ಮಂಗಳವಾರ, ಜೂನ್ 15, 2021
27 °C

ಇದು ಗದಗ ಬಸ್ ತಂಗುದಾಣವಯ್ಯ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ:  ಕುಳಿತುಕೊಳ್ಳಲು ಸುಸಜ್ಜಿತ ಆಸನದ ವ್ಯವಸ್ಥೆ ಇಲ್ಲ. ಬಾಯಾರಿಕೆ ತಣಿಸಲು ಕುಡಿಯುವ ನೀರಿಲ್ಲ. ಮಳೆ, ಬಿಸಿಲು ರಕ್ಷಣೆ ಪಡೆಯಲು ಮೇಲ್ಚಾವಣೆ ಇಲ್ಲ. ಇದು ಗದಗ-ಬೆಟಗೇರಿ ಅವಳಿ ನಗದಲ್ಲಿನ ಬಸ್ ತಂಗುದಾಣಗಳ ದುಃಸ್ಥಿತಿ.ಅವಳಿ ನಗರದಲ್ಲಿ ಬಸ್ ಸಂಚರಿಸುವ ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ನಿರ್ಮಿ ಸಲಾದ ಬಸ್ ನಿಲ್ದಾಣಗಳು ಹಾಳು ಬಿದ್ದಿವೆ. ಅಲ್ಲಿ ಪ್ರಯಾಣಿಕರು ಕುಳಿತುಕೊಳ್ಳದೆ ಕೊಂಚ ದೂರದಲ್ಲಿ ಸರಿದು ಬಿಸಿಲಿನಲ್ಲಿಯೇ ಬಸ್‌ಗೆ ಕಾಯ್ದು ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ.ಕಳೆದ ವರ್ಷಕ್ಕಿಂತ ವರ್ಷ ಅವಳಿ ನಗರದಲ್ಲಿ ಭಾರಿ ಬಿಸಿಲು ಕಾಣಿಸಿಕೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ತಾಪಮಾನ ಬಹಳ ಹೆಚ್ಚಾಗಿದೆ. ಇದರಿಂದ ಜನರು ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ.ಇಂತಹದರಲ್ಲಿ ಒಂದು ಬಡಾವ ಣೆಯಿಂದ ಮತ್ತೊಂದು ಕಾಲೊನಿ- ನಗರಕ್ಕೆ ತೆರಳಲು ಸಿಟಿ ಬಸ್‌ಗಳನ್ನು ಅವಲಂಬಿಸಿರುವ ಪ್ರಯಾಣಿಕರು ಉರಿ ಬಿಸಿಲಿನಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ.ನಗರದಲ್ಲಿನ ಕೆಲವೊಂದು ಬಸ್ ತಂಗುದಾಣಗಳ ಪಕ್ಕದಲ್ಲಿಯೇ ಚರಂಡಿ ಇದ್ದುದರಿಂದ ಪಾದಚಾರಿಗಳು ಅಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಲ್ಲದೇ ಕೆಲವು ನಿಲ್ದಾಣದಲ್ಲಿ ಕಾಂಪೌಂಡ್‌ಗಳನ್ನೇ ಈ ಕೆಲಸಕ್ಕೆ ಬಳಕೆ ಮಾಡಿ ಕೊಳ್ಳ ಲಾಗುತ್ತಿದೆ.ಇದರಿಂದ ಮಹಿಳೆಯರು ಸೇರಿದಂತೆ ಇತರ ಪ್ರಯಾಣಿಕರು ನಿಲ್ದಾಣದ ಹತ್ತಿರ ಬರಲು ಹಿಂಜರಿಯುತ್ತಿದ್ದಾರೆ.

ಪ್ರತಿನಿತ್ಯ ಪ್ರಯಾಣಿಸುವ ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು ತಂಗುದಾಣದ ಆಶ್ರಯ ಪಡೆ ಯುವುದು ಕನಸಿನ ಮಾತು.ಬೆಟಗೇರಿಯ ಹೆಲ್ತ್‌ಕ್ಯಾಂಪ್‌ನ ಬಸ್ ತಂಗುದಾಣ ಸಂಪೂರ್ಣ ಪಾಳು ಬಿದ್ದು ಎರಡು ವರ್ಷವೇ ಕಳೆದಿದೆ. ವಾಣಿಜ್ಯ ಮಹಾವಿದ್ಯಾಲಯಕ್ಕೆ ತೆರಳುವ ರಸ್ತೆಯಲ್ಲಿನ ತಂಗುದಾಣದ ಸ್ಥಿತಿ ಅಷ್ಟಕಷ್ಟೇ.ಮುಳಗುಂದ ನಾಕಾ ಹತ್ತಿರದ ನಿಲ್ದಾಣ, ಹಳೇ ಡಿ.ಸಿ ಕಚೇರಿ ಹತ್ತಿರ, ಹಾತಲಗೇರಿ ನಾಕಾದಲ್ಲಿನ ನಿಲ್ದಾಣ, ಗ್ರೇನ್ ಮಾರ್ಕೇಟ್ ಹತ್ತಿರದ ನಿಲ್ದಾಣಗಳು ಅಳಿವಿನ ಅಂಚಿನಲ್ಲಿವೆ. ನಗರದ ಒಳಗಿರುವ ಬಸ್ ನಿಲ್ದಾಣಗಳ ಕಥೆ ಹೀಗಾದರೆ ಪ್ರಮುಖವಾಗಿ ಹುಬ್ಬಳ್ಳಿಗೆ ಹೋಗುವ ಪ್ರಯಾಣಿಕರಿಗೆ ಮುಳಗುಂದ ನಾಕಾ ದಲ್ಲಿ ತಲೆ ಮೇಲೆ ಸೂರೇ ಇಲ್ಲ. ಬಿಸಿಲಾಗಲಿ, ಮಳೆಯಾಗಲಿ ಬಟ್ಟ ಬಯಲಿನ ರಸ್ತೆಯಲ್ಲಿಯೇ ನಿಂತು ಬಸ್‌ಗಾಗಿ ಕಾಯಬೇಕು.ದಿನಕ್ಕೆ ಸಾವಿರಾರು ಪ್ರಯಾಣಿಕರು ನಿಂತುಕೊಳ್ಳುವ ಈ ಜಾಗಾದಲ್ಲಿ ಉತ್ತಮ ಬಸ್ ತಂಗುದಾಣವಾಗಬೇಕು ಎಂದು ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಆಗ್ರಹ.ಕೆಲವೊಂದು ನಿಲ್ದಾಣಗಳಲ್ಲಿ ನಗರ ಬಸ್ ಅಲ್ಲದೇ ಬೇರೆ ಊರುಗಳಿಗೆ ಹೋಗುವ ಬಸ್‌ಗಳು ಸಹ ನಿಲ್ಲುತ್ತವೆ. ಬೇರೆ ಊರುಗಳಿಗೆ ಪ್ರಯಾಣಿಕರು ಈ ನಿಲ್ದಾಣಗಳಿಂದಲೇ ಪ್ರಯಾಣಿಸಬೇಕು.ಹೀಗಾಗಿ ಹೆಚ್ಚಾಗಿ ಬಳಕೆಯಾಗು ತ್ತಿರುವ ನಗರ ಬಸ್ ನಿಲ್ದಾಣಗಳನ್ನು ದುರಸ್ತಿಗೊಳಿಸಿ ಅವುಳಿಗೆ ಹೊಸ ಮಾರ್ಪಾಡು ಮಾಡಬೇಕು.ಹೈಟೆಕ್ ನಿಲ್ದಾಣಗಳನ್ನಾಗಿ ಪರಿವರ್ತಿಸಬೇಕು. ಜನರಿಗೆ ಕುಳಿತು ಕೊಳ್ಳುವ ಸುಸಜ್ಜಿತ ಆಸನದ ವ್ಯವಸೆ ಯಾಗಬೇಕು.ಅವಸಾನದಲ್ಲಿರುವ   ತಂಗು ದಾಣಗಳನ್ನು ಅಭಿವೃದ್ಧಿ ಪಡಿಸಲು ನಗರ ನಿವಾಸಿಗಳ ಒತ್ತಾಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.