದಿ ಇದನ್ನು ವಿರೋಧಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.