ಸೋಮವಾರ, ಜನವರಿ 20, 2020
29 °C

ಇತರರಂತೆಯೇ ಈ ಪಕ್ಷ ಕೂಡ!?

–ಸಾಮಗ ದತ್ತಾತ್ರಿ,ಬೆಂಗಳೂರು Updated:

ಅಕ್ಷರ ಗಾತ್ರ : | |

ಸಮೀಕ್ಷೆಯೊಂದರಿಂದ ಚಕಿತಗೊಳಿಸುವ ಸಂಗತಿ ಹೊರಬಿದ್ದಿದೆ. ಆಮ್‌ ಆದ್ಮಿ ಪಕ್ಷದ ವತಿಯಿಂದ ಗೆದ್ದವರಲ್ಲಿ ಶೇ 11 ರಷ್ಟು ಉತ್ಸಾಹಿಗಳು ಕ್ರಿಮಿನಲ್‌ ಹಿನ್ನೆಲೆ ಉಳ್ಳವರು ಎನ್ನುವುದೇ ಈ ಸಂಗತಿ!(ಪ್ರ.ವಾ. ಡಿ. 14) ತಾನು ಅಪ್ಪಟ ಪ್ರಾಮಾಣಿಕತೆಗೆ ಮಾದರಿಯಾಗುತ್ತೇನೆಂದು ದೆಹಲಿಯ, ದೇಶದ ಜನತೆಯ ಮುಂದೆ ಎದೆಯೊಡ್ಡಿ ಮಾತನಾಡುತ್ತಿದ್ದ ಅರವಿಂದ ಕೇಜ್ರಿವಾಲ್‌ ಇದಕ್ಕೆ ಏನು ಹೇಳುತ್ತಾರೊ!  ಈ ಕಳಂಕವನ್ನು ತೊಡೆದುಹಾಕಲು ಈ ಚುನಾಯಿತ ಶಾಸಕರಿಗೆ ರಾಜೀನಾಮೆ ನೀಡುವಂತೆ ತಾಕೀತು ಮಾಡುವ ನಾಯಕ–ದಾರ್ಷ್ಟ್ಯತನ ಕೇಜ್ರಿವಾ­ಲರಿಗೆ ಇರುವುದಾದರೆ ಮತ್ತು ಅವರು ಹಾಗೆ ತಾಕೀತು ಮಾಡಿದರೆ, ಅವರನ್ನು ಮೆಚ್ಚೋಣ.ಇಲ್ಲದಿದ್ದಲ್ಲಿ, ಇದು ಕೂಡ ಇತರರ ಹಾದಿಯಲ್ಲೇ ಸಾಗುವ ಪಕ್ಷ  ಎಂದುಕೊಂಡು ಜನತೆ ಸುಮ್ಮನಾಗಬೇಕಾಗುತ್ತದೆ. ಹೀಗೆ ‘ಸುಮ್ಮ’­ನಾಗುವುದೂ ಆಮ್‌ ಆದ್ಮಿಗೆ ಮುಂದಕ್ಕೆ ಕ್ಷೇಮ!

 

ಪ್ರತಿಕ್ರಿಯಿಸಿ (+)