ಗುರುವಾರ , ಮಾರ್ಚ್ 4, 2021
22 °C
ಚೆಲ್ಲಾಪಿಲ್ಲಿ

ಇಂದು, ನಾಳೆ ‘ಬೈಲೂ’ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು, ನಾಳೆ ‘ಬೈಲೂ’ ಪ್ರದರ್ಶನ

ಕೋಲ್ಕತ್ತಾದ ವಸ್ತ್ರ ವಿನ್ಯಾಸಕ ಬಪ್ಪಾದಿತ್ಯ ಬಿಸ್ವಾಸ್‌ ಅವರು ತಮ್ಮ ‘ಬೈಲೂ’ ಸೀರೆ, ದುಪಟ್ಟಾಗಳ ಸಂಗ್ರಹದೊಂದಿಗೆ ಈ ವರ್ಷದ ಮೊದಲ ಪ್ರದರ್ಶನವನ್ನು ಮಾ.7 ಮತ್ತು 8ರಂದು ರೇನ್‌ಟ್ರೀ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ.ಅವರ ಈ ಬೇಸಿಗೆ ಸಂಗ್ರಹದಲ್ಲಿ ಬಾಟಿಕ್‌, ಡಾಬು ಜಾಮ್ದಾನಿ, ನೀಲ್‌, ಕಾಂತಾ, ಲಿನನ್, ಆಬಿರ್‌ ಹಾಗೂ ಕ್ಯೂಪಿ ಸಿಲ್ಕ್‌ ಸೀರೆಗಳು ಇರುತ್ತವೆ. ಈ ಬಾರಿ ‘ನೀಲ್‌’ ಸಂಗ್ರಹ ಹೊಸ ಪರಿಚಯ. ಪ್ರಾಕೃತಿಕವಾದ ಇಂಡಿಗೊ (ನೀಲಿ) ಬಣ್ಣದಲ್ಲಿ ಚಮತ್ಕಾರ ಮಾಡಿರುವ ಬಪ್ಪಾದಿತ್ಯ, ನೀಲಿ ಬಣ್ಣವನ್ನು ವಿಮೋಚನೆ ಮತ್ತು ಸ್ವಾತಂತ್ರ್ಯದ ಸಂಕೇತದ ಪರಿಕಲ್ಪನೆಯಲ್ಲಿ ಬಳಸಿರುವುದು ವಿಶೇಷ.ಜಾಮ್ದಾನಿ ತಂತ್ರಗಾರಿಕೆಯಲ್ಲಿ ಸೀರೆಗಳನ್ನು ನೇಯಲಾಗಿದೆಯಂತೆ. ಉಳಿದಂತೆ ‘ಬೈಲೂ’ ಸಂಗ್ರಹದ ವಿನ್ಯಾಸಗಳಾದ ದುಪಟ್ಟಾ, ಸ್ಕಾರ್ಫ್‌ಗಳು, ಮೆಟೀರಿಯಲ್‌ಗಳು, ಮಟ್ಕಾಗಳು, ಲಭ್ಯವಿರುತ್ತವೆ ಎಂದು ಬಪ್ಪಾದಿತ್ಯ ತಿಳಿಸಿದ್ದಾರೆ. ಸ್ಥಳ: ರೇನ್‌ಟ್ರೀ, ಹೈಗ್ರೌಂಡ್ಸ್‌, ಐಟಿಸಿ ವಿಂಡ್ಸರ್‌ನ ಎದುರು. ಸಮಯ: ಎರಡೂ ದಿನ ಬೆಳಿಗ್ಗೆ 10ರಿಂದ ಸಂಜೆ 7. ಮಾಹಿತಿಗೆ: 080 3272 3251/ 2235 4396. z

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.