ಇಬ್ಬರು ಮಕ್ಕಳ ತಾಯಿ 1ನೇ ತರಗತಿಗೆ ಸೇರ್ಪಡೆ

7

ಇಬ್ಬರು ಮಕ್ಕಳ ತಾಯಿ 1ನೇ ತರಗತಿಗೆ ಸೇರ್ಪಡೆ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಇಪ್ಪತ್ತೈದರ ಹರೆಯದ ಇಬ್ಬರು ಮಕ್ಕಳ ತಾಯಿ ಆಸ್ಮಾ ಎಂಬವರು ತಮ್ಮ ಪುಟಾಣಿ ಮಕ್ಕಳೊಂದಿಗೆ  1ನೇ ತರಗತಿಗೆ ಸೇರಿದ ವಿಲಕ್ಷಣ ಪ್ರಸಂಗ ಪಂಜಾಬ್ ಪ್ರಾಂತ್ಯದ  ಮಿಯಾನ್‌ವಲಿಯಲ್ಲಿ ನಡೆದಿದೆ.ತಾವು ವಿದ್ಯಾವಂತರಾಗಬೇಕು ಎಂಬ ದೀರ್ಘ ಕಾಲದ ಕನಸನ್ನು ನನಸು ಮಾಡುವ ಸಲುವಾಗಿ ಮಕ್ಕಳೊಂದಿಗೆ ತಾವೂ ತರಗತಿಗೆ ಹಾಜರಾಗುತ್ತಿರುವುದಾಗಿ ಅವರು ಹೇಳಿದ್ದಾರೆ. ಶಾಲೆಗೆ ಹೋಗುವ ತಮ್ಮ ಬಯಕೆಯನ್ನು ಹೆತ್ತವರು ಹತ್ತಿಕ್ಕಿದ್ದರು, ಆದರೆ ತಮ್ಮ ಪತಿ ಇದೀಗ ಮಕ್ಕಳೊಂದಿಗೆ ತಾವೂ ಶಾಲೆಗೆ ಹೋಗಿ ಅಕ್ಷರ ಕಲಿಯಲು ಪ್ರೇರೇಪಿಸಿದ್ದರಿಂದಲೇ ಈ ಕನಸು ಈಡೇರಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದ್ದನ್ನು ಉಲ್ಲೇಖಿಸಿ ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry