ಚಿಕ್ಕಜಾಜೂರು: ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವವಾಗಿ ಬೆಟ್ಟದ ಮೇಲೆ ನೆಲೆಸಿರುವ ವೀರಭದ್ರಸ್ವಾಮಿ ಅಕ್ಷರಶಃ ಭಕ್ತರ ಪಾಲಿನ ಆರಾಧ್ಯ ದೈವವಾಗಿ ನೆಲೆಗೊಂಡಿದ್ದಾನೆ ಎಂಬುದು ಇಲ್ಲಿನ ಲಕ್ಷಾಂತರ ಭಕ್ತರ ನಂಬಿಕೆಯಾಗಿದೆ.

ಚಿಕ್ಕಜಾಜೂರಿನಿಂದ 5ಕಿ.ಮೀ. ದೂರದಲ್ಲಿರುವ ಕಡೂರು ಬೆಟ್ಟದ ಮೇಲೆ ನೆಲೆಸಿರುವ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯಗಳಿಗೆ ರಾಜ್ಯದ ವಿವಿಧ ಕಡೆಗಳಿಂದ ಸಹಸ್ರಾರು ಭಕ್ತರು ತಪ್ಪದೇ ಆಗಮಿಸಿ, ತಮ್ಮ ಹರಕೆಗಳನ್ನು ತೀರಿಸುವುದು ವಾಡಿಕೆಯಾಗಿದೆ.

ಇತಿಹಾಸ: ವಿಜಯ ನಗರ ಅರಸ ಅಚ್ಯುತರಾಯ ಮಹಾನವಮಿಯಂದು ಬೇಟೆಗಾಗಿ ಇಲ್ಲಿಗೆ ಬಂದಿದ್ದಾಗ, ಅಚ್ಯುತರಾಯ ಬೆಟ್ಟದ ಕೆಳಗೆ ಇದ್ದ ದೇವಾಲಯವನ್ನು ನೋಡಿ, ಅನಾಥವಾಗಿದ್ದ ವೀರಭದ್ರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬೆಟ್ಟದ ತಪ್ಪಲಿನಲ್ಲಿನ 550 ಎಕರೆ ಭೂಮಿಯನ್ನು ದೇವಾಲಯಕ್ಕೆ ನೀಡಿದನೆಂದು ಚಿಕ್ಕಜಾಜೂರಿನ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿರುವ ಶಾಸನದಲ್ಲಿ ಉಲ್ಲೇಖವಾಗಿದೆ.

ಕಲಾಕರ್ಷಣೆ ಕೇಂದ್ರ: ಇಲ್ಲಿ ಹಲವು ಕಲಾತ್ಮಕ ಶಿಲ್ಪ ಕಲಾಕೃತಿಗಳಿವೆ. ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ 56 ಕಂಬಗಳಿಂದ ನಿರ್ಮಾಣವಾಗಿರುವ ಮಠವಿದೆ. ಇದನ್ನು ಚಿಕ್ಕೊಡೆರಮಠ ಎಂದು ಕರೆಯಲಾಗಿದೆ. ಇಲ್ಲಿನ ಕಂಬವೊಂದರ ಮೇಲೆ ಪ್ರಾಣಿಯ ದೇಹ ಹಾಗೂ ಹೆಣ್ಣಿನ ಮುಖವಿರುವ (ಕಾಮದೇನು) ಹಾಗೂ ತಪಸ್ಸಿನಲ್ಲಿ ನಿರತನಾದ ಋಷಿಯ ಉಬ್ಬು ಶಿಲ್ಪಗಳು ಆಕರ್ಷಣೀಯವಾಗಿವೆ. ಮಠದ ಪಕ್ಕದಲ್ಲಿ ಎಲ್ಲಾ ಕಾಲದಲ್ಲೂ ತುಂಬಿಕೊಂಡಿರುವ ಚಿಕ್ಕ ಪುಷ್ಕರಣಿ ಇದೆ.

ಇದರ ಸಮೀಪದಲ್ಲಿ ದುಗ್ಗಳದ ಹೊಂಡ ಎಂದು ಕರೆಯಲ್ಪಡುವ ಪುಷ್ಕರಣಿ ಇದೆ. ಇಲ್ಲಿನ ಮುಖದ್ವಾರದಲ್ಲಿನ ಕಂಬಗಳ ಮೇಲೆ ಕೆತ್ತಲ್ಪಟ್ಟಿರುವ ಉಬ್ಬು ಶಿಲ್ಪಗಳು ಆಕರ್ಷಣೀಯವಾಗಿವೆ. ಪುಷ್ಕರಣಿ ಯನ್ನು ಕಲ್ಲುಗಳಿಂದ ಮತ್ತು ತಂತ್ರಗಾರಿಕೆಯಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ.

ಸ್ವಾಮಿಯ ದೇವಸ್ಥಾನದ ಹಿಂಭಾಗದಲ್ಲಿ ಹೊಂಡವಿದೆ. ಕಲ್ಲಿನಿಂದ ಜಿನುಗುವ ನೀರು ಹೊಂಡದಲ್ಲಿ ಬೀಳುವುದರಿಂದ ಹೊಂಡ ಸದಾಕಾಲ ತುಂಬಿಕೊಂಡಿರುತ್ತದೆ. ದೇವಾಲಯದ ಗೋಪುರದ ಪಕ್ಕದಲ್ಲಿ ವಿಜಯನಗರ ಅರಸ ಎರಡನೇ ದೇವರಾಯನ ಕಾಲಕ್ಕೆ ಸೇರಿದ್ದ ಬೃಹತ್ ಬಂಡೆಗಲ್ಲು ಶಾಸನವಿದೆ. 13ಸಾಲುಗಳಲ್ಲಿ ಕೆತ್ತಲ್ಪಟ್ಟಿರುವ ಶಾಸನ ದೇವಸ್ಥಾನದ ಪೂಜಾ ಕಾರ್ಯಕ್ಕೆ ಜಮೀನನ್ನು ದೇಣಿಗೆ ನೀಡಿರುವ ಹಾಗೂ ಪೂಜಾ ಕಾರ್ಯವನ್ನು ನಡೆಸಿಕೊಂಡು ಹೋಗುವ ಬಗ್ಗೆ ತಿಳಿಸಲಾಗಿದೆ.

ದೇವಸ್ಥಾನದ ಪಕ್ಕದಲ್ಲಿ ಅಂತರಗಂಗೆ ಎಂದು ಕರೆಯಲ್ಪಡುವ ಪಾತಾಳಗಂಗೆ ದೇವಸ್ಥಾನವಿದೆ. ಗರ್ಭಗೃಹದಲ್ಲಿ ವೀರಭದ್ರ ಸ್ವಾಮಿಯ ಉಬ್ಬು ಶಿಲ್ಪವಿದೆ. ಮುಂದೆ ಬಸವಣ್ಣನ ಪ್ರತಿಮೆ, ದೇವಸ್ಥಾನದ ಬಲ ಭಾಗದಲ್ಲಿ ಕಂಬಗಳಿಂದ ನಿರ್ಮಾಣವಾಗಿರುವ ಸಭಾ ಮಂಟಪವಿದೆ. ಇಲ್ಲಿ ಶಿವಲಿಂಗ ಹಾಗೂ ಇನ್ನಿತರ ದೇವತೆಗಳ ಮೂರ್ತಿಗಳಿವೆ.

ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಸ್ವಾಮಿಗೆ ವಿಶೇಷ ಪೂಜೆ ನಡೆಸಲಾಗುವುದು. ಬರುವ ಭಕ್ತರಿಗೆ ನಿತ್ಯ ದಾಸೋಹವನ್ನು ದೇವಸ್ಥಾನ ಸಮಿತಿ ನಡೆಸುವರು. ದೇವಸ್ಥಾನವು ಈಗ ಚಿತ್ರದುರ್ಗದ ಮುರುಘಾ ಮಠದ ಆಡಳಿತಕ್ಕೆ ಸೇರಿದ್ದು, ಶಿವಮೂರ್ತಿ ಮುರುಘಾ ಶರಣರು ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಭಕ್ತರ ದೇಣಿಗೆಯಿಂದ ದೇವಸ್ಥಾನದ ಮುಂಭಾಗದಲ್ಲಿ ಎರಡು ಅಂತಸ್ತಿನ ಕಲ್ಯಾಣ ಮಂಟಪವನ್ನು ದೇವಸ್ಥಾನ ಸಮಿತಿ ನಿರ್ಮಿಸಿದೆ.

ಕಲ್ಯಾಣ ಮಂಟಪದ ಬಳಿ ಆಕರ್ಷಕವಾಗಿ ಕೆತ್ತಲ್ಪಟ್ಟ ಬೃಹತ್ ಉಯ್ಯಾಲೆ ಕಂಬವಿದೆ. ಮಹಾನವಮಿಯಂದು ಬೆಟ್ಟದ ಮೇಲಿನ ಕೋಡಗಲ್ಲಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು.

ಮಾರ್ಚ್ 24ರಂದು ವೀರಭದ್ರಸ್ವಾಮ ಬ್ರಹ್ಮರಥೋತ್ಸವ ನಡೆಯಲಿದೆ. 25ರಂದು ರಥೋತ್ಸವ ನಡಯಲಿದೆ.
ಜಾತ್ರೆ ಸಮಯದಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲಿ ನೆಲೆಸಿರುವ ಗ್ರಾಮದ ಜನರು ಜಾತ್ರೆಗೆ ಬಂದು ಹರಕೆ ಸೇವೆ ಸಲ್ಲಿಸುವರು. ಮಳೆ, ಬೆಳೆ, ಮೊದಲ ಬಿತ್ತನೆ, ಕೊಳವೆ ಬಾವಿ ತೋಡಿಸಲು, ಮದುವೆ ಮತ್ತಿತರ ಕೆಲಸಗಳನ್ನು ಗ್ರಾಮಸ್ಥರು ಕೈಗೊಳ್ಳುವ ಮುನ್ನ, ಸ್ವಾಮಿಯ ಅಪ್ಪಣೆ ಕೇಳುವುದು ಇಲ್ಲಿನ ಸಂಪ್ರದಾಯವಾಗಿದೆ.

ಸ್ವಾಮಿಯ ಅಪ್ಪಣೆ ಆಗದಿದ್ದಲ್ಲಿ ಗ್ರಾಮಸ್ಥರು ಯಾವುದೇ ಕಾರ್ಯವನ್ನು ಕೈಗೊಳ್ಳುವುದಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯರು. ದೇವಾಲಯಕ್ಕೆ ಬರುವ ಭಕ್ತರು ಇಲ್ಲಿನ ಪ್ರಕೃತಿ ಮಡಿಲಿನಲ್ಲಿ ಕೆಲ ಕಾಲ ಇದ್ದು, ಸಂಜೆ ಸ್ವಗ್ರಾಮಗಳಿಗೆ ಮರಳುವರು. ಒಟ್ಟಿನಲ್ಲಿ ಇದೊಂದು ಕೇವಲ ಧಾರ್ಮಿಕ ಕೇಂದ್ರ ಮಾತ್ರವಲ್ಲ ಪರಿಸರ ಹಾಗೂ ಧಾರ್ಮಿಕ ಆಸಕ್ತರ ಪುಣ್ಯ ಭೂಮಿಯೂ ಕೂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.