ಬೆಂಗಳೂರು: ಸರಕುಗಳ ಸಾಗಾಟಕ್ಕೆ ವ್ಯಾಪಾರಿಗಳಿಗೆ ಅವಶ್ಯಕವಾದ ‘ಸುಗಮ’ ಪರವಾನಗಿ ನೀಡಲು ಆರಂಭಿಸಲಾಗಿರುವ ‘ಎಂ-ಸುಗಮ’ಕ್ಕೆ (ಮೊಬೈಲ್- ಸುಗಮ) ಉತ್ತಮವಾದ ಪ್ರತಿಕ್ರಿಯೆ ದೊರೆತಿದೆ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ಹಿರಿಯ ತಂತ್ರಜ್ಞ ನಿರ್ದೇಶಕ ಪಿ.ವಿ. ಭಟ್ ಹೇಳಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ನಗರದಲ್ಲಿ ಆಯೋಜಿಸಿದ್ದ ‘ಎಂ-ಸುಗಮ’ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ತಿಂಗಳಿನಿಂದ ಆರಂಭಿಸಲಾಗಿರುವ ಈ ವ್ಯವಸ್ಥೆಗೆ ಈಗಾಗಲೇ ಸಾಕಷ್ಟು ಜನ ವ್ಯಾಪಾರಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಹೊರ ರಾಜ್ಯಗಳಿಂದ ಖರೀದಿ ಮಾಡುವ ಹಾಗೂ ಹೊರ ರಾಜ್ಯಗಳಿಗೆ ಸರಕುಗಳನ್ನು ಮಾರಾಟ ಮಾಡಲು ‘ಸುಗಮ’ ಪರವಾನಗಿ ಅವಶ್ಯಕ. ಇದು ಸುಲಭವಾಗಿ ವ್ಯಾಪಾರಿಗಳಿಗೆ ದಕ್ಕಲಿ ಎನ್ನುವ ದೃಷ್ಟಿಯಿಂದ ಮೊಬೈಲ್ನಲ್ಲಿಯೂ ಈ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

‘ಮೊಬೈಲ್ನಲ್ಲಿ ತಮ್ಮ ಸರಕು ಹಾಗೂ ಇತರೆ ವಿವರಗಳನ್ನು ನೀಡಿ, 92433 55223 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಿದರೆ ಸುಗಮ ಸಂಖ್ಯೆ (ವಿಶಿಷ್ಟ ಸಂಖ್ಯೆ) ದೊರೆಯುತ್ತದೆ. ಇದನ್ನು ಮಾರಾಟ/ಖರೀದಿ ಬಿಲ್ ಮೇಲೆ ನಮೂದಿಸಿದರೆ ಸರಕು ಸಾಗಾಟ ಸಲೀಸಾಗಿ ನಡೆಯುತ್ತದೆ’ ಎಂದರು.ಸರಕುಗಳ ಮೇಲೆ ತೆರಿಗೆ ರಿಯಾಯಿತಿ ನೀಡಲು ವಾಣಿಜ್ಯ ಮಾರಾಟ ತೆರಿಗೆಗಳ ಇಲಾಖೆಯು ನೀಡುವ ‘ಸಿ’ ಫಾರ್ಮ್ ಅನ್ನು ವ್ಯಾಪಾರಿಗಳು ಮೊಬೈಲ್ನಲ್ಲಿಯೇ ದೃಢೀಕರಿಸುವ ವ್ಯವಸ್ಥೆ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.