ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ್ತಿಯರು ಇಂದು (ಬುಧವಾರ) ಭೇಟಿಯಾಗಿದ್ದಾರೆ.

ಪ್ರಧಾನಿ ನಿವಾಸದಲ್ಲಿ ನಡೆದ ಸಂವಾದದಲ್ಲಿ ಮಹಿಳಾ ಆಟಗಾರ್ತಿಯರನ್ನು ಅಭಿನಂದಿಸಿದ ಮೋದಿ, ಅದ್ಭುತ ಪ್ರದರ್ಶನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನವಿ ಮುಂಬೈಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಅಂತರದಿಂದ ಮಣಿಸಿದ ಹರ್ಮನ್ಪ್ರೀತ್ ಕೌರ್ ಬಳಗವು ಚೊಚ್ಚಲ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು.

2017ರ ವಿಶ್ವಕಪ್ ಬಳಿಕ ಪ್ರಧಾನಿ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡ ನಾಯಕಿ ಹರ್ಮನ್, ಅಂದು ಟ್ರೋಫಿ ಇಲ್ಲದೆ ಬಂದಿದ್ದೆವು. ಆದರೆ ಟ್ರೋಫಿ ಗೆದ್ದ ಬಳಿಕ ಮತ್ತೆ ಭೇಟಿಯಾಗುವುದಾಗಿ ಆಶಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಅವರ ಮಾತುಗಳು ಸದಾ ಸ್ಫೂರ್ತಿದಾಯಕವಾಗಿವೆ ಎಂದು ಉಪನಾಯಕಿ ಸ್ಮೃತಿ ಮಂದಾನ ಅಭಿಪ್ರಾಯಪಟ್ಟಿದ್ದಾರೆ.
.ವಿಶ್ವಕಪ್ ಗೆಲುವು: ಹಚ್ಚೆ ಹಾಕಿಸಿ ವಿಜಯವನ್ನು ಸಂಭ್ರಮಿಸಿದ ನಾಯಕಿ ಹರ್ಮನ್ಪ್ರೀತ್.ಐಸಿಸಿ ಟಿ20 ರ್ಯಾಂಕಿಂಗ್: ಅಭಿಷೇಕ್, ವರುಣ್ ಅಗ್ರಸ್ಥಾನ ಅಬಾಧಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.