ಸೋಮವಾರ, ಜೂನ್ 14, 2021
26 °C
ಬೆಂಗಳೂರು ಉತ್ತರ ಅಭ್ಯರ್ಥಿ ಆಯ್ಕೆ

ಇಂದು ಕಾಂಗ್ರೆಸ್‌ ಪ್ರಾಥಮಿಕ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಗೆ ಗುರುವಾರ ಪ್ರಾಥಮಿಕ ಚುನಾವಣೆ ನಡೆಯಲಿದೆ. ಪಕ್ಷದ 478 ಸದಸ್ಯರು ಅಭ್ಯರ್ಥಿ ಆಯ್ಕೆಗೆ ಮತದಾನ ಮಾಡಲಿದ್ದಾರೆ.ಮಾಜಿ ಸಂಸದ ಸಿ.ನಾರಾಯಣ­ಸ್ವಾಮಿ, ಮಾಜಿ ಶಾಸಕ ನೆ.ಲ.­ನರೇಂದ್ರ­ಬಾಬು, ಎಐಸಿಸಿ ವಕ್ತಾರ ಎಂ.ವಿ.ರಾಜೀವ್‌ ಗೌಡ ಮತ್ತು ಕೆಪಿಸಿಸಿ ಕಾರ್ಯದರ್ಶಿ ಜಿ.ಸಿ.ಚಂದ್ರ­ಶೇಖರ್‌ ಚುನಾವಣಾ ಕಣದಲ್ಲಿ­ದ್ದಾರೆ. ಶೇಕಡ 50ಕ್ಕಿಂತ ಹೆಚ್ಚು ಮತ ಪಡೆಯುವವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ­ಯಾಗಲಿ­ದ್ದಾರೆ.ಈ ಚುನಾವಣೆಯಲ್ಲಿ ಮೊದಲ ಮತ್ತು ಎರಡನೆ ಆದ್ಯತೆಯ ಮತಗಳನ್ನು ಚಲಾಯಿಸಲು ಅವಕಾಶ ಇದೆ. ಮೊದಲ ಆದ್ಯತೆಯ ಮತಕ್ಕೆ 100 ಅಂಕ ಮತ್ತು ಎರಡನೇ ಆದ್ಯತೆ ಮತಕ್ಕೆ 50 ಅಂಕ ನಿಗದಿ ಮಾಡಲಾಗಿದೆ. ಯಾವುದೇ ಅಭ್ಯರ್ಥಿ ಮೊದಲ ಆದ್ಯತೆಯ ಒಟ್ಟು ಮತಗಳಲ್ಲಿ ಶೇ 50ರಷ್ಟನ್ನು ಪಡೆಯದೇ ಇದ್ದರೆ, ಎರಡನೇ ಆದ್ಯತೆಯ ಮತಗಳನ್ನು ಲೆಕ್ಕ ಹಾಕಲಾಗುತ್ತದೆ.

ರಹಸ್ಯ ಚುನಾವಣೆ

ಬೆಳಿಗ್ಗೆ 10.30ಕ್ಕೆ ಮತದಾರರ ಸಮಾವೇಶ ಆರಂಭವಾಗುತ್ತದೆ. ಅದಕ್ಕೂ ಮುನ್ನವೇ ಎಲ್ಲ ಮತದಾ­ರರೂ ಸಮಾವೇಶದ ಸಭಾಂಗಣದ ಒಳಕ್ಕೆ ಸೇರಬೇಕು. ನಂತರ ಬಾಗಿಲು ಮುಚ್ಚಲಾಗುತ್ತದೆ. ಬಳಿಕ ಎಲ್ಲ ಅಭ್ಯರ್ಥಿಗಳಿಗೂ ಮತದಾರರನ್ನು ಉದ್ದೇಶಿಸಿ ಮಾತನಾಡಲು ತಲಾ 10 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ನಂತರ ಚುನಾವಣೆ ನಡೆಯುತ್ತದೆ. ಅಲ್ಲಿಯೇ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಆಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.