ಕಾಮನಬಿಲ್ಲು ನಮ್ಮನ್ನು ವಾಹನ ಲೋಕದ ಹೊಸ ಪ್ರಪಂಚಕ್ಕೆ ಕೊಂಡೊಯ್ಯುತ್ತಿದೆ. ನಮ್ಮ ರಸ್ತೆಗಳಲ್ಲಿ ಕಾಣುವ ಸಾಮಾನ್ಯ ವಾಹನಗಳ ಪರಿಚಯ ಮಾತ್ರ ಇರುವ ನಮಗೆ ವಿಶ್ವದ ಅನೇಕ ವಾಹನಗಳ ಪರಿಚಯ ಮಾಡಿಕೊಟ್ಟಿದೆ. ಇದೆ ರೀತಿ ಮುಂದೆಯು ಕೂಡ ಕಾಮನಬಿಲ್ಲು ವಾಹನ ಪ್ರಪಂಚದ ಹೊಸ ಪಥವನ್ನು ನಮಗೆ ಪರಿಚಯಿಸಲಿ ಎಂದು ಆಶಿಸುತ್ತೇನೆ.
- ಅರುಣ್ ಕೆ.ಯು., ಮಾಲ್ದಾರೆ (ಕೊಡಗು)

ಹಕ್ಕಿಯ ಧ್ವನಿಯನ್ನು ಅನುಸರಿಸಿ ಹೊರಟ ಸಮೀರಾ ಅವರ ಸಾಧನೆ ಅನನ್ಯ. ಆಸಕ್ತಿಯೊಂದು ವೃತ್ತಿಯೂ ಸಂಶೋಧನೆಯ ಮಾರ್ಗವೂ ಆಗಬಹುದೆಂಬುದನ್ನು ಅವರ ಸಾಧನೆ ಅನಾವರಣಗೊಳಿಸುತ್ತಿದೆ. ಈ ಅನನ್ಯ ವ್ಯಕ್ತಿ ಚಿತ್ರವನ್ನು ಕಟ್ಟಿಕೊಟ್ಟ `ಕಾಮನಬಿಲ್ಲು~ ಪುರವಣಿಗೆ ಧನ್ಯವಾದಗಳು.
- ಎಸ್.ಟಿ. ಚಂದ್ರಶೇಖರ, ಮೈಸೂರು

ಯು.ಬಿ. ಪವನಜ ತಮ್ಮ `ಸಿಗ್ನಲ್ ಬೂಸ್ಟರ್~ ಮಾಡುವ ವಿಧಾನದ ಮೂಲಕ ನಮ್ಮಂತೆ ಹಳ್ಳಿಗಾಡಿನಲ್ಲಿರುವ ಅನೇಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಾನೂ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇನೆ. ನನ್ನ ಬಿಎಸ್ಎನ್ಎಲ್ 3ಜಿ ಮೋಡೆಮ್ ಈಗ 3ಜಿಯ ಅನುಭವ ಕೊಡುತ್ತಿದೆ.
- ಯು.ಕೆ. ಕುಮಾರಸ್ವಾಮಿ, ಬೆಟ್ಟಹಳ್ಳಿ(ಹಾಸನ ಜಿಲ್ಲೆ)

ಇಂಗ್ಲಿಷ್ ಕಲಿಕೆ ಕಷ್ಟವಲ್ಲ ಎಂಬುದನ್ನು ಶಶಿಧರ ಗರ್ಗೇಶ್ವರಿ ಒಳ್ಳೆಯಉದಾಹರಣೆಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಹೀಗೆ ಕೆಲವೇ ತಿಂಗಳುಗಳಲ್ಲಿ ಸಂವಹನಕ್ಕೆ ಅಗತ್ಯವಿರುವ ಇಂಗ್ಲಿಷ್ ಕಲಿಯುವುದು ಸಾಧ್ಯವಿದ್ದರೆ ಅದನ್ನೇಕೆ ಶಾಲೆಗಳಲ್ಲಿಯೂ ಪ್ರಯೋಗಿಸಬಾರದು. ಇಂಗ್ಲಿಷನ್ನು ಸರಿಯಾಗಿ ಕಲಿಸಿದರೆ ಕನ್ನಡ ಮಾಧ್ಯಮವನ್ನು ವಿರೋಧಿಸುವವರೂ ಕನ್ನಡ ಮಾಧ್ಯಮವನ್ನು ಒಪ್ಪಿಕೊಳ್ಳುತ್ತಾರಲ್ಲವೇ?
- ಮಲ್ಲೇಶ ಎನ್., ಬಾಳೆಹೊನ್ನೂರು.

ಕಾಮನಬಿಲ್ಲುವಿನಲ್ಲಿ ಕಳೆದ ಸಂಚಿಕೆಯಲ್ಲಿ ಪ್ರಕಟವಾದ `ಮನೆಯಲ್ಲೇ ಮಾಡಿ ಸಿಗ್ನಲ್ಬೂಸ್ಟರ್~ ಲೇಖನ ಓದಿದೆ. ಅದರಲ್ಲಿ ಹೇಳಿದಂತೆ ನಾನು ಪ್ರಯತ್ನಿಸಿ ನೋಡಿದೆ. ಅದು ಯಶಸ್ವಿಯಾಯಿತು. ಇಂತಹ ಉಪಯೋಗಕಾರಿ ವಿಷಯಗಳನ್ನು ತಿಳಿಸುತ್ತಿರುವ ಕಾಮನಬಿಲ್ಲುವಿಗೆ ಧನ್ಯವಾದಗಳು. ಇದೇ ರೀತಿ ನನ್ನ ಮೊಬೈಲಿನಲ್ಲಿಯೂ ನೆಟ್ವರ್ಕ್ ಸಮಸ್ಯೆ ಇದೆ. ಇದು ಬಹು ಜನರು ಎದುರಿಸುತ್ತಿರುವ ಸಮಸ್ಯೆ. ಆದ್ದರಿಂದ ಮೊಬೈಲ್ ಸಂಪರ್ಕವನ್ನು ಸಮರ್ಪಕವಾಗಿಸುವ ಕೆಲವು ಸಲಹೆಗಳ ಬಗ್ಗೆ ಲೇಖನ ಬರಲಿ.
-ಗಿರೀಶ್ ಆರ್. ಎಂ.

ಕೊಳೆಗೇರಿಯ ಹುಡುಗನೊಬ್ಬ ತಾನು ಡಾಕ್ಟರ್ ಆಗಬೇಕು ಎಂಬ ಕನಸನ್ನು ಇಂದು ಸಾಕಾರಗೊಳಿಸಿರುವ ರೀತಿ ನಿಜಕ್ಕೂ ಕುತೂಹಲಕಾರಿಯಾಗಿತ್ತು. ಸಕಲ ಸೌಲಭ್ಯಗಳಿದ್ದೂ ಹಿಂದೇಟಾಗುವ ವಿದ್ಯಾರ್ಥಿಗಳಿಗೆ ಡಾ. ಮುರುಗ ಒಂದು ರೀತಿ ಪಾಠವಿದ್ದಂತೆ. ಇದಕ್ಕೆ ಬೆಂಬಲ ನೀಡಿದ ಸೇವ್ ಅವರ್ ಸೋಲ್ ಮಕ್ಕಳ ಗ್ರಾಮ ಸೇವಾ ಸಂಸ್ಥೆಯ ಉಪಕಾರವನ್ನು ಇಲ್ಲಿ ಮರೆಯುವಂತಿಲ್ಲ. ಇಂತಹ ಲೇಖನವನ್ನು ಪರಿಚಯಿಸಿದ ಕಾಮನಬಿಲ್ಲುವಿಗೆ ಧನ್ಯವಾದಗಳು.
-ಪ್ರೊ. ಆರ್. ವಿ. ಹೊರಡಿ, ಧಾರವಾಡ

`ಹಕ್ಕಿ ಹಾಡಿನ ಬೆನ್ನು ಹತ್ತಿ~ ಲೇಖನದಲ್ಲಿ ವಿವರಿಸಿದ `ಗ್ರೇಟರ್ ರಾಕೆಟ್ ಟೇಲ್ಡ್ ಡ್ರೊಂಗೊ~ ಹಕ್ಕಿಯನ್ನು ಮಲೆನಾಡಿನಲ್ಲಿ ಕಾಜಾಣ ಪಕ್ಷಿಯೆಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಲೇಖನದಲ್ಲಿ ಪ್ರಕಟಿಸಿರುವ ಫೋಟೋದಲ್ಲಿ ಅದಕ್ಕಿರುವ ಎರಡು ಕವಲಿನ ಬಾಲದಲ್ಲಿ ನಡುವೆ ಅದು ಸಪೂರವಾಗಿದ್ದು, ಅವುಗಳ ತುದಿ ಪುಟ್ಟ ಬೀಸಣಿಗೆಯಂತೆ ಅಗಲವಾಗಿರುತ್ತದೆ. ಕುವೆಂಪು ಅವರ ಕೃತಿಗಳಲ್ಲಿ ಮುಖಪುಟಗಳಲ್ಲಿ ಹಾರಾಡುತ್ತಿರುವ ಅಂತಹ ಎರಡು ಹಕ್ಕಿಗಳ ಚಿತ್ರ ಮಾಮೂಲಾಗಿ ಇರುತ್ತಿದ್ದವು. ಈಗಲೂ ಕುಪ್ಪಳ್ಳಿಯ ಆಸು ಪಾಸಿನಲ್ಲಿ ಅವುಗಳನ್ನು ನೋಡಬಹುದು.
- ಡಾ. ಎಚ್. ಡಿ. ಚಂದ್ರಪ್ಪಗೌಡ, ಶಿವಮೊಗ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.