ಬುಧವಾರ, ಜೂನ್ 16, 2021
26 °C

ಇಂದು, ನಾಳೆ ಅಶ್ವತ್ಥ್ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಗೀತ ಕ್ಷೇತ್ರದ ದಂತಕತೆ ಎಂದೇ ಪರಿಗಣಿಸಲಾಗುವ ಸಿ.ಅಶ್ವತ್ಥ್‌ ಅವರಿಗೆ ‘ಭೂಮಿಜಾ’ ಸಂಸ್ಥೆ ಮಾರ್ಚ್ ೭ರಿಂದ ೧೪ರವರೆಗೆ ಎರಡು ಸ್ಥಳಗಳಲ್ಲಿ ಏಕಕಾಲಕ್ಕೆ ಸಂಗೀತ ನಮನ ಹಮ್ಮಿಕೊಂಡಿದೆ. ಮಾ.7ರಿಂದ ಮಾ.14ರವರೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆದರೆ, ಮಾ.8ರಿಂದ ಮಾ.14ರವರೆಗೆ ಜೆ.ಪಿ.ನಗರ ಪುಟ್ಟೇನಹಳ್ಳಿಯ ಬ್ರಿಗೇಡ್‌ ಮಿಲೇನಿಯಂ ಕನ್ವೆನ್ಷನ್‌ ಹಾಲ್‌ನಲ್ಲಿ ಅದೇ ಮಾದರಿಯ ಕಾರ್ಯಕ್ರಮ ಏರ್ಪಾಡಾಗಿದೆ.ಕಾರ್ಯಕ್ರಮದ ಅಂಗವಾಗಿ ಎಂ. ಡಿ. ಪಲ್ಲವಿ ಅವರು ಅಶ್ವಥ್ ಅವರ ಸಂಗೀತ ಸಂಯೋಜನೆಯ ಹಾಡುಗಳನ್ನು ಹಾಡಲಿದ್ದಾರೆ. ಅರುಣ್‌ ಕುಮಾರ್‌ (ಡ್ರಮ್ಸ್), ಎನ್. ಎಸ್. ಪ್ರಸಾದ್ (ಮ್ಯಾಂಡೋಲಿನ್), ಪ್ರವೀಣ್ ಡಿ. ರಾವ್ (ಹಾರ್ಮೋನಿಯಂ), ವೇಣುಗೋಪಾಲ್ ರಾಜು (ತಬಲಾ) ಮತ್ತು ಶ್ರೀನಿವಾಸ ಆಚಾರ್ (ಗಿಟಾರ್).ಮರಾಠಿ ನಾಟಕ ಕ್ಷೇತ್ರದ ಯುವ ನಿರ್ದೇಶಕ ಮೋಹಿತ್ ತಕಲ್ಕರ್ ನಿರ್ದೇಶನದ ಅಶ್ವತ್ಥ್ ಕುರಿತ ಮತ್ತೊಂದು ಪ್ರಸ್ತುತಿ ಈ ಕಾರ್ಯಕ್ರಮಗಳಲ್ಲಿ ವಿಶೇಷ ಆಕರ್ಷಣೆಯಾಗಲಿದೆ. ಮೋಹಿತ್‌ ಅವರು ಅಶ್ವಥ್ ಅವರ ಹಲವು ಸ್ನೇಹಿತರನ್ನು ಸಂಪರ್ಕಿಸಿ, ಅವರ ಅಭಿಪ್ರಾಯಗಳ ಆಧಾರದ ಮೇಲೆ ತಯಾರಿಸಿದ ವರ್ಣನೆಯನ್ನು ಆರ್‌ಜೆ ವಾಸಂತಿ ಹರಿಪ್ರಕಾಶ್ ಪ್ರದರ್ಶಿಸಲಿದ್ದಾರೆ.ಇಮ್ಯಾಜಿನ್ ಸ್ಟೋರ್ ಮತ್ತು ಆಪಲ್ ಪ್ರೀಮಿಯಂ ರೆಸೆಲ್ಲರ್ (ಎಪಿಆರ್) ಕಾರ್ಯಕ್ರಮದ ಗ್ರಾಫಿಕ್ ಡಿಸೈನರ್ ಆಗಿದ್ದಾರೆ. ಕಾರ್ಯಕ್ರಮದ ಅವಧಿ ೯೦ ನಿಮಿಷ. ಸಮಯ: ಪ್ರತಿದಿನ ಸಂಜೆ 7.30. ಟಿಕೆಟ್‌ಗಳು bookmyshow.comನಲ್ಲಿ ಲಭ್ಯ. ಮಾಹಿತಿಗೆ: ೦೮೦-೨೩೪೪೫೮೧೦/ ೨೩೪೪೩೯೫೬/ ೪೦೧೮೨೨೨೨.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.