ಗುರುವಾರ , ಮೇ 13, 2021
35 °C

ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ:ಸೂಪರ್‌ಸೀಡ್ಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಿ: ಸಮೀಪದ ಕುದರೂರು ಗ್ರಾಮ ಪಂಚಾಯ್ತಿ ಉದ್ಯೋಗ ಖಾತ್ರಿ ಭ್ರಷ್ಟಾಚಾರವನ್ನು ಖಂಡಿಸಿ ಜನಪರ ವೇದಿಕೆ ಬುಧವಾರ ಸಂಘಟಿಸಿದ ಪ್ರತಿಭಟನಾ ಮೆರವಣಿಗೆಗೆ ಭಾರೀ ಜನಸ್ಪಂದನೆ ವ್ಯಕ್ತವಾಯಿತು.ಹಾರಿಗೆ ಸರ್ಕಲ್‌ನಿಂದ ಕುದರೂರು ಗ್ರಾಮ ಪಂಚಾಯ್ತಿವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ್ಙ 20 ಲ್ಷಕಕ್ಕೂ ಹೆಚ್ಚು ಮೊತ್ತಕ್ಕೆ ನಕಲಿ ಮಾನವ ದಿನಗಳನ್ನು ಎಂಇಎಸ್ ದಾಖಲಿಸಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಜಿಲ್ಲಾ ಪಂಚಾಯ್ತಿ ರಕ್ಷಣೆ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಖಾತ್ರಿಯಲ್ಲಿ ಭ್ರಷ್ಟಾಚಾರ ನಡೆದು 15 ದಿನಗಳು ಕಳೆದರೂ ಕೂಡ ಜಿಲ್ಲಾ ಮಟ್ಟದ ಒಬ್ಬ ಅಧಿಕಾರಿಯೂ ಪರಿಶೀಲನೆಗೆ ಆಗಮಿಸದಿರುವುದು ಇದಕ್ಕೆ ಸಾಕ್ಷಿಯಾಗಿದ್ದು, ಸುಳ್ಳು ಎಂಬಿಗಳನ್ನು ದಾಖಲಿಸಿದ ಎಂಜಿನಿಯರ್‌ಗಳ ವಿರುದ್ಧ ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.ಗ್ರಾಮ ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆಯನ್ನು ದುರುಪಯೋಗಪಡಿಸಿಕೊಂಡಿದ್ದು ಪಂಚಾಯತ್ ರಾಜ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ತಕ್ಷಣವೇ ಗ್ರಾಮ ಪಂಚಾಯ್ತಿಯನ್ನು ಸೂಪರ್‌ಸೀಡ್ ಮಾಡಿ, ಆಡಳಿತಾಧಿಕಾರಿ ನೇಮಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಶಶಿಕುಮಾರ್, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶೀಘ್ರ ಕ್ರಮ ಜರುಗಿಸುವ ಭರವಸೆ ನೀಡಿದರು.ಆದರೆ, ಇದನ್ನು ಒಪ್ಪದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಆಗಮಿಸಬೇಕು. ತಕ್ಷಣವೇ ಅಮಾನತು ಆದೇಶ ಹೊರಡಿಸಬೇಕು ಎಂದು ಪಟ್ಟು ಹಿಡಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಡಾ.ಶಶಿಕುಮಾರ್ 24 ಗಂಟೆಯ ಒಳಗೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಹಾಗೂ ಈ ಬಗ್ಗೆ ಅಗತ್ಯ ವರದಿಯನ್ನು ಜಿಲ್ಲಾ ಪಂಚಾಯ್ತಿಗೆ ಸಲ್ಲಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಅಮಾನತು ಆದೇಶ ಹೊರಡಿಸುವವರೆಗೆ ಗ್ರಾಮ ಪಂಚಾಯ್ತಿ ಎದುರು ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ನಿರ್ಧಾರ ಪ್ರಕಟಿಸಿದರು.ಅಗತ್ಯ ಮಾಹಿತಿಯನ್ನು ತಿಳಿಸಲು ಅನುಕೂಲ ಆಗುವಂತೆ ಡಾ.ಶಶಿಕುಮಾರ್ ಅವರಿಗೆ ಧರಣಿ ಸ್ಥಳದಿಂದ ತೆರಳಲು ತಾತ್ಕಾಲಿಕ ಅನುಮತಿ ನೀಡಲಾಯಿತು.ಪ್ರತಿಭಟನೆ ನೇತೃತ್ವವನ್ನು ಜಿನದತ್ತ ಜೈನ್, ಮಹಾವೀರ್ ಜೈನ್, ಸಂತೋಷ್ ಶೆಟ್ಟಿ, ಗಣೇಶ್, ರವಿ, ರಘುಪತಿ ವಹಿಸಿದ್ದರು.ಸಾಗರ ಗ್ರಾಮಾಂತರ ಠಾಣೆ  ಸಿಪಿಐ ಮಾದಪ್ಪ ಸ್ಥಳದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.