ಚಿಕ್ಕಮಗಳೂರು: `ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಮಾಡಬೇಕೆನ್ನುವುದಕ್ಕಿಂತಲೂ ಪಕ್ಷ ಉಳಿಸಲು ಈ ಉಪ ಚುನಾವಣೆಯನ್ನು ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಬೇಕು~ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾರ್ಯಕರ್ತರಿಗೆ ಮನವಿ ಮಾಡಿದರು.

ನಗರದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ? ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಜೆಡಿಎಸ್ ಜನರ ಮನಸ್ಸಿನಲ್ಲಿದೆ. ಚುನಾವಣೆ ಬಂದಾಗ ತನ್ನ ಶಕ್ತಿ ಪ್ರದರ್ಶಿಸುತ್ತದೆ ಎಂದು ಹೇಳಿದರು.

ಕಳೆದ 2008ರ ಚುನಾವಣೆಯಲ್ಲಿ ಜೆಡಿಎಸ್ ಮೂರು ಎಂ.ಪಿ ಸ್ಥಾನ ಗೆದ್ದರೆ ಕಾಂಗ್ರೆಸ್ 6 ಸ್ಥಾನ ಪಡೆಯಿತು. ಅದು ಹೇಗೆ ಆರು ಸ್ಥಾನಗಳಲ್ಲಿ ಜಯ ಗಳಿಸಿತು ಎನ್ನುವುದನ್ನು ಈಗ ವಿಶ್ಲೇಷಣೆ ಮಾಡುವುದಿಲ್ಲ. ಆ ವಿಶ್ಲೇಷಣೆ ಇಲ್ಲಿ ಅಪ್ರಸ್ತುತ. ಒಂದಲ್ಲ ಒಂದು ರೀತಿ ಯಾರು ಯಾರ ನೆರಳಿನಲ್ಲಿ ಗೆದ್ದಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಬಿಜೆಪಿಯ ಆಪರೇಷನ್ಗೆ ಸಿಲುಕಿ ನಡೆದ 8 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ 3ರಲ್ಲಿ ಪಕ್ಷ ಜಯಗಳಿಸಿದೆ. ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಲಿಲ್ಲ. ಪಕ್ಷ ರಾಜ್ಯದಲ್ಲಿ ಎಲ್ಲಿದೆ? ಎಂಬ ಉತ್ತರವನ್ನು ಟೀಕಿಸುವವರೇ ಕಂಡುಕೊಳ್ಳಬೇಕೆಂದರು.

ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಕಾಂಗ್ರೆಸ್ ಮುಖಂಡರಲ್ಲಿ ನಡುಕ ಹುಟ್ಟಿಸಿದೆ. ಹಾಗಾಗಿ ಪಕ್ಷ ಟೀಕಿಸಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಕುಡಿಯುವ ನೀರು, ರಸ್ತೆ ಕೊಡಲು ಸಾಧ್ಯವಾಗಿಲ್ಲವೆಂದು ಸರ್ಕಾರದ ಕಾರ್ಯವೈಖರಿ ಟೀಕಿಸಿದರು.

ಸಂಸದ ಎನ್.ಚೆಲುವರಾಯಸ್ವಾಮಿ ಮಾತನಾಡಿ, ಈ ಉಪಚುನಾವಣೆ ಯಾವುದೇ ಪಕ್ಷದ ಭವಿಷ್ಯ ನಿರ್ಧರಿಸಲಿದೆ. ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ರಾಷ್ಟ್ರೀಯ ಪಕ್ಷಗಳು ದೇಶ ಆಳಲು ಅರ್ಹರಲ್ಲ ಎಂಬುದನ್ನು ಸಾರಿದೆ ಎಂದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್.ಎಚ್.ದೇವರಾಜ್, ಮಹಿಳಾ ವಿಭಾಗ ಮುಖ್ಯಸ್ಥೆ ಪದ್ಮಾತಿಮ್ಮೇಗೌಡ ಮಾತನಾಡಿದರು. ರಾಜ್ಯ ಮುಖಂಡರಾದ ಕೃಷ್ಣಪ್ಪ, ರಾಮಯ್ಯ, ಮಂಜುನಾಥ, ಹುಚ್ಚಪ್ಪ, ಪುಟ್ಟರಾಜು, ಅನ್ನದಾನಿ, ಎಂ.ಡಿ.ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.