ಉಗ್ರರ ಕೈವಾಡ ಅಲ್ಲಗಳೆಯುವಂತಿಲ್ಲ

ಶುಕ್ರವಾರ, ಮೇ 24, 2019
26 °C

ಉಗ್ರರ ಕೈವಾಡ ಅಲ್ಲಗಳೆಯುವಂತಿಲ್ಲ

Published:
Updated:

ಆಗ್ರಾ, (ಪಿಟಿಐ/ಐಎಎನ್‌ಎಸ್): ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಸಂಭವಿಸಿದ ಸ್ಫೋಟದ ಹಿಂದೆ ಉಗ್ರರ ಕೈವಾಡದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಉತ್ತರ ಪ್ರದೇಶದ ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.`ಆಸ್ಪತ್ರೆಯ ಸ್ವಾಗತ ಕೋಣೆಯ ಪ್ರದೇಶದಲ್ಲಿ ನಡೆದ ಸ್ಫೋಟವನ್ನು ತನಿಖಾ ಸಂಸ್ಥೆಗಳು ಎಲ್ಲ ಕೋನಗಳಿಂದ ಪರಿಶೀಲಿಸುತ್ತಿವೆ~ ಎಂದು ಉತ್ತರ ಪ್ರದೇಶದ ವಿಶೇಷ ಪೊಲೀಸ್ ಮಹಾ ನಿರ್ದೇಶಕ ಬ್ರಿಜ್ ಲಾಲ್ ಅವರು ಹೇಳಿದ್ದಾರೆ.ಕಡಿಮೆ ತೀವ್ರತೆಯ ಐಇಡಿ ಬಳಕೆ: ಸ್ಫೋಟಕ್ಕೆ ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ (ಐಇಡಿ)~ವನ್ನು ಬಳಸಲಾಗಿತ್ತು ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ. ದಾಳಿಯಲ್ಲಿ 4 ಜನರು ಗಾಯಗೊಂಡಿದ್ದರು. `ಪ್ರಾಥಮಿಕ ತನಿಖೆಗಳ ಪ್ರಕಾರ ಸ್ಫೋಟಕದಲ್ಲಿ ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನದ ಪಟ್ಟಿಯೊಂದಿಗೆ ಉಕ್ಕನ್ನು ಬಳಸಲಾಗಿತ್ತು~ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry