ಶಿರಹಟ್ಟಿ: ಎಲ್ಲಡೆ ಬಣ್ಣದಲ್ಲಿ ಮಿಂದೇ ಳುವ ಉತ್ಸಾಹದಲ್ಲಿದ್ದರೆ ತಾಲ್ಲೂಕಿನ ಮಾಗಡಿ, ಹೊಳಲಾಪುರ, ಪರಸಾಪುರ ಮತ್ತು ಚನ್ನಪಟ್ಟಣದ ಗ್ರಾಮದಲ್ಲಿ ಮಾತ್ರ ಹೋಳಿಹಬ್ಬ ನಿಷಿದ್ದ. ಹಲಿಗೆ ಬಡಿಯುವ ಅಥವಾ ಬಣ್ಣ ಎರಚುವ ಸಂಪ್ರದಾಯಕ್ಕೆ ಈ ಗ್ರಾಮಗಳಲ್ಲಿ ಅವಕಾಶವಿಲ್ಲ.

ಹಿನ್ನಲೆ: ಅಂದಾಜು ನೂರು ವರ್ಷ ಗಳ ಹಿಂದೆ ಹೋಳಿಹಬ್ಬ ಆಚರಿಸುವ ಸಂದರ್ಭದಲ್ಲಿ ಆಕಸ್ಮಿಕ ಅವಘಡದಿಂದ ಬೆಂಕಿ ಹತ್ತಿಕೊಂಡು ಅಪಾರ ಪ್ರಮಾಣದ ಹಾನಿ ಆಗಿತ್ತು ಎನ್ನಲಾಗಿದ್ದು, ಅಲ್ಲಿಂದ ಹೋಳಿ ಆಚರಿಸುವುದು ಬೇಡ ಎಂದು ಅಂದಿನ ಹಿರಿಯರು ನಿರ್ಣಯ ತಗೆದುಕೊಂಡಿದ್ದರು ಎಂದು ಪರಸಾಪುರ ಗ್ರಾಮದ ವೃದ್ದರಾದ ಯಲ್ಲಪ್ಪ ಜೋಗಿನ ಮತ್ತು ಹುಲಿಗೆಪ್ಪ ಈಳಿಗೇರ ಇತಿಹಾಸ ಮೆಲಕು ಹಾಕಿದರು.

ಮನೆ ಮುಂದೆ ರಂಗೋಲಿ ಇಲ್ಲ. ಹೊಸ್ತಿಲು ತೊಳೆಯುವುದಿಲ್ಲ. ಮನೆ ಯಲ್ಲಿ ಸಿಹಿ ತಿಂಡಿ ತಿನಿಸು ಸೇರಿದಂತೆ ಕನಿಷ್ಟ ಪಕ್ಷ ಹಲಿಗೆ ಶಬ್ದ ಸಹ ಗ್ರಾಮ ಗಳಲ್ಲಿ ಕಂಡುಬರುವುದಿಲ್ಲ. ಮಾಗಡಿ ಗ್ರಾಮದಲ್ಲಿ ಅವಘಡ ಉಂಟಾದಾಗ ಪಾರಾಗಿ ಬಂದ ಪರಸಾಪುರ ಮತ್ತು ಹೋಳಾದ ಹೊಳಲಾಪುರ ಜನ ಎಂಬ ನಾಣ್ಣುಡಿ ಇಂದಿಗೂ ಇದೆ.

ಗ್ರಾಮದ ಜನತೆಗೆ ಬೇರೆ ಯಾವುದಾ ದರೂ ಸ್ಥಳದಲ್ಲಿ ಬಣ್ಣ ಹಾಕಿದರೆ ಆ ಅಂಗಿಯನ್ನು ಅಲ್ಲೆ ಕಳಚಿ ಬೀಸಾಕುತ್ತೇವೆ. ಇಲ್ಲವೇ ಬಣ್ಣ ಹಾಕುವವರಿಗೆ ಹಣ ಕೊಟ್ಟು ಪಾರಾಗಿ ಬರುವುದು ಗ್ರಾಮ ಸ್ಥರ ವಿಶೇಷತೆ.

ನಮಗೂ ಹಲಿಗೆ ಹೊಡಿಯಬೇಕು. ಬಣ್ಣ ಆಡಬೇಕು ಅಂತಾ ಆಸೆ ಆಗುತ್ತೆ. ಆದರೆ ಹಿರಿಯರು ಹಾಕಿದ ಮಾರ್ಗ ದರ್ಶನಲ್ಲಿ ಮುಂದುವರೆಯುವುದಾಗಿ ಗ್ರಾಮದ ಯುವಕರಾದ ಪರಶುರಾಮ ಈಳಿಗೇರ, ಗೂಳಪ್ಪ ಜೋಗಿ, ಜಗದೀಶ ಈಳಿಗೇರ, ಈರಪ್ಪ ತಳವಾರ, ಹನ ಮಂತಪ್ಪ ಬೀರಗಣ್ಣವರ ಹೇಳುತ್ತಾರೆ.

ಮಾಗಡಿ ಗ್ರಾಮದಲ್ಲಿ ಯುಗಾದಿ ದಿನದಂದು ಬಣ್ಣ ಆಡುವ ಸಂಪ್ರದಾಯ ಮಾತ್ರ ಇದೆ. ಆದರೆ ಹಲಿಗೆ ಸಪ್ಪಳಕ್ಕೆ ಮಾತ್ರ ಖಂಡಿತ ಅವಕಾಶವಿಲ್ಲ.

ಶಿರಹಟ್ಟಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಖಾನಾಪುರ ಗ್ರಾಮದಲ್ಲಿ ಬಣ್ಣದ ಹಬ್ಬದಿಂದ ದೂರ. ೩೮ ವರ್ಷ ಗಳ ಹಿಂದೆ ಹೋಕುಳಿ ಸಂದರ್ಭದಲ್ಲಿ ಎರಡು ಪಂಗಡಗಳ ನಡುವೆ ಆದ ಮನಸ್ತಾಪವೇ ಇದಕ್ಕೆ ಕಾರಣ. ಆದ್ದರಿಂದ ಬಣ್ಣದ ದಿನದಂದು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡು ಹಿಂಸೆಗೆ ಅವಕಾಶ ನೀಡದೇ ಪರಸ್ಪರ ಪ್ರೀತಿ ಬೆಸೆಯುವ ನಿಟ್ಟಿನಲ್ಲಿ ಸಾಗುತ್ತಿ ರುವುದಾಗಿ ಖಾನಾಪುರ ಗ್ರಾಮದ ಬಸಪ್ಪ ಬೆಳವಟಗಿ, ಬಸಪ್ಪ ಕರಮುಡಿ, ಶಂಕ್ರಪ್ಪ ಬೆಳವಟಗಿ, ಕಲಂದರ ದೊಡ್ಡಮನಿ ಗಾಣಿಗೇರ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.