ಉಡುಪಿ: ಕರಾವಳಿ ರಕ್ಷಣಾ ಪಡೆಯು ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಕೆಲವೇ ದಿನಗಳಲ್ಲಿ ಸ್ವಂತ ದೋಣಿ ನಿಲ್ದಾಣವನ್ನು (ಜಟ್ಟಿ) ಸ್ಥಾಪಿಸಲಿದೆ.ನಿಲ್ದಾಣ ಆರಂಭಕ್ಕೆ ಸುಮಾರು ಎರಡೂವರೆ ಎಕರೆ ಸ್ಥಳದ ಅವಶ್ಯಕತೆ ಇದ್ದು ಈಗಾಗಲೇ ಸ್ಥಳ ಹುಡುಕಾಟ ಕಾರ್ಯ ಆರಂಭವಾಗಿದೆ. ಮಲ್ಪೆ ಕಡಲ ತೀರಕ್ಕೆ ಗುರುವಾರ ಭೇಟಿ ನೀಡಿದ ಆಂತರಿಕ ಭದ್ರತೆ ವಿಭಾಗದ ಐಜಿಪಿ ಭಾಸ್ಕರ್ ರಾವ್ ಕೆಲ ಸ್ಥಳಗಳನ್ನು ಪರಿಶೀಲನೆ ನಡೆಸಿದರು.

ದೋಣಿ ನಿಲ್ದಾಣ ಸ್ಥಾಪನೆ ಮತ್ತು ಗಂಗೊಳ್ಳಿ, ಹೆಜಮಾಡಿ, ಬೇಲೇಕೇರಿ ಮತ್ತು ಹೊನ್ನಾವರದಲ್ಲಿ ನೂತನ ಪೊಲೀಸ್ ಠಾಣೆ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ಭಾಸ್ಕರ್ ರಾವ್ `ಪ್ರಜಾವಾಣಿ~ಗೆ ತಿಳಿಸಿದರು.

ಮೂರು ವರ್ಷಗಳ ಹಿಂದೆ ಆಂತರಿಕ ಭದ್ರತೆ ವಿಭಾಗವನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಈ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಭಯೋತ್ಪಾದನಾ ನಿಗ್ರಹ ಪಡೆ, ನಕ್ಸಲ್ ನಿಗ್ರಹ ಪಡೆ ಮತ್ತು ಕರಾವಳಿ ರಕ್ಷಣಾ ಪಡೆ ಎಂಬ ಮೂರು ಪ್ರತ್ಯೇಕ ಘಟಕಗಳನ್ನು ಆಂತರಿಕ ಭದ್ರತಾ ವಿಭಾಗವು ಹೊಂದಿದೆ.

ಕರಾವಳಿ ರಕ್ಷಣಾ ಪಡೆಗೆ ಪ್ರತ್ಯೇಕ ಸಿಬ್ಬಂದಿಯನ್ನು ಈಗಾಗಲೇ ನೇಮಿಸಲಾಗಿದ್ದು ರಾಜ್ಯದ ಗಡಿ ತಲಪಾಡಿಯಿಂದ ಕಾರವಾರದ ವರೆಗೆ ಇರುವ 320 ಕಿಲೋಮೀಟರ್ ವ್ಯಾಪ್ತಿಯ ಕರಾವಳಿ ಪ್ರದೇಶದ ಭದ್ರತೆಯ ಜವಾಬ್ದಾರಿ ಈ ಪಡೆಯ ಮೇಲಿದೆ.

ಹದಿನೈದು ಯಾಂತ್ರೀಕೃತ ದೋಣಿಗಳನ್ನು ಈ ಪಡೆ ಹೊಂದಿದೆ. ಆದರೆ ಸ್ವಂತ ದೋಣಿ ನಿಲ್ದಾಣ ಇಲ್ಲ. ಮಲ್ಪೆಯಲ್ಲಿರುವ ದೋಣಿ ನಿಲ್ದಾಣವನ್ನು ಸದ್ಯಕ್ಕೆ ಉಪಯೋಗಿಸಿಕೊಳ್ಳಲಾಗುತ್ತಿದೆ.`ಸಿಬ್ಬಂದಿ ಈಗ ಮಲ್ಪೆಯ ದೋಣಿ ನಿಲ್ದಾಣವನ್ನು ಬಳಸುತ್ತಿದ್ದಾರೆ. ಆದರೆ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ಅನುಕೂಲತೆ ದೃಷ್ಟಿಯಿಂದ ಈ ಪಡೆಗೆ ಪ್ರತ್ಯೇಕ ದೋಣಿ ನಿಲ್ದಾಣದ ಅಗತ್ಯವಿದೆ. ದೇಶದಲ್ಲಿ ಒಟ್ಟು 9650 ಕಿಲೋಮೀಟರ್ ಕರಾವಳಿ ಪ್ರದೇಶ ಇದೆ. ಕೇಂದ್ರ ಸರ್ಕಾರವು ಕರಾವಳಿ ರಕ್ಷಣೆಗೆಂದು ಒಂದು ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ.

ರಾಜ್ಯದ ಕರಾವಳಿ ರಕ್ಷಣಾ ಪಡೆಯು ಸ್ವಂತ ದೋಣಿ ನಿಲ್ದಾಣ ಸ್ಥಾಪಿಸಲು ಸಹ ಕೇಂದ್ರ ಹಣಕಾಸಿನ ನೆರವು ನೀಡಲಿದೆ~ ಎಂದು ಭಾಸ್ಕರ್ ರಾವ್ ತಿಳಿಸಿದರು.ಜಾಗ ಗುರುತಿಸುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಜತೆ ಈಗಾಗಲೇ ಚರ್ಚಿಸಲಾಗಿದೆ. ಆ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ನಿಲ್ದಾಣ ಸ್ಥಾಪಿಸಲಾಗುತ್ತದೆ.

ಇನ್ನೂ ಕೆಲವು ದೋಣಿಗಳು ರಕ್ಷಣಾ ಪಡೆಯನ್ನು ಸೇರ್ಪಡೆಗೊಳ್ಳಲಿವೆ. ಮೀನುಗಾರರ ಜತೆ ಸಂಯೋಜನೆ ಹೊಂದಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.ಇದರಿಂದ ಸಿಬ್ಬಂದಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಎಂಜಿನ್ ಮೆನ್ ಸೇರಿದಂತೆ ಇತರ ಸಿಬ್ಬಂದಿಯನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಸಿಬ್ಬಂದಿಗೂ ಅಗತ್ಯ ಇರುವ ತರಬೇತಿಯನ್ನೂ ನೀಡಲಾಗುತ್ತದೆ.ಈಗಾಗಲೇ ಕೆಲ ಸಿಬ್ಬಂದಿಗೆ ನೀರಿನ ಆಳದಲ್ಲಿ ಈಜುವ `ಸ್ಕೂಬ ಡೈವಿಂಗ್~ ತರಬೇತಿ ಕೊಡಿಸಲಾಗಿದೆ. ಎಂದು ಬಾಸ್ಕರ ರಾವ್ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.